ದಾಂಡೇಲಿ : ನಗರದ ಹಳೆ ದಾಂಡೇಲಿಯ ವಾರ್ಡ್ ನಂ. 26ರಲ್ಲಿ ಬರುವ ಜನವಸತಿ ಪ್ರದೇಶದ ಗಟಾರದಲ್ಲಿ ಸತ್ತು ಕೊಳೆತು ಗಬ್ಬು ನಾರುತ್ತಿದ್ದ ಹೆಗ್ಗಣವನ್ನು ನಗರಸಭೆಯ ಉಪಾಧ್ಯಕ್ಷರಾದ ಶಿಲ್ಪಾ ಕೋಡೆ ಅವರು ಸ್ವತಃ ಪೌರಕಾರ್ಮಿಕರಂತೆ ಗಟಾರಕ್ಕಿಳಿದು ಸ್ವಚ್ಛತಾ ಕಾರ್ಯವನ್ನು ಮಾಡಿ ಸ್ಥಳೀಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ವಾರ್ಡ್ ನಂ. 26ರ ಸದಸ್ಯೆಯಾಗಿರುವ ಹಾಲಿ ನಗರಸಭೆ ಉಪಾಧ್ಯಕ್ಷೆ ಶಿಲ್ಪಾ ಕೋಡೆ ಅವರು ಗಟಾರದಲ್ಲಿ ಸತ್ತ ಹೆಗ್ಗಣವೊಂದು ಕೊಳೆತು ಗಬ್ಬು ವಾಸನೆ ಬರುತ್ತಿದ್ದು, ಈ ಬಗ್ಗೆ ವಿಲೇವಾರಿ ಮಾಡುವಂತೆ ಪೌರಕಾರ್ಮಿಕರ ಮೇಲ್ವಿಚಾರಕರಿಗೆ ಮಾಹಿತಿಯನ್ನು ನೀಡಿದ್ದಾರೆ. ಆಗ ಪೌರಕಾರ್ಮಿಕರ ಮೇಲ್ವಿಚಾರಕರು ಈಗ ಪೌರಕಾರ್ಮಿಕರನ್ನು ಕಳಿಸಲು ಸಾಧ್ಯವಾಗುತ್ತಿಲ್ಲ ರಜೆಯಲ್ಲಿ ಇದ್ದಾರೆ ಎಂದ ಕಾರಣ ಉಪಾಧ್ಯಕ್ಷೆ ಶಿಲ್ಪಾ ಕೋಡೆ ತಕ್ಷಣವೇ ಗಟಾರಕ್ಕಿಳಿದು ಸ್ವಚ್ಛತಾ ಕಾರ್ಯವನ್ನು ಮಾಡಿ ಸತ್ತು ಕೊಳೆತ ಸ್ಥಿತಿಯಲ್ಲಿದ್ದ ಹೆಗ್ಗಣವನ್ನು ವಿಲೆವಾರಿ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.