Slide
Slide
Slide
previous arrow
next arrow

ಜು.27,28ಕ್ಕೆ ವಿಶೇಷ ಸಂಗೀತ, ನೃತ್ಯ ಪರೀಕ್ಷೆ

300x250 AD

ಶಿರಸಿ: ಇಲ್ಲಿನ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಪರೀಕ್ಷಾ ಕೇಂದ್ರದಲ್ಲಿ ನೊಂದಾಯಿಸಿರುವ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯ ಆಯೋಜಿಸಿರುವ ರಾಜ್ಯ ಮಟ್ಟದ ಜ್ಯೂನಿಯರ್, ಸೀನಿಯರ್ ಹಾಗೂ ವಿದ್ವತ್ ಪರೀಕ್ಷೆಗಳು ಜು.27 ಹಾಗೂ 28 ರಂದು ಶಿರಸಿಯ ಎಂ.ಇ.ಎಸ್ ಎಂ.ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ನಡೆಯಲಿದೆ. 250 ಕ್ಕೂ ಅಧಿಕ ವಿದ್ಯಾರ್ಥಿಗಳು ಈಗಾಗಲೇ ಪರೀಕ್ಷಾ ಕೇಂದ್ರದಿಂದ ನಮೂದಿಸಲ್ಪಟ್ಟಿದ್ದು ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್‌ನಿಂದ Download ಮಾಡಿಕೊಂಡು,ತಮ್ಮ Ticket ತೆಗೆದುಕೊಂಡು ಪರೀಕ್ಷೆಗೆ ಬರಬೇಕು. 27ರಂದು ಮಧ್ಯಾಹ್ನ 1.00 ಗಂಟೆಯಿಂದ ಶಾಸ್ತ್ರವಿಭಾಗದ ಪರೀಕ್ಷೆ ಜ್ಯೂನಿಯರ್ ವಿಭಾಗದ ವಿದ್ಯಾರ್ಥಿಗಳಿಗೆ ನಡೆಯಲಿದೆ. ಮಧ್ಯಾಹ್ನ ಇಳಿಹೊತ್ತು 3.30 ರಿಂದ ಶ್ರವಣ ಜ್ಞಾನ ಪರೀಕ್ಷೆ ಕೂಡಾ ಅದೇ ಸ್ಥಳದಲ್ಲಿ ನಡೆಯಲಿದ್ದು ಮರುದಿನ 28 ರಂದು ಬೆಳಿಗ್ಗೆ 10.00 ಗಂಟೆಯಿಂದ ಸೀನಿಯರ್ ಹಾಗೂ ವಿದ್ವತ್ ತರಗತಿಗಳ ಪರೀಕ್ಷೆ ಇದೇ ಕೇಂದ್ರದಲ್ಲಿ ನಡೆಯುತ್ತದೆ. ಬೆಳಿಗ್ಗೆ ಹಾಗೂ ಮಧ್ಯಾಹ್ನ ಶಾಸ್ತ್ರ I ಹಾಗೂ ಶಾಸ್ತ್ರ II ಪರೀಕ್ಷೆಗಳು ನಡೆಯುವವು. ಪರೀಕ್ಷೆಗೆ ಕುಳಿತುಕೊಳ್ಳಲು Hall Ticket ಕಡ್ಡಾಯವಾಗಿದ್ದು ಪರೀಕ್ಷಾರ್ಥಿಗಳು, ಪರೀಕ್ಷಕರು ಅರ್ಧಗಂಟೆ ಮೊದಲೇ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಲು ಸೂಚಿಸಿದೆ. ಪರೀಕ್ಷಾ ವಿದ್ಯಾರ್ಥಿಗಳು ಸಂಬಂಧಿತ ಪರೀಕ್ಷೆಗಳ ಗುರುಗಳು, ಪಾಲಕರು ಇದನ್ನು ಗಮನಿಸಲು ಕೋರಲಾಗಿದೆ.
ಪ್ರಾಯೋಗಿಕ ಪರೀಕ್ಷೆಯ ದಿನಾಂಕವನ್ನು ಅಂದೇ ತಿಳಿಸಲಾಗುವುದು.

300x250 AD
Share This
300x250 AD
300x250 AD
300x250 AD
Back to top