ಯಲ್ಲಾಪುರ: ತಾಲೂಕಿನ ಮಳೆಯ ಅಬ್ಬರ ಸ್ವಲ್ಪ ಪ್ರಮಾಣದಲ್ಲಿ ತಣ್ಣಗಾಗಿದ್ದು, ಪ್ರಸಿದ್ಧ ಸಾತೊಡ್ಡಿ ಜಲಪಾತ ವೀಕ್ಷಣೆಗೆ ವಿಧಿಸಲಾಗಿದ್ದ ನಿರ್ಬಂಧ ತೆರವುಗೊಳಿಸಲಾಗಿದೆ.
ಜಲಪಾತ ವೀಕ್ಷಣೆಗೆ ಇದು ಸಕಾಲವಾಗಿದ್ದು, ದೂರದ ಊರುಗಳಿಂದ ನಿತ್ಯವೂ ಪ್ರವಾಸಿಗರು ನೂರಾರು ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಜಲಪಾತದಲ್ಲಿ ತಿಳಿನೀರು ಹಾಲ್ನೊರೆಯಾಗಿ ಧುಮ್ಮಿಕ್ಕುತ್ತಿದ್ದು, ಮೋಹಕವಾಗಿ ಗೋಚರಿಸುತ್ತಿದೆ. ರಜಾ ದಿನಗಳಲ್ಲಿ ಪ್ರವಾಸಿಗರ ಅಚ್ಚು ಮೆಚ್ಚಿನ ಪಿಕನಿಕ್ ಸ್ಪಾಟ್ ಆಗಿ ಸಾತೊಡ್ಡಿ ಗಮನ ಸೆಳೆಯುತ್ತಿದೆ.
ತಾಲೂಕಿನ ಮಾಗೋಡ ಹಾಗೂ ಶಿರ್ಲೆ ಜಲಪಾತದ ರಸ್ತೆಯ ಕುಸಿತದಿಂದ ಪ್ರವಾಸಿಗರು ಹೋಗಲು ಸಾಧ್ಯವಾಗದಂತಾಗಿದೆ. ಹಾಗಾಗಿ ನಿರ್ಬಂಧ ಸಡಿಲಿಸಿರುವ ಸಾತೊಡ್ಡಿ ಜಲಪಾತದ ವೀಕ್ಷಣೆಗೆ ಹೆಚ್ಚಿನ ಪ್ರವಾಸಿಗರು ಬರುತ್ತಿದ್ದಾರೆ.