Slide
Slide
Slide
previous arrow
next arrow

ಕೃಷಿ ಸಚಿವರ ಭೇಟಿ: ಅಡಕೆ ಬೆಳೆಗಾರರ ಸಮಸ್ಯೆ ಕುರಿತು ಚರ್ಚೆ: ಪರಿಹಾರಕ್ಕಾಗಿ ಮನವಿ

300x250 AD

ಶಿರಸಿ: ನವದೆಹಲಿಯ ಕೃಷಿ ಭವನದಲ್ಲಿ ಶಿವಮೊಗ್ಗ ಕ್ಷೇತ್ರ ಸಂಸದರಾದ ಬಿ.ವೈ.ರಾಘವೇಂದ್ರ, ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಮಂಗಳೂರು ಕ್ಷೇತ್ರ ಸಂಸದ ಕ್ಯಾಪ್ಟನ್ ಬ್ರಿಜೇಶ ಚೌಟ, ಹಾಗೂ ಉಡುಪಿ, ಚಿಕ್ಕಮಗಳೂರು ಕ್ಷೇತ್ರ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಮುಂದಾಳತ್ವದಲ್ಲಿ, ಸಾಗರ ಹಾಗೂ ಶಿರಸಿ ಪ್ರಾಂತ್ಯದ ರೈತರ ಪ್ರತಿನಿಧಿಗಳಾದ ಎಚ್.ಎಸ್.ಮಂಜಪ್ಪ ಸೊರಬ ಹಾಗೂ ದಿ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿ ಲಿ.,ಶಿರಸಿ ಇದರ ಅಧ್ಯಕ್ಷ ಗೋಪಾಲಕೃಷ್ಣ ವೆಂ. ವೈದ್ಯ ಇವರ ನೇತೃತ್ವದ ನಿಯೋಗವು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ ಇವರನ್ನು ಭೇಟಿ ಮಾಡಿ ಅಡಿಕೆ ಬೆಳೆಗಾರರು ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆ ಅವರ ಇನ್ನಿತರ ಸಮಸ್ಯೆಗಳ ಕುರಿತು ಮಾತನಾಡಿ ಕೃಷಿ ಸಚಿವರ ಗಮನ ಸೆಳೆಯಲಾಯಿತು.

ಅಕ್ರಮವಾಗಿ ಆಮದು ಬರುವ ಅಡಿಕೆಯನ್ನು ತಡೆಯಬೇಕು ಮತ್ತು ಎಫ್.ಎಸ್.ಎಸ್.ಐ. ಅವರು ಈಗ ನಿರ್ದಿಷ್ಟ ಪಡಿಸಿದ ಅಡಿಕೆ ತೇವಾಂಶ ಪ್ರಮಾಣ ಶೇಕಡಾ ೭ ರಿಂದ ಶೇಕಡಾ ೧೧ ಕ್ಕೆ ಹೆಚ್ಚಿಸುವಂತೆ ಮನವಿಯನ್ನು ನೀಡಲಾಯಿತು. ಮೈಲು ತುತ್ತದ ಮೇಲೆ ಈಗ ವಿಧಿಸುತ್ತಿರುವ ಜಿ.ಎಸ್.ಟಿ.ಯನ್ನು ಶೇಕಡಾ ೧೮ ರಿಂದ ಶೇಕಡಾ ೫ ಕ್ಕೆ ಇಳಿಸಲು ಮನವಿಯನ್ನು ಸಲ್ಲಿಸಲಾಯಿತು. ಕೃಷಿ ಸಚಿವರು ಎಲ್ಲಾ ಸಮಸ್ಯೆಗಳನ್ನು ಆಲಿಸಿ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಅಡಿಕೆ ಬೆಳೆಗಾರರು ಪ್ರಸ್ತುತ ಎದುರುಸುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿ ತೀವ್ರ ಗಮನಹರಿಸುವುದಾಗಿ ಭರವಸೆ ನೀಡಿದರು. ಸದ್ರಿ ನಿಯೋಗದಲ್ಲಿ ಯು.ಟಿ.ರಾಮಪ್ಪ, ಅನಿಲ ಒಡೆಯರ್, ಮಲ್ಲಿಕಾರ್ಜುನ ಸಾಗರ, ದಿ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿ ಲಿ.,ಶಿರಸಿ ಇದರ ನಿರ್ದೇಶಕರಾದ ನರಸಿಂಹ ಹೆಗಡೆ, ಹಣಕಾಸು ಮತ್ತು ವ್ಯಾಪಾರ ಮಾರ್ಗದರ್ಶಕರಾದ ಪ್ರಕಾಶ ಹೆಗಡೆ ಹುಳಗೋಳ ಹಾಗೂ ಪ್ರಭಾರಿ ಪ್ರಧಾನ ವ್ಯವಸ್ಥಾಪಕರಾದ ಗಿರೀಶ ಚಿದಾನಂದ ಹೆಗಡೆ ಇವರುಗಳು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top