ಶಿರಸಿ: ವಾಹನ ಚಲಾಯಿಸುವಾಗ ಅತ್ಯಂತ ಎಚ್ಚರಿಕೆ ಹಾಗೂ ಜಾಗೃತರಾಗಿ ವಾಹನ ಚಲಾಯಿಸಿ, ತನ್ಮೂಲಕ ಪ್ರತಿಯೊಬ್ಬ ವ್ಯಕ್ತಿ ಅವರವರ ಜಾಗೃತೆ ವಹಿಸಿದಾಗ ಅವಘಡಗಳು ತಪ್ಪುತ್ತದೆ ಎಂದು ಶಿರಸಿ ಐ.ಎಂ.ಎ ಅಧ್ಯಕ್ಷ ಡಾ.ಮಧುಕೇಶ್ವರ ಜಿ.ವಿ ಹೇಳಿದರು. ನಗರದ ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ನಡೆಸಲಾದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ 2024ನ್ನು ಉದ್ಘಾಟಿಸಿ, ಮಾತನಾಡಿದರು.
ಜನಸಂಖ್ಯೆ ಹೆಚ್ಚಿದಂತೆ ವಾಹನಗಳ ಸಂಖ್ಯೆಯೂ ಹೆಚ್ಚಾಗಿದ್ದು, ವಾಹನ ಸವಾರರು ಅಧಿನಿಯಮಗಳನ್ನು ಪಾಲಿಸಿ, ಸಾಗಬೇಕೆಂದರು. ಶಿರಸಿ ಹೊಸ ಮಾರುಕಟ್ಟೆ ಠಾಣೆ ಪಿ.ಎಸ್.ಐ ರತ್ನಾ ಕುರಿ ಜಾಗೃತ ಮಾಹಿತಿ ಪತ್ರವನ್ನು ಬಿಡುಗೊಳಿಸಿ, ಮಾತನಾಡಿ, ದ್ವಿಚಕ್ರ ವಾಹನ ಸವಾರರು ಹಾಗೂ ಹಿಬಂದಿ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಕಾರು ಚಾಲಕರು ಸೀಟ್ ಬೆಲ್ಟ್ ಧರಿಸಬೇಕು. ಪ್ರತಿಯೊಬ್ಬರೂ ಸಂಚಾರ ನಿಯಮ ಪಾಲಿಸಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಆರ್.ಟಿ.ಓ ಯಲ್ಲಪ್ಪ ಪಡಸಾಲಿ, ರಸ್ತೆ ಸುರಕ್ಷತಾ ನಿಯಮಗಳನ್ನು ವಿವರಿಸಿದರು. ವೇದಿಕೆಯಲ್ಲಿ ಹಿರಿಯ ಮೋಟಾರು ವಾಹನ ನಿರೀಕ್ಷಕ ಶಂಕರ ಕುಲಕರ್ಣಿ ಉಪಸ್ಥಿತರಿದ್ದರು. ಶಿರಸಿ ಆರ್.ಟಿ.ಓ ಇಲಾಖೆಯ ಅಧೀಕ್ಷಕ ಸುಬ್ರಾಯ ಹೆಗಡೆ ಸ್ವಾಗತಿಸಿ, ನಿರೂಪಿಸಿದರು. ಸಹಾಯಕ ನಾಗರಾಜ ಹೆಗಡೆ ವಂದಿಸಿದರು.