ಜೋಯಿಡಾ : ತಾಲೂಕು ದಲಿತ ಸಂಘರ್ಷ ಸಮಿತಿಯ ಆಶ್ರಯದಡಿ ಜೋಯಿಡಾ ತಾಲೂಕು ಕೇಂದ್ರದಲ್ಲಿರುವ ಶಿವಾಜಿ ವೃತ್ತದಲ್ಲಿ ಇಂದು ಶುಕ್ರವಾರ ಸಂಜೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ 68ನೇ ಮಹಾ ಪರಿನಿರ್ವಾಣ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ಗೌರವವನ್ನು ಸಲ್ಲಿಸಿ, ಮೇಣದ ದೀಪ ಹಚ್ಚಿ ನಮನಗಳನ್ನು ಸಲ್ಲಿಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ಜೋಯಿಡಾ ತಾಲೂಕು ಅಧ್ಯಕ್ಷರಾದ ರಾಜೇಶ ಎಸ್.ಗಾವಡೆ ಸಂವಿಧಾನ ಎನ್ನುವ ಮಹಾನ್ ಪರಮ ಗ್ರಂಥವನ್ನು ಈ ದೇಶಕ್ಕೆ ಕೊಟ್ಟ ವಿಶ್ವಚೇತನ ಡಾ.ಬಿ.ಆರ್ ಅಂಬೇಡ್ಕರ್ ಅವರ ತತ್ವ ಆದರ್ಶಗಳನ್ನು ನಾವು ನೀವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸದೃಢ ಸಮಾಜ ನಿರ್ಮಾಣಕ್ಕೆ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಮಿತಿಯ ಪ್ರಮುಖರುಗಳಾದ ಅಜಿತ ಹರಿಜನ, ನಾಗರಾಜ ಹರಿಜನ, ಸಂಜಯ ಹರಿಜನ, ಪ್ರಸಾದ ಹರಿಜನ, ಮಂಜು ಬಂಡಿವಡ್ಡರ, ಆನಂದಿ.ಎಲ್.ಕಾಂಬಳೆ, ರೇಣುಕಾ ಕಾನಗೋಡ, ಸುಪ್ರಿಯಾ ಗಾವಡೆ, ಪ್ರಕಾಶ ಕಾಂಬಳೆ ಹಾಗೂ ಸ್ಥಳೀಯ ಸಾರ್ವಜನಿಕರು ಉಪಸ್ಥಿತರಿದ್ದರು.