Slide
Slide
Slide
previous arrow
next arrow

ದಾಂಡೇಲಿ-ಅಳ್ನಾವರ ರೈಲ್ವೆ ಸಂಚಾರ ಪುನರಾರಂಭಕ್ಕೆ ಆಗ್ರಹ

300x250 AD

ದಾಂಡೇಲಿ : ಈಗಾಗಲೇ ಸ್ಥಗಿತಗೊಂಡಿರುವ ದಾಂಡೇಲಿ- ಅಳ್ನಾವರ ಪ್ಯಾಸೆಂಜರ್ ರೈಲು ಸಂಚಾರವನ್ನು ಪುನರಾರಂಭಿಸುವಂತೆ ನಗರಸಭೆಯ ನಿಕಟ ಪೂರ್ವ ಉಪಾಧ್ಯಕ್ಷರಾದ ಸಂಜಯ್ ನಂದ್ಯಾಳ್ಕರ್ ನಗರದಲ್ಲಿ‌ ಬುಧವಾರ ಮಾಧ್ಯಮದ ಮೂಲಕ ಆಗ್ರಹಿಸಿದ್ದಾರೆ.

ಬಹು ವರ್ಷಗಳ ಹೋರಾಟದ ಫಲಶೃತಿಯಾಗಿ ರೈಲ್ವೆ ಸಂಚಾರವನ್ನು ಪುನರಾರಂಭಿಸಲಾಗಿತ್ತು. ಆದರೆ ಕೋವಿಡ್ ಸಂದರ್ಭದಲ್ಲಿ ರೈಲ್ವೆ ಸಂಚಾರವನ್ನು ಸ್ಥಗಿತಗೊಳಿಸಲಾಗಿದ್ದು, ಆನಂತರ ಪುನರಾರಂಭ ಮಾಡಿಲ್ಲ. ಕೈಗಾರಿಕಾ ನಗರಿಯಾಗಿರುವ ದಾಂಡೇಲಿಯು ಇದೀಗ ಪ್ರವಾಸೋದ್ಯಮ ನಗರವಾಗಿಯೂ ಶರವೇಗದಲ್ಲಿ ಬೆಳೆಯುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ದಾಂಡೇಲಿಗೆ ಬರುತ್ತಿದ್ದಾರೆ. ಈ ನಿಟ್ಟಿನಲ್ಲಿ ದಾಂಡೇಲಿ- ಅಳ್ನಾವರ ರೈಲು ಸಂಚಾರವನ್ನು ಪುನರಾರಂಭಿಸಬೇಕು . ಈ ಬಗ್ಗೆ ಕೇಂದ್ರ ಸರಕಾರ ಹಾಗೂ ರೈಲ್ವೆ ಇಲಾಖೆ ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದ ಸಂಜಯ್ ನಂದ್ಯಾಳ್ಕರ್, ಈ ಬಗ್ಗೆ ಕ್ರಮ ಕೈಗೊಳ್ಳದೆ ಇದ್ದ ಪಕ್ಷದಲ್ಲಿ ಹೋರಾಟ ಅನಿವಾರ್ಯ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

300x250 AD
Share This
300x250 AD
300x250 AD
300x250 AD
Back to top