ಹಳಿಯಾಳ : ಪಟ್ಟಣದಲ್ಲಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಜಿ.ಎಸ್.ಟಿ ಹಾಗೂ ವಿವಿಧ ತೆರಿಗೆಗಳ ಬಗ್ಗೆ ಮಾಹಿತಿ ಕಾರ್ಯಗಾರವು ಸೋಮವಾರ ಸಂಜೆ ಸಂಪನ್ನಗೊಂಡಿತು.
ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಚಾರ್ಟಡ್ ಅಕೌಂಟೆಂಟ್ ಸುಬ್ರಹ್ಮಣ್ಯ ಗಾಂವಕರ ಭಾಗವಹಿಸಿ ಜಿ.ಎಸ್.ಟಿ, ಟಿ.ಡಿ.ಎಸ್, ಆದಾಯ ತೆರಿಗೆ ಟಿಡಿಎಸ್ ಮತ್ತು ಟಿ.ಸಿ.ಎಸ್ ಇವುಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಾರ್ಯಾಲಯದ ವ್ಯವಸ್ಥಾಪಕರಾದ ರವಿ ಪಂಡಿತ್ ಹಾಗೂ ಹಳಿಯಾಳ ವಿಭಾಗದ ವ್ಯಾಪ್ತಿಯಲ್ಲಿ ಬರುವ ವಲಯಾರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.