Slide
Slide
Slide
previous arrow
next arrow

ಶಿರಸಿಗೆ ಆಗಮಿಸಿದ ಅಮ್ಮ ರಾಜಲಕ್ಷ್ಮಿ ಬೈಕ್ ರ‍್ಯಾಲಿ

300x250 AD

ಶಿರಸಿ: ಮಾ.2, ಶನಿವಾರದಂದು ಅಮ್ಮ ರಾಜಲಕ್ಷ್ಮಿಯವರು 21000 ಕಿ.ಮಿ. ಬೈಕ್ ರ‍್ಯಾಲಿ ಮುಖಾಂತರ ಕ್ರಮಿಸಿ ಶಿರಸಿಗೆ ಆಗಮಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಮ್ಮ ರಾಜಲಕ್ಷ್ಮಿ, ಮೋದಿಯವರನ್ನು 2024ರ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚಿನ ಮತದಿಂದ ಆರಿಸಿ ತರಲು ಜನರಲ್ಲಿ ಜಾಗೃತಿ ಮೂಡಿಸುವ ಕುರಿತು ತಾನು ರ‍್ಯಾಲಿ ನಡೆಸುತ್ತಿರುವುದಾಗಿ ತಿಳಿಸಿದರು. ಮತ್ತು ಮೋದಿ ಸರಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.

ಬಿ.ಜೆ.ಪಿ. ಜಿಲ್ಲಾ ಯುವಮೋರ್ಚಾ ವತಿಯಿಂದ ಅವರನ್ನು ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಯುವ ಮೋರ್ಚಾ ಜಿಲ್ಲಾಧ್ಯಕ್ಷರಾದ ಪ್ರೇಮಕುಮಾರ ನಾಯ್ಕ, ನಗರ ಮಂಡಳ ಅಧ್ಯಕ್ಷ ಆನಂದ ಸಾಲೇರ, ಹಾಗೂ ಮಹಿಳಾ ಮೋರ್ಚಾ ಸದಸ್ಯರುಗಳು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top