ದಾಂಡೇಲಿ : ನಾಡಿನ ಸೌಹಾರ್ದತೆಯಲ್ಲಿ ನಂಬಿಕೆಯಿಟ್ಟ ಎಲ್ಲಾ ಸಮಾನ ಮನಸ್ಸಿನ ಸಂಘಟನೆಗಳ ವೇದಿಕೆ “ಸೌಹಾರ್ದ ಕರ್ನಾಟಕ” ದ ಕರೆಯ ಮೇರೆಗೆ ಮಹಾತ್ಮಗಾಂಧೀಜಿಯವರ ಹುತಾತ್ಮ ದಿನವಾದ ಜನವರಿ 30 ರಂದು ಮಧ್ಯಾಹ್ನ 12 ಗಂಟೆಗೆ ನಗರದ ಸೋಮಾನಿ ವೃತ್ತದಲ್ಲಿ ಸೌಹಾರ್ದತೆಗಾಗಿ ಕೈಜೋಡಿಸುವ ಅಭಿಯಾನದ ನಿಮಿತ್ತ ಸೌಹಾರ್ದತಾ ಮಾನವ ಸರಪಳಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಅಂದು ಈ ಕಾರ್ಯಕ್ರಮದಲ್ಲಿ ಗಾಂಧಿಜೀಯವರ ಭಾವಚಿತ್ರಕ್ಕೆ ಗೌರವ ಸಲ್ಲಿಸಿ, ನಂತರ ಮಾನವಸರಪಳಿ ರಚಿಸಿ ಸಂವಿಧಾನ ಆಶಯಗಳ ಪ್ರತಿಜ್ಞಾವಿಧಿ ಸ್ವೀಕರಿಸಲಾಗುವುದು. ಜನತೆಯ ನಡುವೆ ಸೌಹಾರ್ದ ಸಂದೇಶವನ್ನು ಬಲಪಡಿಸುವ, ಸಂವಿಧಾನದ ಆಶಯದಂತೆ ದೇಶದ ಏಕತೆ, ಸಮಾನತೆ, ಬಂಧುತ್ವ, ಸಾರ್ವಭೌಮತ್ವವನ್ನು ಕಾಪಾಡಿಕೊಂಡು ಹೋಗುವ ನಿಟ್ಟಿನಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ನಗರದ ಪ್ರಜ್ಞಾವಂತ ನಾಗರಿಕರು, ಸಾಹಿತಿಗಳು, ಕಲಾವಿದರು, ಬರಹಗಾರರು, ಜನಪರ ಸಂಘಟನೆಗಳು ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟಕ ಹಾಗೂ ಡಿವೈಎಫ್ಐ ರಾಜ್ಯ ಸಮಿತಿ ಸದಸ್ಯರಾದ ಡಿ.ಸ್ಯಾಮಸನ್ ಪ್ರಕಟಣೆಯ ಮೂಲಕ ವಿನಂತಿಸಿದ್ದಾರೆ.