ನಿಲ್ಕುಂದ-ಸಂತೆಗುಳಿ ಬ್ರಿಟಿಷರು ನಿರ್ಮಿಸಿದ ರಸ್ತೆ
ಸಿದ್ದಾಪುರ: ಕರಾವಳಿ ಮತ್ತು ಮಲೆನಾಡಿನ ಸಂಪರ್ಕದೊಂದಿಗೆ ಸಿದ್ದಾಪುರದಿಂದ ಕುಮಟಾಕ್ಕೆ ಸಾರಿಗೆ ರಸ್ತೆ ಬ್ರಿಟಿಷರ ಆಡಳಿತ ವ್ಯವಸ್ಥೆಯಲ್ಲಿ ಅಸ್ತಿತ್ವದಲ್ಲಿದ್ದ ನಿರ್ಮಿಸಿದ ನಿಲ್ಕುಂದ-ಸಂತೆಗುಳಿ ಲೋಕೋಪಯೋಗಿ ರಸ್ತೆ ಸಂಪೂರ್ಣ ಜೀರ್ಣ ವ್ಯವಸ್ಥೆಯಲ್ಲಿ ಇರುವುದನ್ನು ಹಾಗೂ ಸರ್ವಋತು ರಸ್ತೆಯನ್ನಾಗಿ ಪರಿವರ್ತಿಸಲು ಸಿದ್ದಾಪುರ ತಾಲೂಕಿನ ನಿಲ್ಕುಂದಕ್ಕೆ ಮುಂದಿನ ಒಂದು ತಿಂಗಳೊಳಗೆ ಭೇಟಿ ನೀಡಿ ಪರಿಶೀಲಿಸುವೆ ಎಂದು ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ತಿಳಿಸಿದ್ದಾರೆಂದು ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ಪ್ರಕಟಣೆಯನ್ನು ಬಿಡುಗಡೆಗೊಳಿಸಿದ್ದಾರೆ.
ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ನೇತೃತ್ವದಲ್ಲಿ ನಿಯೋಗ ನ.೨೮ರಂದು ಬೆಂಗಳೂರಿನ ಸಚಿವರ ಗೃಹ ಕಛೇರಿಯಲ್ಲಿ ಭೇಟಿಯಾಗಿ ಜೀರ್ಣಾವ್ಯಸ್ಥೆಯಲ್ಲಿರುವ ರಸ್ತೆಯ ಛಾಯಚಿತ್ರಣದೊಂದಿಗೆ ಸರ್ವಋತು ರಸ್ತೆಯ ಕುರಿತು ಸಚಿವರಿಗೆ ದಾಖಲೆಗಳ ಮೂಲಕ ಮಾಹಿತಿ ನೀಡಿದಾಗ ಸಚಿವರು ಮೇಲಿನಂತೆ ತಿಳಿಸಿದರೆಂದು ಅವರು ಹೇಳಿದರು.
ಕಳೆದ ೨ ದಶಕಕ್ಕಿಂತ ಮಿಕ್ಕಿ ಸಂತೆಗುಳಿ ಮಾರ್ಗವಾಗಿ ಕುಮಟಾದಿಂದ ಸಿದ್ದಾಪುರಕ್ಕೆ ೨೬ ಕಿಮೀ ರಸ್ತೆ ಸಂಪೂರ್ಣವಾಗಿ ಗಿಡಗಂಟಿ ಬೆಳೆದು ಸಂಪೂರ್ಣ ಸಂಚಾರ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಸ್ಥಳಿಕ ಗ್ರಾಮಸ್ಥರ ಶ್ರಮದಾನದಿಂದ ಪ್ರಥಮ ಹಂತದಲ್ಲಿ ತಾತ್ಪೂರ್ತಿಕ ಕಳೆದ ೨ ವರ್ಷದಿಂದ ಗ್ರಾಮಸ್ಥರು ತಾತ್ಪೂರ್ತಿಕ ರಸ್ತೆ ಸ್ವಪ್ರೇರಣೆಯಿಂದ ನಿರ್ಮಿಸಿಕೊಂಡಿದರು.
ಹಿಂದಿನ ಸರ್ಕಾರದ ಅವಧಿಯಲ್ಲಿ ಗ್ರಾಮಸ್ಥರು ಸರ್ವಋತು ರಸ್ತೆಗಾಗಿ ಪ್ರತಿಭಟನೆ, ಪಾದಯಾತ್ರೆ ಜರುಗಿಸಲಾಗಿತ್ತೆಂದು ನಿಯೋಗವು ಸಚಿವರ ಗಮನಕ್ಕೆ ಚರ್ಚೆಯ ಸಂದರ್ಭದಲ್ಲಿ ಪ್ರಸ್ತಾಪಿಸಲಾಗಿತ್ತು.
ನಿಯೋಗದಲ್ಲಿ ಹೋರಾಟದ ಪ್ರಮುಖರಾದ ನಾಗಪತಿ ಗೌಡ ಹುಕ್ಕಳಿ, ಹರಿಹರ ನಾಯ್ಕ ಓಂಕಾರ್, ಸೀತಾರಾಮ ಗೌಡ ಹುಕ್ಕಳ್ಳಿ, ಮಂಜುನಾಥ ನಾಯ್ಕ ಹುತ್ಗಾರ್, ಮಾನವ ಬಂದ ವೇದಿಕೆಯ ಹಿರಿಯ ಸಂಚಾಲಕ ಮತ್ತು ಉಚ್ಛನ್ಯಾಯಾಲಯದ ನ್ಯಾಯವಾದಿ ಅನಂತ ನಾಯ್ಕ ಉಪಸ್ಥಿತರಿದ್ದರು.
ಸಾರ್ವಜನಿಕರಿಗೆ ಅನುಕೂಲ:
ಸಿದ್ದಾಪುರ ತಾಲೂಕಿನ ನಿಲ್ಕುಂದ, ತಂಡಾಗುಂಡಿ, ಹೆಗ್ಗರಣಿ, ಜಾನ್ಮನೆ ಹಲವು ಭಾಗದವರಿಗೆ ಕೇವಲ ೨೬-೨೮ ಕೀ.ಮೀ ಅಂತರದಲ್ಲಿ ಕುಮಟಾಕ್ಕೆ ತಲುಪಲು ಅವಕಾಶವನ್ನು ಬ್ರಿಟಿಷ್ ಕಾಲದಲ್ಲಿಯೇ ರಸ್ತೆ ನಿರ್ಮಿಸಿದ್ದು ವಿಶೇಷ. ರಸ್ತೆಯ ಅನಾನುಕೂಲದಿಂದ ಈ ಭಾಗದವರು ೫೫-೬೦ ಕಿ.ಮೀ ದೂರ ಪ್ರಯಾಣಿಸಿ ಕುಮಟಕ್ಕೆ ತಲುಪುವ ಪ್ರಯಾಸ ಪಡಬೇಕಾಗಿರುವುದರಿಂದ ಹಣಕಾಸು ಬಿಡುಗಡೆ ಮಾಡಬೇಕೆಂದು ಹೋರಾಟಗಾರ ರವೀಂದ್ರ ನಾಯ್ಕ ಸಚಿವರಿಗೆ ಮನವಿ ಮಾಡಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.