Slide
Slide
Slide
previous arrow
next arrow

ಆನೆ ಮಾವುತರನ್ನು ಖಾಯಂಗೊಳಿಸುವ ಬಗ್ಗೆ ಸಿಎಂ ಜೊತೆ ಚರ್ಚೆ : ಮಂಕಾಳ್ ವೈದ್ಯ

300x250 AD

ದಾಂಡೇಲಿ : ಅರಣ್ಯ ಇಲಾಖೆಯ ಸುಪರ್ದಿಯಲ್ಲಿರುವ ಆನೆ ಮಾವುತರನ್ನು ಖಾಯಂಗೊಳಿಸುವ ಬಗ್ಗೆ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ.ದೇಶಪಾಂಡೆ ಜೊತೆ ಸೇರಿ ಸರಕಾರಕ್ಕೆ‌‌ ಮನವಿ ಮಾಡಲಾಗುವುದು ಮತ್ತು ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದೆಂದು ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳ್.ಎಸ್.ವೈದ್ಯ ಅವರು ಹೇಳಿದರು.

ಅವರು ಭಾನುವಾರ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ ಮಾತನಾಡಿ, ಅರಣ್ಯ ಇಲಾಖೆಯ ಸುಪರ್ದಿಯಲ್ಲಿರುವ ಆನೆಗಳ ಮಾವುತರು ಸಾಕಷ್ಟು ವರ್ಷಗಳ ಕಾಲ ಜೀವದ ಹಂಗು ತೊರೆದು ಸೇವೆಯನ್ನು ಸಲ್ಲಿಸುತ್ತಿದ್ದರೂ, ಆನೆ ಮಾವುತರ ನೇಮಕಾತಿಯ ಸಂದರ್ಭ ಅವರ ಸೇವೆಯನ್ನು ಪರಿಗಣಿಸದೆ ಕೇವಲ ದಾಖಲಾತಿಗಳನ್ನಷ್ಟೇ ಪರಿಗಣಿಸುತ್ತಿರುವುದರಿಂದ, ಕಳೆದ ಅನೇಕ ವರ್ಷಗಳಿಂದ ಜೀವದ ಹಂಗು ತೊರೆದು ಕೆಲಸ ನಿರ್ವಹಿಸುವ ಮಾವುತರಿಗೆ ಅನ್ಯಾಯವಾಗುತ್ತಿದೆ. ಇದರಿಂದ ಮಾವುತರ ಮತ್ತು ಮಾವುತರನ್ನು ನಂಬಿದ ಅವರ ಕುಟುಂಬಸ್ಥರಿಗೆ ಅಭದ್ರತೆ ಕಾಡತೊಡಗಿದೆ. ಇದೇ ಸ್ಥಿತಿಯಲ್ಲಿ ಜೋಯಿಡಾ ತಾಲೂಕಿನ ಪಣಸೋಲಿ ಆನೆ ಶಿಬಿರದ ಮಾವುತರು ಉದ್ಯೋಗದ ಅಭದ್ರತೆಯಲ್ಲಿದ್ದು, ಆನೆ ಮಾವುತರನ್ನು ಖಾಯಂ‌ ಮಾಡಲು ಕೂಡಲೇ ಸರಕಾರ ಅಗತ್ಯ ಕ್ರಮವನ್ನು ಕೈಗೊಳ್ಳುವಂತೆ ಮಾಧ್ಯಮದವರ ಮನವಿಗೆ ಉತ್ತರಿಸಿದ ಮಂಕಾಳ್.ಎಸ್.ವೈದ್ಯ ಈ ಬಗ್ಗೆ ಆರ್.ವಿ.ದೇಶಪಾಂಡೆ ಮಾರ್ಗದರ್ಶನದಲ್ಲಿ ಅವರ ಜೊತೆಗೂಡಿ ಸರಕಾರದ ಗಮನಹರಿಸಿ, ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ, ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆಯನ್ನು ನೀಡಿದರು.

300x250 AD
Share This
300x250 AD
300x250 AD
300x250 AD
Back to top