Slide
Slide
Slide
previous arrow
next arrow

ಮೇ.19ಕ್ಕೆ ವಿಠ್ಠಲ ನೆನಪಿನ ವಿಶೇಷ ಉಪನ್ಯಾಸ ಕಾರ್ಯಕ್ರಮ

300x250 AD

ಹೊನ್ನಾವರ: ಪ್ರೀತಿಪದಗಳ ಸಹಯಾನಿ, ಸಂವಿಧಾನ ಓದು ಅಭಿಯಾನದ ರುವಾರಿ ಡಾ. ವಿಠ್ಠಲ ಭಂಡಾರಿಯವರ ನೆನಪಿನ ಮೂರನೇ ವರ್ಷದ ಕಾರ್ಯಕ್ರಮ ಮೇ.19,ರಂದು ಬೆಳಿಗ್ಗೆ 10 ಗಂಟೆಯಿಂದ  ಹೊನ್ನಾವರದ ಕೆರೆಕೋಣದ ಸಹಯಾನದ ಅಂಗಳದಲ್ಲಿ ನಡೆಯಲಿದೆ.

ಸಮಾನತೆಯನ್ನು ಬಯಸುವುದು ಅಪರಾಧವೆ? ಈ ವಿಷಯದ ಕುರಿತು ವಿಶೇಷ ಉಪನ್ಯಾಸ, ಒಡನಾಟದ ನೆನಪು, ಗಾನಸುಧೆ ಕಾರ್ಯಕ್ರಮ ನಡೆಯಲಿದೆ. ನಾಡಿನ ಪ್ರಸಿದ್ಧ ಕತೆಗಾರರು ಕಾದಂಬರಿಕಾರರು, ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರೂ ಆಗಿದ್ದ ಡಾ. ಆರ್ ಸುನಂದಮ್ಮ ಉದ್ಘಾಟನೆ ಮಾಡಲಿದ್ದು, ಸಂಸ್ಕೃತಿ ಚಿಂತಕ, ಸಾಹಿತಿ ಡಾ. ರಾಜಪ್ಪ ದಳವಾಯಿ “ಸಮಾನತೆಯನ್ನು ಬಯಸುವುದು ಅಪರಾಧವೆ?” ಎಂಬ ವಿಷಯದ ಬಗ್ಗೆ ವಿಠ್ಠಲ ನೆನಪಿನ ವಿಶೇಷ ಉಪನ್ಯಾಸ ನೀಡಲಿದ್ದಾರೆ. ರಂಗಸಂಘಟಕ ಬರಹಗಾರ ಟಿ. ಸುರಂದ್ರರಾವ್ ಅಧ್ಯಕ್ಷತೆ ವಹಿಸಲಿದ್ದಾರೆ. ಬಿ.ಜಿ. ಸುಮಿತ್ ಕುಮಾರ್ ಸಂಗಡಿಗರಿಂದ ಹಿಂದೂಸ್ತಾನಿ ಸಂಗೀತ ಹಾಡುಗಾರಿಕೆ ನಡೆಯಲಿದೆ. ರಾಜ್ಯದ ಬೇರೆಬೇರೆ ಜಿಲ್ಲೆಗಳಿಂದ ಸಾಹಿತಿ ಬರಹಗಾರರು, ಪತ್ರಕರ್ತರು,  ಹೋರಾಟಗಾರರು ಒಡನಾಟದ ನೆನಪು ಹಂಚಿಕೊಳ್ಳಲಿದ್ದಾರೆ. ಒಂದಿಡೀ ದಿನ ವಿಠ್ಠಲನ ನೆನಪಿನಲ್ಲಿ ವೈಚಾರಿಕ ಕರ್ತವ್ಯದೊಡನೆ ಸೇರಿ ಕಾರ್ಯಕ್ರಮವನ್ನು ಚಂದಗಾಣಿಸಲು ಸಂಘಟಕರು ಕೋರಿದ್ದಾರೆ.

300x250 AD
Share This
300x250 AD
300x250 AD
300x250 AD
Back to top