ಶಿರಸಿ: ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ದಕ್ಷಿಣ ಕಾಶಿ ಎಂದೇ ಪ್ರಖ್ಯಾತವಾದ ಮಹಾಕೂಟದಲ್ಲಿ ಸೇಶಿಂಕೈ ಶಿಟೋ ರಿಯು ಕರಾಟೆ ಡು ಅಸೋಸಿಯೇಷನ್ ಆಫ್ ಕರ್ನಾಟಕ ವತಿಯಿಂದ ಆಯೋಜಿಸಿದ ಎಪ್ರಿಲ್ 18 ರಿಂದ 21 ರವರೆಗೆ ನಾಲ್ಕು ದಿನದ ಕರಾಟೆ ತರಬೇತಿ ಶಿಬಿರ ಹಾಗೂ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಸಿದ್ದಾಪುರ ಚಾಂಪಿಯನ್ಸ್ ಡೋಜೊ ಕರಾಟೆ ವಿದ್ಯಾರ್ಥಿಗಳು ಪದಕಗಳ ಬೇಟೆಯಾಡಿ ಸಾಧನೆ ಮಾಡಿದ್ದಾರೆ. ಪದಕಗಳನ್ನು ಪಡೆದ ವಿದ್ಯಾರ್ಥಿಗಳು ಜೈ ಆರ್. ಕಾಮತ್ ಚಿನ್ನದ ಪದಕ , ಶ್ರೀರಾಮ್ ಆರ್. ಕಾಮತ್ ಚಿನ್ನದ ಪದಕ, ಫ್ರಾನ್ಸಿ ಪಿ. ಚಿನ್ನದ ಪದಕ, ಸೌಜನ್ಯ ಎಂ. ಶೇಟ್ ಚಿನ್ನದ ಪದಕ, ವಜ್ರಶ್ರೀ ಹಾಲಪ್ಪ ಗೌಡರ್ ಚಿನ್ನದ ಪದಕ, ಧನ್ಯ ಎಂ. ಬೆಳ್ಳಿ ಪದಕ, ಪ್ರಣತಿ ಪಿ ಹೆಗಡೆ, ಕಂಚಿನ ಪದಕ, ಹರ್ಷಿತ್ ಎನ್. ನಾಯ್ಕ್ ಕಂಚಿನ ಪದಕ, ಶಿರಸಿ ಚಾಂಪಿಯನ್ಸ್ ಡೋಜೊ ದ ಕರಾಟೆ ವಿದ್ಯಾರ್ಥಿಗಳಾದ ಶ್ರೇಯಸ್ ಕೆ. ನಾಗರವಳ್ಳಿ ಚಿನ್ನದ ಪದಕ, ಧನುಷ್ ಕೆ. ನಾಗರವಳ್ಳಿ ಕಂಚಿನ ಪದಕ , ತನ್ಮಯ್ ಡಿ.ರಾವ್ ಕಂಚಿನ ಪದಕ,ಮೃದಲಾ ಚಾರ್ಜ್ ಕಂಚಿನ ಪದಕ, ಚಾಂಪಿಯನ್ಸ್ ಡೋಜೊ ಬಿಳೂರು ತರಬೇತಿ ಕೇಂದ್ರದ ವಿದ್ಯಾರ್ಥಿಗಳಾದ ಅಮೋಘ ಟಿ.ನಾಯ್ಕ ಬೆಳ್ಳಿ ಪದಕ, ಅಥರ್ವ ಆರ್. ನಾಯ್ಕ ಬೆಳ್ಳಿ ಪದಕ, ಪ್ರಜ್ವಲ್ ನಾಯ್ಕ ಕಂಚಿನ ಪದಕ, ಒಟ್ಟು ಆರು ಚಿನ್ನ, ಮೂರು ಬೆಳ್ಳಿ, ಆರು ಕಂಚಿನ ಪದಕಗಳನ್ನು ಪಡೆದುಕೊಂಡು ಚಾಂಪಿಯನ್ಸ್ ಟ್ರೋಫಿ ತನ್ನದಾಗಿಸಿಕೊಂಡಿದ್ದಾರೆ. ಅಮೋಘ ಟಿ. ನಾಯ್ಕ, ಫ್ರಾನ್ಸಿ ಪಿ. ಜೋತಾಡಿ , ಧನುಷ್ ಕೆ. ನಾಗರವಳ್ಳಿ, ಮೃದಲ ಜಾರ್ಜ್ ಇವರುಗಳು ಬೆಸ್ಟ್ ಪರ್ಫಾರ್ಮೆನ್ಸ್ ಅವಾರ್ಡ್ ಪಡೆದುಕೊಂಡಿರುತ್ತಾರೆ . ಹಾಗೆಯೇ ಜೈ ರಾಜೀವ ಕಾಮಾತ್ , ಶ್ರೀರಾಮ್ ರಾಜೀವ ಕಾಮತ , ಸೌಜನ್ಯ ಮಂಜುನಾಥ ಶೇಟ್, ಧನ್ಯ ಎಂ , ಪ್ರಣತಿ ಪ್ರಸನ್ನ ಹೆಗಡೆ , ವಜ್ರಶ್ರೀ ಹಾಲಪ್ಪ ಗೌಡ ತನ್ಮಯಿ ಡಿ ರಾವ್ ಇವರುಗಳು ಕಠಿಣ ಪರಿಶ್ರಮದಿಂದ ಉತ್ತಮ ಪ್ರದರ್ಶನದೊಂದಿಗೆ ಬ್ಲಾಕ್ ಬೆಲ್ಟ್ ಪದವಿಗಳನ್ನು ಪಡೆದುಕೊಂಡರು ಇವರುಗಳಿಗೆ ಕರಾಟೆ ಮಾಸ್ಟರ್ ಸೇನ್ಸಯ್ ಆನಂದ ಕೃಷ್ಣ ನಾಯ್ಕ ತರಬೇತಿಯನ್ನು ನೀಡಿದ್ದರು.