ಸಿದ್ದಾಪುರ: ತಾಲೂಕಿನ ಸಂಪಗೋಡ-ಭಂಡಾರಿಕೇರಿಯ ಶ್ರೀ ದುರ್ಗಾವಿನಾಯಕ ಕೃಷಿಕ ಯುವಕ ಸಂಘ ವಾಜಗದ್ದೆಯ ‘ಸುವರ್ಣ ಸಂಭ್ರಮ’ ಕಾರ್ಯಕ್ರಮವು ಡಿ.28, ಶನಿವಾರದಂದು ಶ್ರೀ ದುರ್ಗಾವಿನಾಯಕ ಸಭಾಭವನ, ವಾಜಗದ್ದೆ, ಡಾ. ಆರ್.ಪಿ. ಹೆಗಡೆ ವೇದಿಕೆಯಲ್ಲಿ ನಡೆದಿದೆ.
ಬೆಳಗ್ಗೆ 9 ಗಂಟೆಯಿಂದ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು, 10.30 ಕ್ಕೆ ಸುವರ್ಣ ಸಂಭ್ರಮ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಡೆಯಲಿದೆ. ಉದ್ಘಾಟನೆಯನ್ನು ಶಿಕ್ಷಣ ಪ್ರಸಾರಕ ಸಮಿತಿ ಅಧ್ಯಕ್ಷ ಶಶಿಭೂಷಣ್ ಹೆಗಡೆ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಯುವಕ ಸಂಘದ ಸಂಸ್ಥಾಪಕ ಅಧ್ಯಕ್ಷ ಪಿ.ವಿ. ಹೆಗಡೆ ಪೇಟೇಸರ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಭೀಮಣ್ಣ ನಾಯ್ಕ್, ಶಿರಸಿ ಡೆವಲಪ್ಮೆಂಟ್ ಸೊಸೈಟಿ ಕೃಷಿ ಸಲಹೆಗಾರ ಡಾ. ವಿ.ಎಮ್. ಹೆಗಡೆ, ತೋಟಗಾರಿಕೆ ನಿರ್ದೇಶಕ ಅರುಣ್ ಎಚ್.ಜಿ. ಅಭ್ಯಾಗತರಾಗಿ, ವಾಜಗದ್ದೆ ಶ್ರೀ ದುರ್ಗಾವಿನಾಯಕ ದೇವಸ್ಥಾನ ಮೊಕ್ತೇಸರ ಶ್ರೀಧರ ಮಂ. ಹೆಗಡೆ ಪೇಟೇಸರ ಉಪಸ್ಥಿತರಿರಲಿದ್ದಾರೆ.
ಮಧ್ಯಾಹ್ನ 2.30ರಿಂದ ಹಿಂದೂಸ್ಥಾನಿ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ಶ್ರೀಮತಿ ಮೇಧಾ ಭಟ್, ಅಗ್ಗೆರೆ, ಶ್ರೀಮತಿ ಆರಾಧನಾ ಹೆಗಡೆ, ಭಂಡಾರಕೇರಿ ಗಾಯನದಲ್ಲಿ, ಅಜಯ ಹೆಗಡೆ ವರ್ಗಾಸರ ಹಾರ್ಮೋನಿಯಂನಲ್ಲಿ, ತಬಲಾದಲ್ಲಿ ಶಂಕರ ಹೆಗಡೆ ಶಿರಸಿ, ವಿನಾಯಕ ಹೆಗಡೆ ಸಾಗರ, ಮಂಜೀರಾದಲ್ಲಿ ಅನಂತಮೂರ್ತಿ ಭಟ್ಟ ಮತ್ತಿಘಟ್ಟ ಸಹಕರಿಸಲಿದ್ದಾರೆ.
ಸಂಜೆ 5.30 ರಿಂದ ಸಂಘದ ನೆನಪು-ಮೆಲುಕು ಗೌರವ ಸಮರ್ಪಣೆ, ಸ್ಮರಣಿಕೆ ವಿತರಣೆ ನಡೆಯಲಿದ್ದು, ಅಧ್ಯಕ್ಷತೆಯನ್ನು ಸಂಘದ ಸಂಸ್ಥಾಪಕ ಕಾರ್ಯದರ್ಶಿ ಭಾಸ್ಕರ ಹೆಗಡೆ ಭಂಡಾರಕೇರಿ ವಹಿಸಲಿದ್ದಾರೆ. ಸಂಘ ಸ್ಥಾಪನಾ ಪ್ರೇರಕ ಗೋಪಾಲ ಹೆಗಡೆ ವಾಜಗದ್ದೆ, ಖಜಾಂಚಿ ಸೀತಾರಾಮ ಹೆಗಡೆ ಸುಳಗಾರ, ಮೊಕ್ತೇಸರ ಶ್ರೀಧರ ಮಂ. ಹೆಗಡೆ ಪೇಟೇಸರ, ಗ್ರಾ.ಪಂ.ಸದಸ್ಯ ಅನಂತ ಹೆಗಡೆ ಹೊಸಗದ್ದೆ, ಶಿಕ್ಷಕ ಕೆ. ಎನ್. ಹೆಗಡೆ ಬಳ್ಕೂರು ಉಪಸ್ಥಿತರಿರಲಿದ್ದಾರೆ.
ಸಂಜೆ 6.30 ರಿಂದ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಯುವಕ ಸಂಘದ ಅಧ್ಯಕ್ಷ ಗಣಪತಿ ಹೆಗಡೆ ಸುಳಗಾರ ವಹಿಸಲಿದ್ದಾರೆ. ಯಲ್ಲಾಪುರ ಸಂಕಲ್ಪದ ಪ್ರಮೋದ ಹೆಗಡೆ, ಮಾಜಿ ಶಾಸಕ ವೈ. ಎಸ್. ವಿ. ದತ್ತಾ, ಸಾಹಿತಿ ಸುಬ್ರಾಯ ಮತ್ತಿಹಳ್ಳಿ, ತಾ.ಪಂ ಮಾಜಿಅಧ್ಯಕ್ಷ ಸುಧೀರ್ ಗೌಡರ್ ಉಪಸ್ಥಿತರಿರಲಿದ್ದಾರೆ.
ರಾತ್ರಿ 9.30 ರಿಂದ ಊರವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ‘ಚಕ್ರವ್ಯೂಹ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಸರ್ವರೂ ಆಗಮಿಸಿ ಕಾರ್ಯಕ್ರಮ ಚಂದಗಾಣಿಸಲು ಸಂಘಟಕರು ಪ್ರಕಟಣೆಯಲ್ಲಿ ಕೋರಿದ್ದಾರೆ.