ಶಿರಸಿ: ವಿದ್ಯಾರ್ಥಿಗಳು ಜೀವನದಲ್ಲಿ ಮೌಲ್ಯಯುತ ಗುಣಗಳನ್ನು ಬೆಳೆಸಿಕೊಂಡು ತಮ್ಮ ಹೆತ್ತವರನ್ನು ಹಿರಿಯರನ್ನು ಗೌರವಿಸಿ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬದುಕಬೇಕು. ಮುಂದೆ ಸ್ವತಂತ್ರವಾಗಿ ಬದುಕು ಕಟ್ಟಿಕೊಂಡಾಗ ದುಡಿಮೆಯ ಕೆಲ ಅಂಶವನ್ನು ಸಮಾಜ ಸೇವೆಗೆ ನೀಡುವಂತಾಗಬೇಕೆಂದು ಶಿರಸಿ ಲಯನ್ಸ್ ಕ್ಲಬ್ ಅಧ್ಯಕ್ಷ ಅಶೋಕ ಹೆಗಡೆ ನುಡಿದರು.
ಅವರು ಲಯನ್ಸ್ ಕ್ಲಬ್ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾಡನಕೇರಿಯಲ್ಲಿ ನಿರ್ಮಿಸಿದ ನೂತನ ಧ್ವಜಕಟ್ಟೆ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದರು. ಮಾಡನಕೇರಿ ಶಾಲೆಯಲ್ಲಿ ಸ್ಕೌಟ್ ಶಾಖೆ ಇರುವುದನ್ನು ಗಮನಿಸಿ ಸಂತಸ ವ್ಯಕ್ತಪಡಿಸಿ ಎಲ್ಲ ಸ್ಕೌಟ್ಸ್ ಗಳಿಗೆ ಗಿಫ್ಟ್ ಕಳಿಸಿಕೊಡುವುದಾಗಿ ತಿಳಿಸಿದರು. ಶಿಕ್ಷಕರಾದ ಎನ್.ಎಸ್.ಭಾಗ್ವತ್ ಪ್ರಾಸ್ತಾವಿಕವಾಗಿ ಮಾತನಾಡಿ ಲಯನ್ಸ್ ಕ್ಲಬ್ ನ ಕೊಡುಗೆ ಹಾಗೂ ಅಶೋಕ ಹೆಗಡೆಯವರ ಸಹಾಯವನ್ನು ಸ್ಮರಿಸಿದರು. ಇದೇ ಸಂದರ್ಭದಲ್ಲಿ ವೈಯಕ್ತಿಕವಾಗಿ ಹಾಗೂ ಲಯನ್ಸ್ ಕ್ಲಬ್ ವತಿಯಿಂದ ಧನಸಹಾಯ ನೀಡಿದ ಅಶೋಕ ಹೆಗಡೆಯವರನ್ನು ಎಸ್.ಡಿ.ಎಂ.ಸಿ. ವತಿಯಿಂದ ಗೌರವಿಸಲಾಯಿತು. ವೇದಿಕೆಯಲ್ಲಿ ಲಯನ್ಸ್ ಕ್ಲಬ್ ನ ಜ್ಯೋತಿ ಅಶ್ವಥ್ ಹೆಗಡೆ, ಎಂ.ಆಯ್ ಹೆಗಡೆ, ವಿನಾಯಕ ಭಾಗ್ವತ್ , ಎಸ್.ಡಿ.ಎಂ.ಸಿ. ಅಧ್ಯಕ್ಷ ಅಣ್ಣಪ್ಪ ನಾಯ್ಕ, ಉಪಾಧ್ಯಕ್ಷೆ ಶ್ರೀಮತಿ ರೇಖಾ ಗೌಡರ್ ಮುಖ್ಯಾಧ್ಯಾಪಕರಾದ ಶ್ರೀಮತಿ ಎಚ್.ಪಿ.ಗೀತಾ ಹಾಗೂ ಶಿಕ್ಷಕರಾದ ಎನ್.ಎಸ್. ಭಾಗ್ವತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕರಾದ ಎನ್.ಎಸ್.ಭಾಗ್ವತ್ ಸ್ವಾಗತಿಸಿ ನಿರ್ವಹಿಸಿದರು. ದರ್ಶನ ಶೆಟ್ಟಿ ವಂದಿಸಿದರು. ಲಯನ್ಸ್ ಕ್ಲಬ್ ವತಿಯಿಂದ ನೆನಪಿನ ಕಾಣಿಕೆ ನೀಡಲಾಯಿತು.