ಯಲ್ಲಾಪುರ: ಪಟ್ಟಣದ ಹೊಲಿ ರೋಜರಿ ಪ್ರೌಢಶಾಲೆಯಲ್ಲಿ ನಡೆದ ತಾಲೂಕಾ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ತಾಲೂಕಿನ ಮಂಚಿಕೇರಿಯ ರಾಜರಾಜೇಶ್ವರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ವಿಪತ್ತು ನಿರ್ವಹಣೆ ವಿಷಯವಾಗಿ ಪ್ರಸ್ತುತ ಪಡಿಸಿದ ನಾಟಕ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.
ವಿಪತ್ತು ಬಂದಾಗ ಹೊಸ ರೀತಿಯ ತಂತ್ರಜ್ಞಾನವನ್ನು ಬಳಸಿ ವಿಪತ್ತನ್ನು ಹೇಗೆ ನಿಭಾಯಿಸಬಹುದೆಂಬುದನ್ನು ಶ್ರೀ ರಾಜರಾಜೇಶ್ವರಿ ಪ್ರೌಢಶಾಲಾ ಮಕ್ಕಳು ನಾಟಕದ ಮುಖಾಂತರ ಪರಿಣಾಮಕಾರಿಯಾಗಿ ತೋರಿಸಿಕೊಟ್ಟಿದ್ದಾರೆ.
ಗ್ರಾಪಂ ಸದಸ್ಯ ಎಂ.ಕೆ.ಭಟ್ ಯಡಳ್ಳಿ ನಾಟಕ ರಚಿಸಿದ್ದು, ಸುಬೋಧ ಹೆಗಡೆ ಮಳಗಿಮನೆ ನಿರ್ದೇಶಿಸಿದ್ದಾರೆ.ವಿದ್ಯಾರ್ಥಿಗಳಾದ ಶ್ರೀನಿಧಿ ಜೋಶಿ, ನಾಗಶ್ರೀ ಭಟ್ ಸಂಧ್ಯಾ ಭಟ್ , ಸ್ನೇಹಾ ಲಕ್ಮಾಪುರ್, ತ್ರಿವೇಣಿ ಮರಾಠಿ, ಪನ್ನಗ ಶಾಸ್ತ್ರಿ, ಸಾತ್ವಿಕ್ ಗೌಡ, ಆದಿತ್ಯ ಶೇಟ್ ಅಭಿನಯಿಸಿದ್ದರು.