ಕುಮಟಾ: ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (RGUHS) ಜನವರಿಯಲ್ಲಿ ನಡೆಸಿದ ರಾಜ್ಯ ಮಟ್ಟದ ಸ್ನಾತಕೋತ್ತರ (MD) ಅಂತಿಮ ವರ್ಷದ ಪರೀಕ್ಷೆಗಳ ರ‌್ಯಾಂಕ್ ಪಟ್ಟಿ ಪ್ರಕಟಗೊಳಿಸಿದ್ದು, ಬಳ್ಳಾರಿಯ ತಾರಾನಾಥ ಸರಕಾರಿ ಆಯುರ್ವೇದ ಮಹಾವಿದ್ಯಾಲಯದ ರಸಶಾಸ್ತ್ರ ಮತ್ತು ಭೈಷಜ್ಯ ಕಲ್ಪನಾ ವಿಭಾಗದಲ್ಲಿ ಕುಮಟಾದ ಡಾ.ಪ್ರಜ್ಞಾ ಪ್ರಮೋದ ಹೆಗಡೆ ಇವರು ಡಿಸ್ಟಿಂಕ್ಷನ್‌ನೊಂದಿಗೆ ಉತ್ತೀರ್ಣಗೊಂಡು ವಿಶ್ವವಿದ್ಯಾಲಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಇವರು BAMS ಪದವಿಯನ್ನು ಶ್ರೀ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಉಡುಪಿಯಲ್ಲಿ ಪೂರ್ಣಗೊಳಿಸಿ MD Entrance Exam ನಲ್ಲಿ ರ ಪಡೆದು, ಸರಕಾರಿ ಆಯುರ್ವೇದ ಕಾಲೇಜಿನಲ್ಲಿ ಪ್ರವೇಶವನ್ನು ಪಡೆದುಕೊಂಡಿದ್ದರು.
ಡಾ. ಪ್ರಜ್ಞಾ ಹೆಗಡೆ ಇವರು ಕುಮಟಾ ತಾಲೂಕಿನ ಕಡೇಕೇರಿ ಪ್ರಮೋದ ಹೆಗಡೆ ಹಾಗೂ ಶ್ರೀಮತಿ ಕುಸುಮಾ ಹೆಗಡೆ, ಹೆಗಡೆ ದಂಪತಿಗಳ ಸುಪುತ್ರಿಯಾಗಿದ್ದಾಳೆ.