Slide
Slide
Slide
previous arrow
next arrow

ಕಮ್ಮಾಣಿಯ ಕಮಲೆಯ ಬದುಕೀಗ ತುಸು ಪ್ರಶಾಂತ

300x250 AD

ಮಕ್ಕಳ ವಿದ್ಯಾಭ್ಯಾಸಕ್ಕೆ ಆಸರೆಯಾದ ಸಮಾಜ | ಕೂಲಿ ಮಾಡಿಯೇ ಮನೆ ಕಟ್ಟುವ ವಿಶ್ವಾಸ

e – ಉತ್ತರ ಕನ್ನಡ ವಿಶೇಷ ವರದಿ:

ಬಹುತೇಕ ಬಾರಿ ಒಳ್ಳೆಯದಕ್ಕೆ ಹಲವರು ಕೈಜೋಡಿಸುತ್ತಾರೆ. ಆದರೆ ವಿಷಯ ಸರಿಯಾಗಿರಬೇಕು. ಕಷ್ಟದಲ್ಲಿರುವವರಿಗೆ ಸಮಾಜ ಸ್ಪಂದಿಸುವ ಗುಣ ಭಾರತದ ಈ ಮಣ್ಣಿನಲ್ಲಿಯೇ ಮಿಳಿತಗೊಂಡಿದೆ. ಮತ್ತೊಬ್ಬರಿಗೆ ಕಷ್ಟ ಎಂದಾಗ ಮರುಗುವ ಮನಸ್ಸುಗಳ ಕಾರಣಕ್ಕೆ ಸಮಾಜ ದೇವತೆಯ ಮೇಲೆ ಜನರಿನ್ನೂ ನಂಬಿಕೆ ಇರಿಸಿದ್ದಾರೆ. ವಸುಧೈವ ಕುಟುಂಬಕಮ್ ಎನ್ನುವ‌ ಮಾತಿನ್ನೂ ಜೀವಂತವಾಗಿದೆ. ಪರೋಪಕಾರಾರ್ಥಂ ಇದಂ ಶರೀರಮ್ ಎಂದು ಬದುಕಿ, ಮತ್ತೊಬ್ಬರ ಖುಷಿಯಲ್ಲಿ ತಮ್ಮ ಬದುಕಿನ ಖುಷಿ ಕಾಣುತ್ತಿರುವವರಲ್ಲಿ ಅಂಕೋಲಾ ತಾಲೂಕಿನ ಹೆಗ್ಗಾರಿನ ಪ್ರಶಾಂತರೂ ಒಬ್ಬರು.

ಕಳೆದ ಕೆಲ ದಿನದ ಹಿಂದೆ ಕಮ್ಮಾಣಿ ಊರಿನ ಕೂಲಿ ಕೆಲಸ ಮಾಡುವ ವನವಾಸಿ ಮಹಿಳೆ ಕಮಲೆ ಫಕೀರ ಸಿದ್ದಿ ಎಂಬಾಕೆಯ ಕಷ್ಟದ ಜೀವನದ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಹೆಗ್ಗಾರಿನ ಪ್ರಶಾಂತ ಮಾಹಿತಿ ಹಂಚಿಕೊಂಡಿದ್ದರು. ತೀರಿ ಹೋಗಿರುವ ಗಂಡ, ಓರ್ವ ಮಗ-ಸೊಸೆ, ಮೂವರು ಮೊಮ್ಮಕ್ಕಳು (ಈರ್ವರು ಹೆಣ್ಣು, ಓರ್ವ ಗಂಡು) ಜೊತೆಗೆ ಅರ್ಧ ಕಾಮಗಾರಿಯಾಗಿ ನಿಂತಿರುವ ಮನೆ, ಬದುಕಿನ ಜಂಜಾಟದ ನಿವಾರಣೆಗೆ ಕೂಲಿ ಕೆಲಸ. ಇದಿಷ್ಟೇ ಕಮಲೆಯ ಆಸ್ತಿ. ಶಾಲೆ ಪ್ರಾರಂಭವಾದೊಡನೆ ಮೂರು ಜನ ಮೊಮ್ಮಕ್ಕಳ ಶಿಕ್ಷಣಕ್ಕಾಗಿ ಖರ್ಚು ಮಾಡುವ ಪರಿಸ್ಥಿತಿಯಲ್ಲಿ ತಾನಿಲ್ಲ. ಮಕ್ಕಳ ಶಿಕ್ಷಣಕ್ಕೆ ಸಹಾಯವಾಗಿದ್ದರೆ ಅನುಕೂಲವಾಗ್ತಿತ್ತು ಎಂದು ಕಮಲೆ ಸುರಿಸಿದ್ದ ಕಣ್ಣೀರಿಗೆ ಸಮಸ್ತ ಸಮಾಜದ ಬೆನ್ನೆಲುಬಾಗಿ ನಿಂತು, ಕಮಲೆಯ ಮಕ್ಕಳ ವಿದ್ಯಾಭ್ಯಾಸಕ್ಕೆ ಬಲ ನೀಡಿದೆ. ಇದಕ್ಕೆ ಕಾರಣ ಅದೇ ಹೆಗ್ಗಾರಿನ ಪ್ರಶಾಂತ ಎಂಬ ಯುವಕ.‌

300x250 AD

ಕಮಲೆಯ ಕಷ್ಟ, ಅಗತ್ಯತೆ ಕುರಿತು ಫೇಸ್ಬುಕ ನಲ್ಲಿ ಸುದೀರ್ಘವಾಗಿ ಬರೆದು, ಜನರಿಗೆ ಮಾಹಿತಿ ತಿಳಿಯುವಂತೆ ಮಾಡಿ, ಕಮಲೆಯ ಬ್ಯಾಂಕ್ ಖಾತೆ ನಂಬರ್ ಸಹ ಹಾಕಿದ್ದರು. ಮತ್ತು ಹಣಕಾಸಿನ ಸಹಾಯ ಮಾಡುವಂತೆ ವಿನಂತಿಸಿದ್ದರು. ಅದರ ಪರಿಣಾಮ ಎರಡೇ ದಿನದಲ್ಲಿ ರೂ.15,000 ಕ್ಕೂ ಅಧಿಕ ಹಣ ಕಮಲೆಯ ಖಾತೆಗೆ ಜಮಾ ಆಗಿದ್ದು, ಕಮಲೆಯ ಸಣ್ಣ ಮೊಮ್ಮಕ್ಕಳ ಶಿಕ್ಷಣಕ್ಕೆ ಬೆಂಬಲವಾಗಿ ನಿತ್ತಿದ್ದಾರೆ. ಇದೀಗ ಈ ಕುರಿತು ಕಮಲೆ, ಖುಷಿಯಿಂದ ಕೃತಜ್ಞತೆ ಸಲ್ಲಿಸುವ ಅಭಿಪ್ರಾಯ ಹಂಚಿಕೊಂಡಿರುವ ವಿಡಿಯೋ ವನ್ನು ಸಹ ಪೇಸ್ಬುಕ್ಕಿನಲ್ಲಿ ಹೆಗ್ಗಾರಿನ ಪ್ರಶಾಂತ ಪ್ರಕಟಿಸಿದ್ದಾರೆ. ತನ್ನ ಮೊಮ್ಮಕ್ಕಳ ಶಿಕ್ಷಣಕ್ಕಾಗಿ ಸಮಸ್ತ ಸಮಾಜ ಬೆಂಬ ಸೂಚಿಸಿ ಹಣ ನೀಡಿದ್ದು ಸಂತಸದ ವಿಷಯವಾಗಿದೆ. ಇದರಲ್ಲಿನ ಪ್ರತಿ ರೂಪಾಯನ್ನು ಮೊಮ್ಮಕ್ಕಳ ಶಿಕ್ಷಣಕ್ಕಾಗಿಯೇ ವಿನಿಯೋಗಿಸುತ್ತೇನೆ. ಅರ್ಧ ಕಟ್ಟಿರುವ ಮನೆಯನ್ನು ಕೂಲಿ ಮಾಡಿದ ಹಣದಲ್ಲಿ ಪೂರ್ಣಗೊಳಿಸುತ್ತೇನೆ ಎಂದು ಅವಳು ಹೇಳಿದ್ದಾಳೆ.

ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚುವ ಅನೇಕ ಕೈಗಳಿರುತ್ತವೆ. ಆದರೆ ವಿಶ್ವಾಸದ ಮಾಹಿತಿಗಳನ್ನು ನೀಡುವ ಕೆಲಸ ಸರಿಯಾಗಬೇಕು. ನಿಜವಾಗಿಯೂ ಕಷ್ಟ ಇದ್ದಾಗ ಸಮಾಜವೇ ಕೈ ಹಿಡಿಯುತ್ತದೆ. ಇದಕ್ಕೆ ಕಮ್ಮಾಣಿಯ ಕಮಲೆಯೇ ಸಾಕ್ಷಿ. ಜೊತೆಗೆ ಸಮಸ್ಯೆ ಮತ್ತು ಪರಿಹಾರದ ನಡುವಿನ ಕೊಂಡಿಯಾಗಿ ಹೆಗ್ಗಾರಿನ ಪ್ರಶಾಂತನವರ ಕೊಡುಗೆಯನ್ನು ಮರೆಯುವಂತಿಲ್ಲ.


ಮೊಮ್ಮಕ್ಕಳ ಶಿಕ್ಷಣಕ್ಕಾಗಿ ಕಮಲೆ ನನ್ನ ಬಳಿ ಸಹಾಯಕ್ಕಾಗಿ ಮನವಿ ಮಾಡಿದ್ದಳು. ನಾನು ಈ ವಿಷಯವನ್ನು ಅವಳ ಒಪ್ಪಿಗೆಯ ಮೇರೆಗೆ ಫೇಸ್ಬುಕ್ಕಿನಲ್ಲಿ ಬರೆದು, ಸಹಾಯಕ್ಕಾಗಿ ವಿನಂತಿಸಿದೆ. ಸ್ನೇಹಿತರು, ಹಿತೈಷಿಗಳು ಎಲ್ಲ ಧನಸಹಾಯ ಮಾಡಿದ್ದಾರೆ. ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸಿದ ಪ್ರತಿಯೊಬ್ಬರಿಗೂ ಧನ್ಯವಾದ. ಕಮಲೆಯ ವಿಷಯದಲ್ಲಿ ನನ್ನ ಕೈಲಾಗಿದ್ದನ್ನು ನಾನು ಮಾಡಿದ್ದೇನೆ.

  • ಹೆಗ್ಗಾರ ಪ್ರಶಾಂತ, ಕೃಷಿಕ
Share This
300x250 AD
300x250 AD
300x250 AD
Back to top