ಯಲ್ಲಾಪುರ: ತಾಲೂಕಿನ ಕಿರವತ್ತಿ ಗ್ರಾಪಂ ವ್ಯಾಪ್ತಿಯ ಗುಡಂದೂರಿನಲ್ಲಿ ಶಾಲಾ ಮಕ್ಕಳ ಅನುಕೂಲಕ್ಕಾಗಿ ಗುಡಂದೂರಿನಲ್ಲಿ ಸರಕಾರಿ ಉರ್ದು ಶಾಲೆಯನ್ನು ಪ್ರಾರಂಭಿಸಬೇಕೆಂದು ಆಗ್ರಹಿಸಿ ಸ್ಥಳೀಯ ನಾಗರಿಕರು ಗುರುವಾರ ಪಟ್ಟಣದ ಅಂಬೇಡ್ಕರ್ ಸರ್ಕಲ್ ನಿಂದ ಬಿಇಒ ಕಚೇರಿಯ ವರೆಗೆ ಸಾಂಕೇತಿಕ ಮೆರವಣಿಗೆ ನಡೆಸಿ ಬಿಇಒ ಎನ್.ಆರ್.ಹೆಗಡೆ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
ಸಲ್ಲಿಸಿದ ಮನವಿಯಲ್ಲಿ ಗುಡಂದೂರು ಸಿದ್ದಿ ಕಾಲನಿಯ ಸುಮಾರು ೩೦ ರಿಂದ ೪೦ ವಿದ್ಯಾರ್ಥಿಗಳು ಪ್ರತಿನಿತ್ಯ ಮೂರು ಕಿ.ಮೀ.ನಡೆದು ಶಾಲೆಗೆ ಹೊಗಬೇಕಾಗುತ್ತಿದ್ದು, ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಈಬಗ್ಗೆ ಇಲಾಖೆಗೆ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರೂ, ಸ್ಪಂದನೆ ದೊರೆಯಲಿಲ್ಲ. ಕಾರಣ ಶಾಲಾ ಮಕ್ಕಳ ಅನುಕೂಲತೆಯ ದೃಷ್ಟಿಯಿಂದ ಗುಡಂದೂರಿನಲ್ಲಿ ಉರ್ದು ಪ್ರಾಥಮಿಕ ಶಾಲೆಯನ್ನು ಪ್ರಾರಂಭಿಸಬೇಕೆಂದು ಅವರು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಬಿಇಒ ಈಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದೆಂದರು. ಈವೇಳೆ ಸ್ಥಳಿಯ ಪ್ರಮುಖರಾದ ರುಸುಲ್ ಸಾಬ್ ಮುಜಾವರ್, ಶರೀಪ ಸಾಬ್,ರುಸುಲ್ ಸಾಬ್ ಅಬ್ದುಲ್ ಸಾಬ್ ಮುಜಾವರ್, ಮಹಮ್ಮದ್ ಸಾಬ್ ಮುಜಾವರ, ಮುಂತಾದವರು ಇದ್ದರು.