Slide
Slide
Slide
previous arrow
next arrow

ಯಕ್ಷಗಾನ ಅಕಾಡೆಮಿ ಪುನರ್ ರಚನೆಗೆ ಆಗ್ರಹ

300x250 AD

ಶಿರಸಿ: ರಾಜ್ಯ ಸರಕಾರವು ಕರ್ನಾಟಕ ಯಕ್ಷಗಾನ ಅಕಾಡೆಮಿಗೆ‌ ಕೇವಲ ದಕ್ಷಿಣ ಕನ್ನಡ, ಉಡುಪಿ,‌ ಕಾಸರಗೋಡಗೆ ಸೀಮಿತಗೊಳಿಸಿ ನೇಮಕಾತಿಗೊಳಿಸಿದೆ ಎಂದು ಅಕಾಡೆಮಿಯ ಮಾಜಿ ಅಧ್ಯಕ್ಷ, ಹಿರಿಯ ಕಲಾವಿದ ಡಾ. ಜಿ.ಎಲ್.ಹೆಗಡೆ ಆಕ್ಷೇಪಿಸಿದ್ದಾರೆ.

ಅವರು ಈ ಕುರಿತು ಪ್ರತಿಕ್ರಿಯೆ ನೀಡಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೋಲಾರ, ಮೈಸೂರು, ಚಿತ್ರದುರ್ಗ, ಬೆಂಗಳೂರು ಸೇರಿದಂತೆ ಹಲವಡೆ ಯಕ್ಷಗಾನವಿದೆ. ಬಡಗು, ಘಟ್ಟದಕೋರೆ, ಮೂಡಲಪಾಯ ಕ್ಷೇತ್ರಕ್ಕೂ ಅನ್ಯಾಯ ಆಗಿದೆ ಎಂದಿದ್ದಾರೆ. ಕರ್ನಾಟಕ ಯಕ್ಷಗಾನ ಅಕಾಡೆಮಿ ಆಗಬೇಕು. ಈ ಕಾರಣದಿಂದ ಅಕಾಡೆಮಿ ಪುನರ್ ರಚನೆ ಮಾಡಬೇಕು ಎಂದು ಸರಕಾರವನ್ನು ಒತ್ತಾಯಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top