Slide
Slide
Slide
previous arrow
next arrow

‘ಏಕವ್ಯಕ್ತಿ ಯಕ್ಷಗಾನಕ್ಕೆ ಮಾರ್ಗದರ್ಶಿಸಿದ ಕಲಾತತ್ವಜ್ಞ ಡಾ.ಆರ್.ಗಣೇಶ್’

300x250 AD

ಹೊನ್ನಾವರ: ತಾಲೂಕಿನ ಗುಣವಂತೆಯ ಕೆರಮನೆಯ ಶಂಭು ಹೆಗಡೆ ಬಯಲು ರಂಗಮಂದಿರದಲ್ಲಿ ಹದಿನಾಲ್ಕನೇ ರಾಷ್ಟ್ರೀಯ ನಾಟ್ಯೋತ್ಸವವು ವಿದ್ಯುಕ್ತವಾಗಿ ಆರಾಧ್ಯ ದೇವ ಶ್ರೀ ಇಡಗುಂಜಿ ಮಹಾ ಗಣಪತಿಗೆ ಮಂಗಳಾರತಿ ಸಮರ್ಪಿಸುವುದರ ಮೂಲಕ ಶುಭಾರಂಭಗೊಂಡಿತು.

ಬಿಸುಕಂಸಾಳೆಯಯೊಂದಿಗೆ ಶಂಭು ಹೆಗಡೆ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ಮೆರವಣಿಗೆ ಮೂಲಕ ವೇದಿಕೆಗೆ ಅತಿಥಿ ಅಭ್ಯಾಗತರನ್ನು ಬರಮಾಡಿಕೊಳ್ಳಲಾಯಿತು. ಯಕ್ಷಗಾನ ಶೈಲಿಯಲ್ಲಿ ಅನಂತ ಕಡೆ ದಂತಳಿಕೆ ಗಣಪತಿ ಸ್ತುತಿಸಿದರು. ಹಿಮ್ಮೇಳದಲ್ಲಿ ಮೃದಂಗ ವಾದಕರಾಗಿ ನರಸಿಂಹ ಹೆಗಡೆ ಮತ್ತು ಚಂಡೆಯಲ್ಲಿ ಶ್ರೀಧರ ಗಡೆ ಸಾತ್ ನೀಡಿದರು. ಲಕ್ಷ್ಮಿನಾರಾಯಣ ಕಾಶಿ ಸರ್ವರನ್ನು ಸ್ವಾಗತಿಸಿದರೆ, ಶಿವಾನಂದ ಹೆಗಡೆ ಕಸೆ ಶಾಲು ಹಾಕಿ ಎಲ್ಲರನ್ನ ಗೌರವಿಸಿದರು. ಫೋಕ್ ಸಂಸ್ಥೆಯ ಕೇರಳ, ಅಧ್ಯಕ್ಷರಾದ ಡಾ. ಜಯರಾಜನ್ ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು. ನಾರಾಯಣ ಯಾಜಿ ಸಾಲೆಬೈಲ್ ಆಶಯ ನುಡಿಯನ್ನು ಪ್ರಸ್ತುತಪಡಿಸುತ್ತಾ ಶಂಭು ಹೆಗಡೆ ಯಕ್ಷಗಾನಕ್ಕೆ ಮಾತ್ರ ಸೀಮಿತವಾಗಿರಲಿಲ್ಲ, ಅವರ ಚಿಂತನ- ಮಂಥನ, ಪ್ರದರ್ಶನ ,ಕಲಾವಿಮರ್ಶೆ ಇವೆಲ್ಲದರ ಅನಾವರಣವೇ ನಾಟ್ಯೊತ್ಸವದ ಆಶಯವಾಗಿದೆ. ಯಕ್ಷಗಾನ ಇಷ್ಟಕ್ಕೇ ಸೀಮಿತವಾಗಿರದೇ, ನಾಟ್ಯೋತ್ಸವ ಎಲ್ಲ ನಾಟ್ಯ ಪ್ರಕಾರಗಳಿಗೆ ತೆರೆದುಕೊಂಡಿದೆ. ಯಕ್ಷಗಾನ ರಂಜನೆ ಮತ್ತು ಬೋಧನೆ ಎರಡಕ್ಕೂ ವಿಸ್ತಾರಗೊಳ್ಳಲಿ ಎಂದು ಆಶಿಸುತ್ತಾ ಶುಭ ಹಾರೈಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ. ಜಯರಾಜನ್, ಫ್ರಾನ್ಸ್‌ನ ಒಂದು ಹಳ್ಳಿಯಲ್ಲಿ ‘ಗನ್’ ಹಬ್ಬ ರಾಷ್ಟ್ರೀಯ ಆಯಾಮಗಳನ್ನು ಪಡೆದಂತೆ, ಇಂದು ಅಂತಹ ಯಕ್ಷಗಾನದ ಮತ್ತು ಕಲಾಪ್ರಕಾರದ ಪರಂಪರೆಯ ಸೇತುವಾಗಿ ರಾಷ್ಟ್ರೀಯತೆಗೆ ಈ ನಾಟ್ಯೋತ್ಸವ ವಿಸ್ತಾರಗೊಂಡಿದೆ ಎಂದು ಅಭಿಪ್ರಾಯಪಟ್ಟರು. ಡಾ. ಆರ್. ಗಣೇಶ್ ಅವರ ಅಭಿನಂದನಾ ನುಡಿಯನ್ನು ಗೈದ ದಿವಾಕರ ಹೆಗಡೆ ಮಾತನಾಡುತ್ತ ,ನಿಜವಾಗಲು ಯಕ್ಷಗಾನದಿಂದ ಕೆರಮನೆ ಪ್ರಖ್ಯಾತ. ಆದರೆ ನಾಟ್ಯೊತ್ಸವದಿಂದ  ನಾಟ್ಯ ಪ್ರಕಾರಗಳು ತೆರೆದುಕೊಳ್ಳುತ್ತದೆ. ಕಲೆಗೆ ಆಂತರಿಕ ಮೌಲ್ಯ ಮುಖ್ಯವಾದದ್ದು. ಕಲೆ ವೈಭವೀಕರಣ ಆಗಬಾರದು. ಗಣೇಶರವರು ಅವಧಾನ ಕಲೆಗೆ ಪುನರ್ಜೀವನ ನೀಡಿದವರು. ಡಾ. ಗಣೇಶ್ ಸಾರಸ್ವತ ಲೋಕದ ಬೆಳಗು ಮತ್ತು ಹೊಳಪು. ‘ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ’ ಎಂಬ ಧ್ಯೇಯದೊಂದಿಗೆ ಡಾ. ಗಣೇಶ್ ಅವರ ಬೌದ್ಧಿಕ ನೋಟ ಸಮಾಜಕ್ಕೆ ಸಿಕ್ಕಿದೆ. ಏಕವ್ಯಕ್ತಿ ಯಕ್ಷಗಾನಕ್ಕೆ ಮಾರ್ಗದರ್ಶನ ಮಾಡಿದ ಕಲಾತತ್ವಜ್ಞ ಡಾ. ಗಣೇಶ್ ಎಂದು ಅಭಿನಂದಿಸಿದರು.

ಅಭಿನಂದನಾ ಪ್ರಶಸ್ತಿ ಪಡೆದ ಡಾ. ಗಣೇಶ್ ಈ ಪ್ರಶಸ್ತಿಯಿಂದ ನನಗೆ ತುಂಬಾ ಸಂತೋಷವಾಗಿದೆ. ಶಂಭು ಹೆಗಡೆಯವರ ಒಡನಾಟದಿಂದ, ಅವರೊಂದಿಗಿನ ಮಾತುಕತೆಯಿಂದ ಯಕ್ಷಗಾನದ ಬಗ್ಗೆ ತುಂಬಾ ತಿಳಿದುಕೊಂಡಿದ್ದೇನೆ .ಯಕ್ಷಗಾನದ ಬಗ್ಗೆ ಏನಾದರೂ ಬರೆದ ವಸ್ತು ಅದು ಅವರ ಪ್ರೇರಣೆಯಿಂದ ಆದದ್ದು .ಶಂಭು ಹೆಗಡೆಯವರು ಮೌಲ್ಯಗಳಿಗೆ ಬದ್ಧತೆಯನ್ನು ಇಟ್ಟುಕೊಂಡು ಬೆಳೆದವರು.  ಶಿವರಾಮ ಹೆಗಡೆ ಪ್ರಶಸ್ತಿ ಪಡೆದಿರುವ ನನಗೆ ಅದು ಬೌದ್ಧಿಕ ಶಕ್ತಿಯನ್ನು ತಂದಿದೆ ಎಂದರು. ಲಕ್ಷ್ಮೀನಾರಾಯಣ ಕಾಶಿ ಇವರಿಗೆ ವಿಶೇಷ ಪುರಸ್ಕಾರದಿಂದ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಲಕ್ಷ್ಮಿ ನಾರಾಯಣ ಕಾಶಿ ಅವರು ಶಂಭು ಹೆಗಡೆಯವರ ಮೇಲಿನ ಪ್ರೀತಿಯಿಂದ ಸ್ವೀಕಾರ ಮಾಡಿದ್ದೇನೆ. ಭವ್ಯ ವ್ಯಕ್ತಿತ್ವ ಆಧರಿಸಿ ಆಗುತ್ತಿರುವ ನಾಟ್ಯೋತ್ಸವದಲ್ಲಿ ಕಳೆದ 14 ವರ್ಷಗಳಿಂದ ನಾನು ಭಾಗಿಯಾಗಿದ್ದೇನೆ ಎನ್ನುವುದೇ ಸೌಭಾಗ್ಯ .ಈ ಪ್ರಯತ್ನದ ಹೂಮಾಲೆಯಲ್ಲಿ ನಾನು ನೂಲಾಗಿದ್ದೇನೆ ಎಂದು ಭವಾನಾತ್ಮಕವಾಗಿ ನುಡಿದರು.

ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಡಾ. ಪ್ರಭಾಕರ್ ಜೋಶಿ ಮಾತನಾಡುತ್ತಾ ಕೆರೆಮನೆ ಕುಟುಂಬದೊಂದಿಗೆ ನನಗೆ 50 ವರ್ಷದ ಒಡನಾಟ ಇದೆ. ಭಾರತೀಯ ಸಂಸ್ಕೃತಿಯನ್ನು ಅರ್ಥ ಮಾಡಿ ಬರೆದ ವಿದ್ವಾಂಸರು ಡಾ. ಗಣೇಶ್. ಪಂಡಿತ ಪಾಮರರು ಹೆಮ್ಮೆಪಡುವ ಮನುಷ್ಯ ಡಾ. ಗಣೇಶ್. ಈ ಸಂದರ್ಭದಲ್ಲಿ ಡಾ. ಗಣೇಶ್ ರವರ ಬೌದ್ಧಿಕ ಸಂಪತ್ತು ಸಮಾಜಕ್ಕೆ ಅರ್ಪಿತವಾಗಬೇಕಾದರೆ ಅಕಾಡೆಮಿ ಅವರಿಗೆ ಒಬ್ಬ ಬರಹಗಾರರನ್ನ ನೇಮಿಸಬೇಕು, ಆ ಮೂಲಕವಾಗಿ ಅವರ ಬೌದ್ಧಿಕ ಸಂಪತ್ತು ಸಮಾಜದ ಸಂಪತ್ತು ಆಗುವಂತೆ ನಾವೆಲ್ಲ ಪ್ರಯತ್ನ ಪಡಬೇಕು ಎಂದು ಅಭಿಪ್ರಾಯಪಟ್ಟರು .ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರಮೋದ್ ಹೆಗಡೆ ಮಾತನಾಡುತ್ತಾ ಸಂಕಲ್ಪ ಸಂಸ್ಥೆಯ ಆರಂಭಕ್ಕೆ ಮತ್ತು ಅದನ್ನು ನಿರಂತರವಾಗಿ ಮುಂದುವರಿಸಿಕೊಂಡು ಬಂದಂತಹ ನನ್ನ ಪ್ರಯತ್ನಕ್ಕೆ ಶಂಭು ಹೆಗಡೆಯವರ ಪ್ರೇರಣೆ ಕಾರಣವಾಗಿದೆ. ಉತ್ತರ ಕನ್ನಡದ ಈ ಸಾಂಸ್ಕೃತಿಕ ಪರಿಸರಕ್ಕೆ ರಂಗಮಂದಿರದ ಅವಶ್ಯಕತೆ ಇದೆ ಇದನ್ನು ಸರಕಾರ ಗಮನಿಸಬೇಕು ಎಂದರು. ಅಧ್ಯಕ್ಷತೆ ವಹಿಸಿದ ಡಾ.  ಜಯರಾಜನ್ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ನಡೆಸುವುದು ಸುಲಭಮಾತ್ರವಲ್ಲ ,ಅಂತಹ ಒಂದು ಪ್ರಯತ್ನವನ್ನು ಅಶ್ವಮೇಧ ಯಾಗಕ್ಕೆ ಹೋಲಿಸಬಹುದಾಗಿದೆ. ಈ ಪ್ರಯತ್ನಕ್ಕೆ ಸಮಾಜ ,ಸರಕಾರ ಮತ್ತು ತಾವೆಲ್ಲ ಸಹಕರಿಸಬೇಕು, ತನ್ಮೂಲಕ ಪರಂಪರೆಯ ಉಳಿವಿಗಾಗಿ ರಾಷ್ಟ್ರೀಯ ನಾಟ್ಯೋತ್ಸವ ಮುಂದುವರಿಯಬೇಕು ಎಂದರು.

300x250 AD

ಉತ್ತರ ಕನ್ನಡದ ಉಸ್ತುವಾರಿ ಸಚಿವರು ಹಾಗೂ ಬಂದರು ಮತ್ತು ಮೀನುಗಾರಿಕೆ ಇಲಾಖೆಯ ಸಚಿವರು ಆದ ಮಂಕಾಳು ವೈದ್ಯ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

  ಶಿವಾನಂದ ಹೆಗಡೆ  ಸರ್ವರನ್ನು ವಂದಿಸಿದರು.

 ಕಾರ್ಯಕ್ರಮದ ನಂತರ ಲಿಂಗಯ್ಯ ಮತ್ತು ತಂಡದವರು ಬಿಸುಕಂಸಾಳೆ  ಪ್ರಸ್ತುತಪಡಿಸಿದರು. ಕೇರಳದಿಂದ ಬಂದ ಪೋಕ್ಲ್ಯಾಂಡ್ ತಂಡ ಕೇರಳ ನಟನಂ ಮತ್ತು ಮೋಹನ ಅಟ್ಟಂ ನೃತ್ಯಗಳನ್ನು ಪ್ರದರ್ಶಿಸಿದರು. ಆನಂತರದಲ್ಲಿ ಶ್ರೀಮತಿ ಸುಕನ್ಯಾ ರಾಮ್ ಗೋಪಾಲ್ ತಂಡದವರು ಅತ್ಯಂತ ಸುಂದರವಾಗಿ “ಸ್ತ್ರೀ ತಾಳಘಟತರಂಗ” ಪ್ರದರ್ಶಿಸಿದರು.

Share This
300x250 AD
300x250 AD
300x250 AD
Back to top