ಶಿರಸಿ: ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ಇಸಳೂರಿನ ಶ್ರೀನಿಕೇತನ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 1ನೇ ತರಗತಿಯ ವಿದ್ಯಾರ್ಥಿ ಓಮ್ ಎನ್. ಸುಮಾರು 48 ದೇಶಗಳು, ಅವುಗಳ ರಾಜಧಾನಿಗಳು ಮತ್ತು ಚಲಾವಣೆಯಾಗುವ ನಾಣ್ಯಗಳ ಹೆಸರುಗಳನ್ನು ಕಂಠಪಾಠ ಮಾಡಿ 1 ನಿಮಿಷ 42 ಸೆಕೆಂಡುಗಳಲ್ಲಿ ಪ್ರಸ್ತುತ ಪಡಿಸುವ ಮೂಲಕ ‘ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ’ ನಲ್ಲಿ ತಮ್ಮ ಹೆಸರನ್ನು ದಾಖಲಿಸಿಕೊಂಡಿದ್ದಾನೆ. ಈ ವಿದ್ಯಾರ್ಥಿಗೆ ಪದಕ ಹಾಗೂ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಗಿದೆ.
ನವೆಂಬರ್ 24ರಂದು ಲಯನ್ಸ ಪ್ರೌಢಶಾಲೆಯಲ್ಲಿ ಹವ್ಯಕ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಸ್ಪರ್ಧೆಗಳಲ್ಲಿ ಭಾಗವಹಿಸಿದ ಶ್ರೀನಿಕೇತನ ಶಾಲೆಯ ವಿದ್ಯಾರ್ಥಿಗಳು ಅನೇಕ ಬಹುಮಾನಗಳನ್ನು ಪಡೆದಿದ್ದಾರೆ. ಇವರಲ್ಲಿ ಸಂಗೀತ ಕುರ್ಚಿ ಸ್ಪರ್ಧೆಯಲ್ಲಿ 9ನೇ ತರಗತಿಯ ಪ್ರಭವ್ ಭಟ್ ತೃತೀಯ ಸ್ಥಾನ, ತುಷಾರ ಜೋಶಿ ದ್ವಿತೀಯ ಸ್ಥಾನ ಹಾಗೂ ಶ್ರೀಶಾ ಎಸ್. ಪ್ರಥಮ ಸ್ಥಾನವನ್ನು, ರಸಪ್ರಶ್ನೆ ಸ್ಪರ್ಧೆಯಲ್ಲಿ ರಿತಿಕಾಸಿರಿ, ಸುನಿಧಿ ಹೆಗಡೆ, ಚಿನ್ಮಯಿ ಭಟ್, ಕವನಾ ಹೆಗಡೆ ಇವರ ತಂಡವು ತೃತೀಯ ಸ್ಥಾನವನ್ನು, 10ನೇ ತರಗತಿಯ ಚಂದನಾ ಹೆಗಡೆ ಮತ್ತು 8ನೇ ತರಗತಿಯ ಶ್ರೀಶಾ ಎಸ್. ರಸಪ್ರಶ್ನೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆಯುವ ಮೂಲಕ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಆಡಳಿತ ಮಂಡಳಿಯ ಸದಸ್ಯರು, ಪ್ರಾಂಶುಪಾಲರು ವಸಂತ ಭಟ್ ಹಾಗೂ ಶಿಕ್ಷಕ ವೃಂದದವರು ಸಂತಸ ವ್ಯಕ್ತಪಡಿಸಿದ್ದಾರೆ.