Slide
Slide
Slide
previous arrow
next arrow

ಬಿಎಸ್ಸಿ ಫಲಿತಾಶ: ಎಸ್.ಡಿ.ಎಂ. ಕಾಲೇಜು ವಿದ್ಯಾರ್ಥಿನಿಯರಿಗೆ ರ‍್ಯಾಂಕ್

300x250 AD

ಹೊನ್ನಾವರ: ಆಗಸ್ಟ್ 2023 ರಲ್ಲಿ ನಡೆದ ಕ.ವಿ.ವಿ. ದ ಬಿ.ಎಸ್ಸಿ. ಅಂತಿಮ ವರ್ಷದ ಪರೀಕ್ಷೆಯಲ್ಲಿ ಸ್ಥಳೀಯ ಎಂ.ಪಿ.ಇ. ಸೊಸೈಟಿಯ, ಎಸ್.ಡಿ.ಎಂ. ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ವಿ.ವಿ. ಮಟ್ಟದಲ್ಲಿ ರ‍್ಯಾಂಕ್ ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ.

ಕುಮಾರಿ ಸಿಂಧು ಎಂ. ಹೆಗಡೆ ಇವರು ಬಿ.ಎಸ್ಸಿ. ವಿಭಾಗದಲ್ಲಿ 94.68 ಪ್ರತಿಶತ ಅಂಕಗಳಿಸುವ ಮೂಲಕ ವಿ.ವಿ. ಗೆ ದ್ವಿತೀಯ ರ‍್ಯಾಂಕ್ ಪಡೆದರೆ, ಕುಮಾರಿ ಧನಲಕ್ಷ್ಮಿ ಆರ್. ಮೊಗೇರ್ ಇವರು 94.03 ಪ್ರತಿಶತ ಅಂಕಗಳಿಸಿ ವಿ.ವಿ.ಗೆ 4 ನೇ ರ‍್ಯಾಂಕ್ ಗಳಿಸಿದ್ದಾರೆ. ರ‍್ಯಾಂಕ್ ವಿಜೇತರಿಬ್ಬರೂ ಗ್ರಾಮೀಣ ಪ್ರತಿಭೆಗಳಾಗಿರುವುದು ವಿಶೇಷ. ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಪ್ರಾಚಾರ್ಯರಾದ ಡಾ. ರೇಣುಕಾದೇವಿ ಗೋಳಿಕಟ್ಟೆ, ಆಡಳಿತ ಮಂಡಳಿಯ ಅಧ್ಯಕ್ಷರಾದ ಕೃಷ್ಣಮೂರ್ತಿ ಭಟ್ಟ ಮತ್ತು ಸದಸ್ಯರು ಹಾಗೂ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top