Slide
Slide
Slide
previous arrow
next arrow

ಕಡತೋಕಾ ಸ್ವಯಂಭೂ ದೇವರಿಗೆ ವಿಶೇಷ ಅರ್ಚನೆ: ಭಜನಾ ಸೇವೆ

300x250 AD

ಹೊನ್ನಾವರ: ಅಯೋಧ್ಯೆಯ ನೂತನ ರಾಮಮಂದಿರ ಲೋಕಾರ್ಪಣೆ ಮತ್ತು ಶ್ರೀ ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಯ ಶುಭಸಂದರ್ಭದಲ್ಲಿ ಕಡತೋಕದ ಗ್ರಾಮದೇವಾಲಯ ಶ್ರೀ ಸ್ವಯಂಭೂ ದೇವಾಲಯದಲ್ಲಿ ಶ್ರೀ ರಾಮ ಮತ್ತು ಶ್ರೀ ಸ್ವಯಂಭೂ ದೇವರಿಗೆ ವಿಶೇಷ ಅರ್ಚನೆ ಮತ್ತು ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.

ಶ್ರೀರಾಮ ಮಂತ್ರ ಪಠಣ ಮತ್ತು ಶ್ರೀ ರಾಮ ಭಜನೆ ಹಾಗೂ ಪಂಚ ವಾದ್ಯ ಸೇವೆ, ಅಲ್ಪೋಪಹಾರ ಸಿಹಿ ವಿತರಣೆ ಕೈಗೊಳ್ಳಲಾಯಿತು. ಲೋಕ ಕಲ್ಯಾಣಕ್ಕಾಗಿ ಮತ್ತು ರಾಮ ಮಂದಿರ ಲೋಕಾರ್ಪಣೆ ಮತ್ತು ಶ್ರೀ ರಾಮಲಲ್ಲಾ ವಿಗ್ರಹ ಪ್ರಾಣ ಪ್ರತಿಷ್ಟಾಪನೆ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ ಪರವಾಗಿ ಪ್ರಾರ್ಥನೆ ಮಾಡಿಕೊಳ್ಳಲಾಯಿತು.

300x250 AD

ಈ ಸಂದರ್ಭದಲ್ಲಿ ಜಿ ಪಂ ಮಾಜಿ ಸದಸ್ಯ ಶಿವಾನಂದ ಹೆಗಡೆ, ಗ್ರಾಮ ಪಂಚಾಯತ ಅಧ್ಯಕ್ಷೆ ಶ್ರೀಮತಿ ಸಾವಿತ್ರಿ ಶ್ರೀಕೃಷ್ಣ ಭಟ್ಟ, ಶಂಭು ಹೆಗಡೆ ಸಂತನ್, ವಿಎಫ್‌ಸಿ ಅಧ್ಯಕ್ಷ ಎಲ್.ಎನ್. ಭಟ್ಟ, ಗ್ರಾಪಂ. ಸದಸ್ಯರಾದ ರಾಘವೇಂದ್ರ ಹೆಗಡೆ ಮತ್ತು ರಾಮಚಂದ್ರ ನಾಯ್ಕ, ಅಣ್ಣಪ್ಪ ಹೆಗಡೆ, ರಾಮಚಂದ್ರ ಜಟ್ಟಿ ನಾಯ್ಕ, ಶ್ರೀನಾಥ ಶೆಟ್ಟಿ, ಎನ್.ಆರ್. ಹೆಗಡೆ ನವಿಲಗೋಣ, ಬಾಲು ಭಂಡಾರಿ, ಗೋಪಾಲಕೃಷ್ಣ ಭಟ್ಟ ಹೆಬ್ಲೆಕೇರಿ, ಗಣೇಶ ಭಟ್ಟ, ಗಜಾನನ ಭಟ್ಟ ಕೆಕ್ಕಾರ, ಆರ್.ಎಲ್. ಭಾಗ್ವತ್ ,ಶಿವ ಶಾನಭಾಗ್, ವಲಯಾಧ್ಯಕ್ಷ ಸುಬ್ರಾಯ ಹೆಗಡೆ, ಎಸ್. ಆರ್.ಹೆಗಡೆ ಜಡ್ಡಿಗದ್ದೆ, ಮಹೇಶ ಸಿದ್ದನ,ಎಸ್.ಆರ್. ಹೆಗಡೆ, ಶ್ರೀಕೃಷ್ಣ ಭಟ್ಟ ಕಂಚಿ, ಉದಯ ನಾಯ್ಕ ಜಡ್ಡಿಗದ್ದೆ, ಪ್ರಭಾಕರ್ ಭಂಡಾರಿ, ಜಗದೀಶ ನಾಯ್ಕ, ಎಚ್.ಎಸ್. ಭಂಡಾರಿ, ನರಸಿಂಹ ಶೆಟ್ಟಿ, ಉದಯ ನಾಯ್ಕ, ಮಂಜುನಾಥ್ ಗೌಡ, ಕಮಲ ಹೆಗಡೆ ಮುಂತಾದವರು ಭಾಗವಹಿಸಿದ್ದರು.

Share This
300x250 AD
300x250 AD
300x250 AD
Back to top