Slide
Slide
Slide
previous arrow
next arrow

ಮಕ್ಕಳ ಆಹ್ವಾನಕ್ಕೆ ಸಜ್ಜಾಗಿ ನಿಂತಿದೆ ‘ಕೂಸಿನಮನೆ’

300x250 AD

ಕಾರವಾರ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡುವ ಕೂಲಿಕಾರರ ಮಕ್ಕಳ ಲಾಲನೆ ಪಾಲನೆಗೆ ಅನುಕೂಲವಾಗುವಂತೆ “ಶಿಶುಪಾಲನಾ ಕೇಂದ್ರ” ನಿರ್ಮಿಸಲಾಗಿದ್ದು ಸ್ಥಳೀಯರ ಪ್ರಶಂಸೆಗೆ ಪಾತ್ರವಾಗಿದೆ. ಸಿದ್ದಾಪುರ ತಾಲೂಕಿನ ಕಂವಚೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಂವಚೂರು ಹಾಗೂ ಹಿತ್ತಲಕೊಪ್ಪ ವ್ಯಾಪ್ತಿಯ ಕೂಲಿಕಾರರ ಬೇಡಿಕೆಯಂತೆ 6ತಿಂಗಳಿಂದ 3ವರ್ಷದೊಳಗಿನ ಮಕ್ಕಳನ್ನು ಪೋಷಿಸಲು ಕೂಸಿನ ಮನೆ ನಿರ್ಮಿಸಲಾಗಿದೆ. ಕೂಲಿ ಕೆಲಸದ ವೇಳೆ ತಾಯಂದಿರಿಗೆ ಅನುಕೂಲವಾಗುವಂತೆ ನರೇಗಾ ಯೋಜನೆಯಡಿ ಈ ಸೌಲಭ್ಯ ಕಲ್ಪಿಸಿದ್ದು, ಸುತ್ತಲಿನ ಮಕ್ಕಳ ತಾಯಂದಿರಿಗೆ ನಿಶ್ಚಿಂತರಾಗಿ ಮಗುವನ್ನು ಬಿಟ್ಟು ಕೆಲಸಕ್ಕೆ ಹೋಗಬಹುದಾಗಿದೆ.

ಇನ್ನು ಕೂಸಿನ ಮನೆಯೊಂದರಲ್ಲಿ ವಿಶಾಲವಾದ ಕೋಣೆ, ಇದಕ್ಕೆ ಹೊಂದಿಕೊಂಡಂತೆ ಅಡುಗೆ ಕೋಣೆ ಹಾಗೂ ಸುಸಜ್ಜಿತ ಶೌಚಾಲಯ ಹಾಗೂ ಬಾತ್ ರೂಮ್, ಹಾಗೂ ಮಕ್ಕಳಿಗೆ ಆಟವಾಡಲು ಆಟೋಪಕರಣಗಳು ಮತ್ತು ಪೀಠೋಪಕರಣಗಳು, ಹಾಗೂ ಮಕ್ಕಳಿಗೆ ಊಟೋಪಚಾರಕ್ಕೆ ಬೇಕಾದ ಸಾಮಗ್ರಿಗಳನ್ನು ಒದಗಿಸಲಾಗಿದೆ. ಮಕ್ಕಳ ಆರೈಕೆಯಲ್ಲಿ ನರೇಗಾದಡಿ ಕೆಲಸ ನಿರ್ವಹಿಸುವ 10ನೇ ತರಗತಿ ಪಾಸಾಗಿರುವ ಮಹಿಳೆಯರಿಗೆ ಸೂಕ್ತವಾದ ತರಬೇತಿ ನೀಡಿ ಮಕ್ಕಳ ಆರೈಕೆಗೆ ತೊಡಗಿಸಿಕೊಳ್ಳಲಾಗುತ್ತದೆ. ನಮ್ಮ ತಾಲೂಕಿನಲ್ಲಿ ಒಟ್ಟು 5 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೂಸಿನಮನೆ ಸೌಲಭ್ಯ ಕಲ್ಪಿಸಲು ಮುಂದಾಗಿದ್ದು, ಈಗಾಗಲೇ 3 ಪೂರ್ಣಗೊಂಡಿದ್ದು, ಇನ್ನು 2 ಪ್ರಗತಿಯಲ್ಲಿವೆ. ಈ ಕೂಸಿನ ಮನೆಗೆ ಸಂಬಂಧಿಸಿದ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಆರೈಕೆದಾರರು ಮುತುವರ್ಜಿಯಿಂದ ಕಾರ್ಯ ನಿರ್ವಹಿಸಬೇಕು ಎಂದು ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ದೇವರಾಜ್ ಹಿತ್ತಲಕೊಪ್ಪ ತಿಳಿಸಿದರು. ಕೂಸಿನ ಮನೆ ನಿರ್ಮಾಣದಿಂದ ಸುತ್ತಲಿನ ಕೂಲಿಕಾರರು ನೆಮ್ಮದಿಯಿಂದ ದುಡಿಮೆಗೆ ಹೋಗಬಹುದು. ಮಕ್ಕಳ ಆರೋಗ್ಯ ಹಾಗೂ ಬೌದ್ಧಿಕ ಶಕ್ತಿಯ ವೃದ್ಧಿಗೂ ಇದು ಸಹಾಯಕವಾಗುತ್ತದೆ ಎಂದು ಗ್ರಾವಪಂಚಾಯತ್ ಅಭಿವೃದ್ಧಿ ಅಧಿಕಾರಿ ಕವನಕುಮಾರ್ ಯು. ತಿಳಿಸಿದರು.

300x250 AD
Share This
300x250 AD
300x250 AD
300x250 AD
Back to top