Slide
Slide
Slide
previous arrow
next arrow

ಕನಸು ನನಸಾಗಿಸಲು ಆತ್ಮವಿಶ್ವಾಸ ಮುಖ್ಯ: ವಿ.ಡಿ. ಮೊಗೇರ

300x250 AD

ಹೊನ್ನಾವರ: ವಿದ್ಯಾರ್ಥಿ ಜೀವನದಲ್ಲಿ ಒಳ್ಳೆಯ ಕನಸನ್ನು ಕಾಣಬೇಕು. ಪರಿಶ್ರಮದ ಫಲವೇ ಯಶಸ್ಸು. ಬಹುಮುಖ ಪ್ರತಿಭೆಯ ಅನಾವರಣವೇ ಶಿಕ್ಷಣ. ಆತ್ಮ ವಿಶ್ವಾಸದಿಂದ ಮುನ್ನಡೆದರೆ ಗುರಿ ಸಾಧನೆಯಾಗುವುದೆಂದು ಭಟ್ಕಳದ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ವಿ.ಡಿ. ಮೊಗೇರ ಹೇಳಿದರು.

ಅವರು ಸರಕಾರಿ ಪ್ರೌಢಶಾಲೆ ಕೋಟೆಬೈಲು ಇಲ್ಲಿ ನಡೆದ ಪ್ರೇರಣಾ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಸಮಯವನ್ನು ಓದಿಗೆ ಮೀಸಲಿಟ್ಟು ಉತ್ತಮ ಫಲಿತಾಂಶವನ್ನು ತಂದೆ ತಾಯಿಯರಿಗೆ ಕಾಣಿಕೆಯಾಗಿ ನೀಡಬೇಕು. ಟಿ.ವಿ.,ಮೊಬೈಲ್‌ಗಳಿಂದ ದೂರವಿದ್ದು ನಮ್ಮ ಗುರಿಯನ್ನು ನಾವೇ ನಿರ್ಧರಿಸಿಕೊಂಡು ನಿರಂತರ ಪ್ರಯತ್ನದಿಂದ ಉನ್ನತ ಸ್ಥಾನವನ್ನು ಪಡೆಯಬೇಕು. ಕಳೆದ ಮೂರು ವರ್ಷಗಳಿಂದ 100% ಫಲಿತಾಂಶವನ್ನು ಈ ಶಾಲೆ ದಾಖಲಿಸಿದ್ದು ಈ ವರ್ಷವೂ ಅದು ಮುಂದುವರಿಯಬೇಕು. ಸ್ಪರ್ಧಾತ್ಮಕವಾದ ಇಂದಿನ ಯುಗದಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸುವುದರ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಪರಿಣಿತಿ ಸಾಧಿಸಬೇಕು. ಆಲಸ್ಯವೇ ನಮ್ಮ ದೊಡ್ಡ ಶತ್ರು ಎಂದು ಮಕ್ಕಳಿಗೆ ಮನಮುಟ್ಟುವಂತೆ ವಿವರಿಸಿದರು. 

300x250 AD

ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕ ಸುರೇಶ್ ನಾಯ್ಕ ಇವರು ಈ ಹಿಂದೆ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ ವಿ.ಡಿ. ಮೊಗೇರ ಅವರು ಮುಂದೆ ವಿವಿಧ ಹುದ್ದೆಗಳಲ್ಲಿ ಸಲ್ಲಿಸಿದ ಸೇವೆಯನ್ನು ಸಭೆಗೆ ವಿವರಿಸಿದರು. ರಾಘವೇಂದ್ರ ನಾಯ್ಕ ಅವರು ಸ್ವಾಗತಿಸಿದರು, ಶ್ರೀಮತಿ ಪರ್ಪೆತ್ ರೊಡ್ರಿಗಿಸ್ ಅವರು ವಂದಿಸಿದರು. ಗಣೇಶ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. 

Share This
300x250 AD
300x250 AD
300x250 AD
Back to top