ದಾಂಡೇಲಿ : ನಗರದ ವೆಸ್ಟ್ಕೋಸ್ಟ್ ಕಾಗದ ಕಾರ್ಖಾನೆಯಡಿ ಬಂಗೂರನಗರದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಶ್ರೀ ಗಣೇಶನ ಮೂರ್ತಿಯನ್ನು ಶಿಸ್ತುಬದ್ಧವಾಗಿ ಹಾಗೂ ಶ್ರದ್ಧಾಭಕ್ತಿಯಿಂದ ಮಂಗಳವಾರ ಸಂಜೆ ಮೆರವಣಿಗೆಯೊಂದಿಗೆ ಸ್ಥಳೀಯ ಬಸವೇಶ್ವರನಗರದಲ್ಲಿರುವ ವಿಸರ್ಜನಾ ಹೊಂಡದಲ್ಲಿ ವಿಸರ್ಜಿಸಲಾಯಿತು.
ಸಿದ್ದಿ ಕಲಾವಿದರ ಬ್ಯಾಂಡ್ಸೆಟ್ ಮತ್ತು ಗೊಂಬೆಗಳು ಗಣೇಶನ ಭವ್ಯ ಶೋಭಾಯಾತ್ರೆಯ ಮೆರುಗನ್ನು ಹೆಚ್ಚಿಸಿತು. ಪೊಲೀಸ್ ಭದ್ರತೆಯಿಲ್ಲದೆ ಶೋಭಾಯಾತ್ರೆ ನಡೆದ ನಗರದ ಏಕೈಕ ಗಣಪತಿ ವಿಸರ್ಜನೆಯ ಗೌರವಕ್ಕೆ ಕಾಗದ ಕಾರ್ಖಾನೆ ಪಾತ್ರವಾಯಿತು.