ಅಂಕೋಲಾ: ಭಾರತೀಯ ಕಿಸಾನ್ ಸಂಘದ ಉತ್ತರಕನ್ನಡ ಜಿಲ್ಲಾ ಘಟಕದ ಮುಂದಿನ ಮೂರು ವರ್ಷದ ಅವಧಿಗೆ ಅಧ್ಯಕ್ಷರಾಗಿ ಕನಕನಹಳ್ಳಿಯ ಶಿವರಾಮ ಗಾಂವ್ಕಾರ್ ಪುನರಾಯ್ಕೆಗೊಂಡಿದ್ದು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ನರಸಿಂಹ ಸಾತೊಡ್ಡಿ ಯಲ್ಲಾಪುರ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಅಂಕೋಲಾ ಪಟ್ಟಣದಲ್ಲಿ ನಡೆದ ಭಾರತೀಯ ಕಿಸಾನ್ ಸಂಘದ ಉ.ಕ ಜಿಲ್ಲಾ ಸಮಿತಿಯ ಸಭೆಯಲ್ಲಿ ಈ ಆಯ್ಕೆಯ ಪ್ರಕ್ರಿಯೆ ನಡೆಯಿತು.
ಉಪಾಧ್ಯಕ್ಷರುಗಳಾಗಿ ನಾರಾಯಣ ಭಟ್ಟ ಭಟ್ಕಳ, ಡಿ.ಎಂ.ನಾಯ್ಕ್ ಹೊನ್ನಾವರ,ಶ್ರೀಧರ ಢೋರಿ ಮುಂಡಗೋಡ ಆಯ್ಕೆಗೊಂಡಿದ್ದು ಕೋಶಾಧ್ಯಕ್ಷರಾಗಿ ಗೋಪಾಲಕೃಷ್ಣ ರಾ.ಭಟ್ಟ ಬಾಳೆಗದ್ದೆ ಪುನರಾಯ್ಕೆಗೊಂಡಿದ್ದಾರೆ.ಕಾರ್ಯದರ್ಶಿಗಳಾಗಿ ಗಣಪತಿ ಎಸ್. ನಾಯ್ಕ ಕುಮಟಾ,ಆರ್.ಎನ್.ಹೆಗಡೆ ಗುಂದ ಜೋಯಿಡಾ,ಯುವ ಪ್ರಮುಖರಾಗಿ ಮಾಬ್ಲೇಶ್ವರ ಕೊಡ್ಲಗದ್ದೆ,ಹಾಗೂ ಮಹಿಳಾ ಪ್ರಮುಖರಾಗಿ ವೀಣಾ ನಾಯ್ಕ ಯಲ್ಲಾಪುರ,ಹಾಗೂ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಶ್ರೀಕಾಂತ ಹೆಗಡೆ ಉತ್ತರಕೊಪ್ಪ,ಮಂಜುನಾಥ ನಾಯ್ಕ್ ಹೊನ್ನಾವರ,ವಿಷ್ಣು ಈಶ್ವರ ಹೆಗಡೆ ಹೊನ್ನಾವರ,ಅಣ್ಣಪ್ಪ ಸಿದ್ದಿ ಅಂಕೋಲಾ,ಗೋಪಾಲ ಭಟ್ಟ ಶಿವಪುರ,ಶ್ರೀಧರ ಭಾಗ್ವತ್ ಗುಂದ,ರಾಮಚಂದ್ರ ವೆಂ.ಕವಡಿಕೆರೆ,ಸುರೇಶ ಐಹೊಳೆ ಮುಂಡಗೋಡ, ನಾಗರಾಜ ಮಾರವಳ್ಳಿ,ನಾಗೇಶ ಗಣಪಯ್ಯ ನಾಯ್ಕ್ ಮುರೂರು,ವೀಣಾ ಸಿದ್ದಿ ಕನಕನಹಳ್ಳಿ,ಇವರುಗಳು ಆಯ್ಕೆಯಾಗಿದ್ದಾರೆ.
ಸಮಿತಿಯ ಸಭೆ: ಉ.ಕ. ಜಿಲ್ಲಾ ಸಮಿತಿಯ ಸಭೆಗೆ ಚುನಾವಣಾ ವೀಕ್ಷಕರಾಗಿ ಆಗಮಿಸಿದ್ದ ಉತ್ತರ ಪ್ರಾಂತ ಅಧ್ಯಕ್ಷ ವಿವೇಕಮೋರೆ ಮಾತನಾಡಿ,ಉತ್ತರ ರಾಜ್ಯಗಳಲ್ಲಿ ಕಿಸಾನ್ ಸಂಘದ ಚಟುವಟಿಕೆಗಳು ಉತ್ತಮವಾಗಿ ನಡೆಯುತ್ತಿದ್ದು ಅದೇ ರೀತಿ ದಕ್ಷಿಣ ರಾಜ್ಯದಲ್ಲೂ ಕಿಸಾನ್ ಸಂಘ ಬಲಗೊಳ್ಳಬೇಕು.ಈ ನಿಟ್ಟಿನಲ್ಲಿ ಈ ಸಲ ಯಶಸ್ವಿಯಾಗಿ ಸದಸ್ಯತಾ ಅಭಿಯಾನ ಮುಗಿಸಿ ಗ್ರಾಮಸಮಿತಿಗಳನ್ನು ರಚಿಸಲಾಗಿದೆ.ಈಗ ನೂತನವಾಗಿ ಆಯ್ಕೆಯಾದ ಸಮಿತಿ ಜಿಲ್ಲೆಯ ರೈತರ ಧ್ವನಿಯಾಗಿ ಕೆಲಸ ಮಾಡಬೇಕು.ಜಿಲ್ಲೆಯ ಹೆಚ್ಚಿನ ತಾಲೂಕುಗಳಲ್ಲಿ ಸಂಘದ ಚಟುವಟಿಕೆ ಚೆನ್ಬಾಗಿ ನಡೆಯುತ್ತಿರುವ ಬಗ್ಗೆ ಹೆಮ್ನೆಯಿದೆ ಎಂದರು.ಉತ್ತರ ಪ್ರಾಂತ ಸಂಘಟನಾ ಕಾರ್ಯದರ್ಶಿ ಪುಟ್ಟಸ್ವಾಮಿ ಆಯ್ಕೆ ಪ್ರಕ್ರಿಯೆ ನಡೆಸಿ ಮಾತನಾಡಿ,ಜೋಯಿಡಾ ತುದಿಯಿಂದ ಭಟ್ಕಳದವರೆಗೂ ಕಿಸಾನ್ ಸಂಘದ ಸಮಿತಿಗಳು ರಚನೆಯಾಗಿದೆ.ನಮಗೆ ನೀಡಿರುವ ಜವಾಭ್ದಾರಿ ಮೂಲಕ ಇನ್ನಷ್ಟು ಬಲಗೊಳಿಸಿ ರೈತನ ಬೆನ್ಬೆಲುಬಾಗಿ ನಿಲ್ಲಬೇಕು ಎಂದ ಅವರು ಡಿ.೧೬ ಮತ್ತು ೧೭ ಎರಡು ದಿನಗಳ ಕಾಲ ವಿಜಯಪುರದಲ್ಲಿ ಪ್ರಾಂತ ಅಧಿವೇಶನ ನಡೆಯಲಿದ್ದು ಅದರ ಯಶಸ್ವಿಯಲ್ಲಿ ತಾವುಗಳು ಭಾಗಿಯಾಗಬೇಕೆಂದು ತಿಳಿಸಿದರು. ನೂತನ ಅಧ್ಯಕ್ಷ ಶಿವರಾಮ ಗಾಂವ್ಕಾರ್ ಮಾತನಾಡಿ,ನಮ್ಮ ಸಂಘಟನೆಯ ವೇಗವನ್ನು ಹೆಚ್ಚಿಸಲು ಮುಂದಡಿಯಿಡಲಿದ್ದೇವೆ ಎಂದರು.
ಪ್ರಧಾನ ಕಾರ್ಯದರ್ಶಿ ನರಸಿಂಹ ಸಾತೊಡ್ಡಿ ಮಾತನಾಡಿ, ಜಿಲ್ಲೆಯಲ್ಲಿ ಯಾವೊಬ್ಬ ರೈತರಿಗೆ ತೊಂದರೆಯಾದರೂ ಸಂಘ ಅವರೊಟ್ಟಿಗೆ ನಿಲ್ಲುತ್ತದೆ.ಯಾವುದೇ ಇಲಾಖೆ ಅಧಿಕಾರಿಗಳಿಂದ ಕಿರುಕುಳ,ಸಮಸ್ಯೆಗಳಾದ ನಮ್ಮ ಗಮನಕ್ಕೆ ತನ್ನಿ. ಯಾವೊಬ್ಬ ರೈತರು ನಮ್ಮ ಕಾರ್ಯಕರ್ತರು ತಲೆಬಗ್ಗಸಿ ನಡೆಯಬೇಕಾದ ಅಗತ್ಯವಿಲ್ಲ ಎಂದರು.ಪ್ರಾಂತ ಕಾರ್ಯದರ್ಶಿ ಬಾ.ನಾ.ಮಾಧವ ಪ್ರಾಸ್ತಾವಿಕಗೈದು ಸಮಿತಿಯ ರಚನೆ,ಜವಾಭ್ದಾರಿ ನಿರ್ವಹಣೆ ಕುರಿತು ವಿವರಿಸಿದರು. ಸಭೆಯಲ್ಲಿ ಸರಕಾರದ ವಕ್ಫ್ ನೀತಿ, ರೈತರ ಬಗ್ಗೆ ಸರಕಾರದ ಧೋರಣೆ,ಕಾಡುಪ್ರಾಣಿ ಹಾವಳಿ,ಬೆಳೆನಾಶ,ರೈತರ ಸಾಲ ನೀಡಿಕೆಯಲ್ಲಿ ಮಧ್ಯವರ್ತಿ ಬ್ಯಾಂಕ್ ಅನುಸರಿಸಿದ ರೀತಿ,ಎಲೆಚುಕ್ಕೆ ರೋಗ,ಕೃಷಿ,ತೋಟಗಾರಿಕೆ,ಪಶುಸಂಗೋಪನೆ ಇಲಾಖೆಗಳಲ್ಲಿ ಅಧಿಕಾರಿ ಸಿಬ್ಬಂದಿಗಳ ಕೊರತೆಗಳ ಬಗ್ಗೆ ಚರ್ಚಿಸಿ ನಿರ್ಣಯಕೈಗೊಳ್ಳಲಾಯಿತು. ಜಿಲ್ಲೆಯ ವಿವಿಧ ತಾಲೂಕು ಸಮಿತಿಗಳ ಪ್ರಮುಖರಾದ ಬಸವರಾಜ ಪಾಟೀಲ್ ಮುಂಡಗೋಡ, ವಿಘ್ನೇಶ್ವರ ಭಟ್ಟ ಹೊಸ್ತೋಟ, ರಾಘವೇಂದ್ರ ಹೆಗ್ಗಾರ,ರವೀಂದ್ರ ಭಾಗ್ವತ್ ಭಟ್ಕಳ,ಮಂಜುನಾಥ ಹೆಗಡೆ ಹೊನ್ನಾವರ, ವಿನಾಯಕ ಹೆಗಡೆ ಮಲವಳ್ಳಿ ಸೇರಿದಂತೆ ವಿವಿಧ ತಾಲೂಕುಗಳ ಅಧ್ಯಕ್ಷ ಕಾರ್ಯದರ್ಶಿ, ಪದಾಧಿಕಾರಿಗಳು ಪಾಲ್ಗೊಂಡಿದ್ದರು.ಗಣಪತಿ ಪಟಗಾರ್ ಕುಮಟಾ ಸ್ವಾಗತಿಸಿ ವಂದಿಸಿದರು.