Slide
Slide
Slide
previous arrow
next arrow

ವಿದ್ಯಾರ್ಥಿವೇತನ ಪರೀಕ್ಷಾ ತರಬೇತಿ ಸಮಾರೋಪ ಸಮಾರಂಭ

300x250 AD

ಹೊನ್ನಾವರ: ತಾಲೂಕಿನ ಕರ್ಕಿಯ  ಶ್ರೀ ಚೆನ್ನಕೇಶವ ಪ್ರೌಢಶಾಲೆ ಸಭಾಭವನದಲ್ಲಿ ತಾಲೂಕಿನ  ಎನ್.ಎಮ್.ಎಮ್.ಎಸ್ ಪರೀಕ್ಷೆಗೆ ನೋಂದಾಯಿಸಿಕೊಂಡ ವಿದ್ಯಾರ್ಥಿಗಳಿಗೆ ಎಂಟು ದಿನಗಳ ಉಚಿತ ತರಬೇತಿ ಕಾರ್ಯಗಾರದ ಸಮಾರೋಪ ಸಮಾರಂಭ ನಡೆಯಿತು. 

    ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಹೊನ್ನಾವರ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜಿ. ಎಸ್. ನಾಯ್ಕ ಮಾತನಾಡುತ್ತಾ, ಕಳೆದ 18 ವರ್ಷಗಳಿಂದ ಇಲಾಖೆ ಮಾಡುವ ಕಾರ್ಯವನ್ನು ಶ್ರೀ ಚೆನ್ನಕೇಶವ ಪ್ರೌಢಶಾಲೆಯಲ್ಲಿ ನಡೆಯುತ್ತಿರುವುದು ಅನನ್ಯ ಎಂದರು. ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳುತ್ತಾ ಮುಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಿಗೆಲ್ಲ ಬುನಾದಿ ಪರೀಕ್ಷೆ ಆಗಿರುವ ಎನ್ಎಂಎಂಎಸ್ ಪರೀಕ್ಷೆಯನ್ನು ಯಶಸ್ವಿಯಾಗಿ ಉತ್ತೀರ್ಣತೆ ಪಡೆಯಲು ಈ ತರಬೇತಿಯ  ಸದುಪಯೋಗ ಮಾಡಿಕೊಳ್ಳಿ ಎಂದರು. ಈ ಉಚಿತ ತರಬೇತಿಯನ್ನು ಏರ್ಪಡಿಸಿದ ಸಮರ್ಪಣಾ ತರಬೇತಿ ಕೇಂದ್ರ ಮತ್ತು ಶ್ರೀ ಚನ್ನಕೇಶವ ಪ್ರೌಢಶಾಲೆಯನ್ನು ಇಲಾಖೆಯ ಪರವಾಗಿ ಅಭಿನಂದಿಸಿದರು. 

    ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಆನಂದ ನಾಯ್ಕ ಮಾತನಾಡುತ್ತಾ ನಿರಂತರ ಪ್ರಯತ್ನದಿಂದ ಯಶಸ್ಸು ನಿಮ್ಮದಾಗುತ್ತದೆ ಎಂದರು.

  ಉತ್ತರ ಕನ್ನಡ ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿಗಳಾದ ಸತೀಶ್ ನಾಯ್ಕ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ, ಉಚಿತವಾಗಿ ಎಂಟು ದಿನಗಳ ಕಾಲ ಏರ್ಪಡಿಸುತ್ತಿರುವ ಈ ತರಬೇತಿಯ ಸಂಪೂರ್ಣ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದು ಜಿಲ್ಲೆಯ ಗೌರವವನ್ನು ಹೆಚ್ಚಿಸಬೇಕೆಂದು ತಿಳಿಸಿದರು.

300x250 AD

  ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿದ್ದ ಶಾಲೆಯ ಮುಖ್ಯಾಧ್ಯಾಪಕರಾದ ಎಲ್.ಎಂ. ಹೆಗಡೆ ಮಾತನಾಡಿ, ತರಬೇತಿಯ ಪ್ರಯೋಜನವನ್ನು ಪಡೆದು ವಿದ್ಯಾರ್ಥಿ ವೇತನ ಪಡೆಯುವಂತಾಗಲಿ ಎಂದು ಹೇಳುತ್ತಾ ಶುಭ ಹಾರೈಸಿದರು. 

    ಸಮರ್ಪಣಾ ತರಬೇತಿ ಕೇಂದ್ರದ ಸಂಚಾಲಕರಾದ ಶ್ರೀಕಾಂತ್ ಹಿಟ್ನಳ್ಳಿ ಮಾತನಾಡಿ, ತರಬೇತಿಯಲ್ಲಿ ನೂರಾರು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಪ್ರಸ್ತುತ ಉನ್ನತಸ್ತರದಲ್ಲಿ ಬದುಕು ಕಟ್ಟಿಕೊಂಡಿರುವುದನ್ನು ಸ್ಮರಿಸಿದರು. ವಿದ್ಯಾರ್ಥಿಗಳು ಉತ್ತಮರಲ್ಲಿ ಉತ್ತಮರಾಗಿ, ನಿರಂತರ ಪ್ರಯತ್ನದಿಂದ ಪರೀಕ್ಷೆಯನ್ನು ಬರೆದು ಯಶಸ್ಸು ಪಡೆಯುವಂತಾಗಲಿ ಎಂದು ಹೇಳುತ್ತಾ ಸಮಾರೋಪ ಸಮಾರಂಭದ ಕಾರ್ಯಕ್ರಮದ ನಿರೂಪಣೆ ಮಾಡಿ, ಎಲ್ಲರನ್ನೂ ಸ್ವಾಗತಿಸಿ ಅಭಿನಂದಿಸಿದರು.

    ಹೊನ್ನಾವರ ತಾಲೂಕಿನ 16 ಪ್ರೌಢಶಾಲೆಗಳ 115 ವಿದ್ಯಾರ್ಥಿಗಳು ತರಬೇತಿಯ ಪ್ರಯೋಜನ ಪಡೆದರು. 

Share This
300x250 AD
300x250 AD
300x250 AD
Back to top