ಸಿದ್ದಾಪುರ: ತಾಲೂಕಿನ ಹಿತ್ಲಕೈನ ಒಡ್ಡೋಲಗ ರಂಗಪರ್ಯಟನ ಇವರಿಂದ ಪಟ್ಟಣದ ಶಂಕರಮಠದಲ್ಲಿ ಜ.21ರಂದು ಸಂಜೆ 6ರಿಂದ ವಿವೇಕ ಶಾನಭಾಗ ರಚನೆಯ ಗಣಪತಿ ಬಿ.ಹಿತ್ಲಕೈ ನಿರ್ದೇಶನದ ‘ಬಹುಮುಖಿ’ ನಾಟಕ ಪ್ರದರ್ಶನಗೊಳ್ಳಲಿದೆ. ಪ್ರದರ್ಶನ ಉದ್ಘಾಟನೆಯಲ್ಲಿ ಲೇಖಕ ಗಣೇಶ ಅಮಿನಗಡ, ಕದಂಬ ಸೈನ್ಯ ಸಂಸ್ಥಾಪಕ ರಾಜ್ಯಾಧ್ಯಕ್ಷ ರಮೇಶ ಬೇಕ್ರಿ ಮಂಡ್ಯ, ಪತ್ರಕರ್ತ ಗಂಗಾಧರ ಕೊಳಗಿ ಉಪಸ್ಥಿತರಿರುತ್ತಾರೆ. ನಂತರ ಬಹುಮುಖಿ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಒಡ್ಡೋಲಗ ಅಧ್ಯಕ್ಷ ಗಣಪತಿ ಬಿ.ಹಿತ್ಲಕೈ ತಿಳಿಸಿದ್ದಾರೆ.