Slide
Slide
Slide
previous arrow
next arrow

ಪ್ಯಾರಾ ಮೆಡಿಕಲ್‌ನ ವಿದ್ಯಾರ್ಥಿಗಳಿಂದ ಏಡ್ಸ್ ಕುರಿತು ಬೀದಿ ನಾಟಕ

300x250 AD

ಹೊನ್ನಾವರ : ನ್ಯಾಕೋ ಭಾರತ ಸರಕಾರ, ಕರ್ನಾಟಕ ಏಡ್ಸ್ ಪ್ರಿವೆನ್ಸ್ನ ಸೊಸೈಟಿ, ಬೆಂಗಳೂರು, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಕಾರವಾರ,ಐ.ಸಿ.ಟಿ.ಸಿ ವಿಭಾಗ ತಾಲೂಕ ಆಸ್ಪತ್ರೆ ಹೊನ್ನಾವರ, ಮತ್ತು ರೆಡ್ ರಿಬ್ಬನ್ ಕ್ಲಬ್ ಸೆಂಟ್ ಇಗ್ನೇಶಿಯಸ್ ವೈದ್ಯಕೀಯ ಮಹಾವಿದ್ಯಾಲಯ ಇವುಗಳ ಸಂಯುಕ್ತಾಶ್ರಯದಲ್ಲಿ ನಗರದ ವಿವಿಧಡೆ ಹೆಚ್.ಐ.ವಿ/ಏಡ್ಸ್ ಕುರಿತು ಜಾಗೃತಿ ಕಾರ್ಯಕ್ರಮ ಜರುಗಿತು. 

ಬಸ್ ನಿಲ್ದಾಣ, ಭಟ್ಕಳ ಸರ್ಕಲ್, ತೆಲಂಗ ಕಾಂಪ್ಲೆಕ್ಸ್ ಎದರುಗಡೆ, ಮತ್ತು ಸರಕಾರಿ ಪದವಿ ಕಾಲೇಜ್ ಆವರಣದಲ್ಲಿ ಸೆಂಟ್ ಇಗ್ನೇಶಿಯಸ್ ವಿಧ್ಯಾರ್ಥಿಗಳಿಂದ ಹೆಚ್.ಐ.ವಿ/ಏಡ್ಸ್ ಕುರಿತು ಬೀದಿ ನಾಟಕ ಮಾಡುವುದರ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು. 

300x250 AD

ಇನ್‌ಟೆನ್ಸಿಪಾಯಿಡ್ ಕ್ಯಾಂಪೇನ್ ( ಅಂಗವಾಗಿ ಈ ಜಾಗೃತಿ ಕಾರ್ಯಕ್ರಮ ನಡೆಯುತ್ತಿದ್ದು ಈ ಕ್ಯಾಂಪೇನ್ ಗೆ ಸೆಂಟ್ ಇಗ್ನೇಶಿಯಸ್ ಸಂಸ್ಥೆಯ ರೆಡ್ ರಿಬ್ಬನ್ ಕ್ಲಬ್ ಆಯ್ಕೆಯಾಗಿದೆ. ಬೀದಿ ನಾಟಕದ ಮೂಲಕ ಹೆಚ್.ಐ.ವಿ ಹರಡುವ ವಿಧಾನ, ಹೆಚ್.ಐ.ವಿ ತಡೆಗಟ್ಟುವ ವಿಧಾನ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಯಿತು. ಈ ಕಾರ್ಯಕ್ರಮದಲ್ಲಿ ತಾಲೂಕ ಆಸ್ಪತ್ರೆ ಹೊನ್ನಾವರದ ಐ.ಸಿ.ಟಿ.ಸಿ ವಿಭಾಗದ ಆಪ್ತಸಮಾಲೋಚಕರಾದ ವಿನಾಯಕ ಪಟಗಾರ, ಮತ್ತು ಪ್ರಯೋಗಶಾಲಾ ತಂತ್ರಜ್ಞರಾದ ಉಮೇಶ ಕೆ ಉಪಸ್ಥಿತರಿದ್ದರು. ಉಪಪ್ರಾಂಶುಪಾಲೆ. ಸಿಸ್ಟರ್ ಸುಸಾನ್ ಉಸ್ತುವಾರಿಯಲ್ಲಿ ಈ ಜನಜಾಗೃತಿ ಕಾರ್ಯಕ್ರಮ ಜರುಗುತ್ತಿದೆ.

Share This
300x250 AD
300x250 AD
300x250 AD
Back to top