ಸಿದ್ದಾಪುರ: ತಾಲೂಕಿನ ಕ್ಯಾದಗಿ ವಲಯ ಅರಣ್ಯವ್ಯಾಪ್ತಿಯ ಅಳ್ಳಿಮಕ್ಕಿ ನಾರಾಯಣ ನಾಯ್ಕ ಅವರ ಮನೆಯ ಮೇಲೆ ದಾಂಡೇಲಿಯ ಅರಣ್ಯ ಸಂಚಾರಿ ದಳದವರು ಶನಿವಾರ ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿದ್ದ ಚಿರತೆ ಚರ್ಮವನ್ನು ವಶಪಡಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.
ದಾಂಡೇಲಿ ಅರಣ್ಯ ಸಂಚಾರಿದಳದ ಪಿಎಸ್‌ಐ ಯಲ್ಲಪ್ಪ ಎಸ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಬಹುಕಾಂತ್ ನಾಯಕ್, ಪ್ರಶಾಂತ ನಾಯಕ್, ಗುರುರಾಜ್ ಮಡಿವಾಳ, ಮಂಜುನಾಥ ಪಟಗಾರ, ಸತೀಶ ಗುಡೆ ಇವರು ದಾಳಿನಡೆಸಿದ್ದರು.