ಕಾರವಾರ: ಪ್ರಸಕ್ತ ಸಾಲಿನಿಂದ ಮುಖ್ಯಮಂತ್ರಿ ವಿದ್ಯಾನಿಧಿ ಕಾರ್ಯಕ್ರಮಕ್ಕೆ ಮೀನುಗಾರರ/ಮೀನು ಕೃಷಿಕರ ಮಕ್ಕಳಿಂದ ಶೀಷ್ಯವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
8 ರಿಂದ 10 ನೇ ತರಗತಿಯವರಿಗೆ (ಹೆಣ್ಣು ಮಕ್ಕಳಿಗೆ ಮಾತ್ರ) ಮತ್ತು ಎಸ್.ಎಸ್.ಎಲ್.ಸಿ ಪೂರ್ಣಗೊಳಿಸಿದ (ಹೆಣ್ಣು/ಗಂಡು ಮಕ್ಕಳು) ಕರ್ನಾಟಕ ರಾಜ್ಯ ಯಾವುದೇ ಭಾಗದಲ್ಲಿರುವ ಅಧಿಕೃತವಾಗಿ ನೋಂದಣಿ ಆಗಿರುವ ಶಿಕ್ಷಣ ಸಂಸ್ಥೆಗಳು/ ವಿಶ್ವವಿದ್ಯಾನಿಲಯಗಳಲ್ಲಿ ಸ್ನಾತಕೋತ್ತರ ಕೋರ್ಸ್ವರೆಗೆ (ಪಿಯುಸಿ, ಐಟಿಐ, ಡಿಪ್ಲೋಮ, ಬಿ.ಎ, ಬಿಎಸ್.ಸಿ, ಬಿಕಾಂ, ಎಲ್‌ಎಲ್.ಬಿ, ಬಿ ಫಾರ್ಮ್, ನರ್ಸಿಂಗ್, ಎಂಬಿಬಿಎಸ್, ಬಿಇ, ಬಿಟೆಕ್ ಮತ್ತು ಎಲ್ಲ ವೃತ್ತಿಪರ ಸ್ನಾತಕೋತ್ತರ ಕೋರ್ಸ್ಗಳು) ಪ್ರವೇಶ ಪಡೆದಿರುವ ರಾಜ್ಯದ ಮೀನುಗಾರರ / ಮೀನು ಕೃಷಿಕರ ಮಕ್ಕಳಿಗೆ ಶಿಷ್ಯವೇತನ ನೀಡಲಾಗುವುದು.
ಅರ್ಹ ವಿದ್ಯಾರ್ಥಿಗಳು ಸ್ಟೇಟ್ ಸ್ಕಾಲರ್ ಶಿಪ್ ಪೋರ್ಟಲ್ ನಲ್ಲಿ ನೋಂದಾಯಿಸಿ ಅರ್ಜಿಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ತಮ್ಮ ತಾಲ್ಲೂಕಿನ ಮೀನುಗಾರಿಕಾ ಸಹಾಯಕ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.