ದಾಂಡೇಲಿ : ಸರ್ವರಿಗೂ ಸಮಪಾಲು ಎಂಬಂತೆ ಸರ್ವಧರ್ಮ ಸಮನ್ವಯತೆಯನ್ನು ಸಾರುವ ಪಕ್ಷ ಕಾಂಗ್ರೆಸ್ ಪಕ್ಷ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತದಂತೆ ಪಕ್ಷದ ಮುಖೇನವಾಗಿ ದೊರೆತ ಅವಕಾಶವನ್ನು ದಾಂಡೇಲಿಯ ಸಮಗ್ರ ಅಭಿವೃದ್ಧಿಗೆ ಬಳಸಿಕೊಳ್ಳುವಂತೆ ಕಾಂಗ್ರೆಸ್ ಜಿಲ್ಲಾ ಅಲ್ಪಸಂಖ್ಯಾತರ ಕಾರ್ಯದರ್ಶಿ ದಾದಾಪೀರ ನದಿಮುಲ್ಲಾ ಕರೆ ನೀಡಿದರು.
ಅವರು ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಗರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ಶಾಹಿದಾ ಪಠಾಣ್, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾಗಿ ಆಯ್ಕೆಯಾದ ರೇಣುಕಾ ಬಂದಂ,ಮೊಹಮ್ಮದ್ ರಫೀಕ್ ಖಾನ್, ಅವಿನಾಶ ಘೋಡ್ಕೆ, ಪ್ರತಾಪ ಸಿಂಗ್ ರಜಪೂತ, ಹಾಗೂ ಆಶ್ರಯ ಸಮಿತಿಗೆ ಆಯ್ಕೆಯಾದ ಉಸ್ಮಾನ್ ಮುನ್ನಾ ವಹಾಬ್, ಪ್ರಭು ದಾಸ ಎನಿಬೇರ, ಪ್ರಮಿಳಾ ಮಾನೆ, ಸರಸ್ವತಿ ಚೌವ್ಹಾಣ ಮತ್ತು ರೇಣುಕಾ ಭಜಂತ್ರಿ ಅವರನ್ನು ತಮ್ಮ ವೈಯಕ್ತಿಕ ನೆಲೆಯಲ್ಲಿ ಶಾಲು ಹೊದಿಸಿ, ಸನ್ಮಾನಿಸಿ ಮಾತನಾಡುತ್ತಿದ್ದರು. ದೊರೆತ ಅವಕಾಶವನ್ನು ದಾಂಡೇಲಿಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಬಳಸಿಕೊಳ್ಳುವ ಮೂಲಕ ದೇಶಪಾಂಡೆಯವರಿಟ್ಟ ನಂಬಿಕೆಯನ್ನು ಉಳಿಸುವ ಕಾರ್ಯ ಮಾಡಬೇಕು. ಆರ್.ವಿ.ದೇಶಪಾಂಡೆಯವರು ನಮ್ಮ ಕ್ಷೇತ್ರದ ನಾಯಕರಾಗಿರುವುದು ನಮಗೆಲ್ಲ ಬಹುದೊಡ್ಡ ಶಕ್ತಿ. ಇಡೀ ರಾಷ್ಟ್ರವೇ ಹೆಮ್ಮೆಪಡುವಂತಹ ಕ್ರಿಯಾಶೀಲ ಹಾಗೂ ಮುತ್ಸದ್ದಿ ರಾಜಕಾರಣಿಯನ್ನು ನಾವು ಹೊಂದಿದ್ದೇವೆ. ದೇಶಪಾಂಡೆ ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಒಂದಾಗಿ ಪಕ್ಷ ಸಂಘಟಿಸುವುದರ ಜೊತೆಗೆ ತಾಲೂಕಿನ ಸರ್ವತೋಮುಖ ಪ್ರಗತಿಗೆ ನಮ್ಮನ್ನು ನಾವು ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.
ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ರೇಣುಕಾ ಬಂದಂ ಅವರು ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾಗಿ ಆಯ್ಕೆ ಮಾಡಿದ ಆರ್.ವಿ.ದೇಶಪಾಂಡೆಯವರಿಗೆ ಧನ್ಯವಾದ ಸಲ್ಲಿಸಿ, ನೀಡಿದ ಜವಾಬ್ದಾರಿಯುತ ಕೆಲಸವನ್ನು ನಿಷ್ಠೆಯಿಂದ ಮಾಡುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ನಗರ ಸಭಾ ಸದಸ್ಯರಾದ ಮಹಾದೇವ ಜಮಾದಾರ, ಪ್ರಮುಖರಾದ ಪರಶುರಾಮ ಸೂರಿ, ಕಿರಣ್, ಪ್ರಕಾಶ, ಶಬಾನಾ, ರೇಷ್ಮಾ ಮೆಟಗುಡ್, ರೇಣುಕಾ, ಮಕ್ತುಂ ವಸಂತಾ ಕುರುಗಟ್ಟಿ, ಕಿರಣ ಸಿಂಗ್ ರಜಪೂತ್, ರೇಣುಕಾ ಮಾದರ್, ಸತೀಶ್ ಚೌವ್ಹಾಣ್ ಮೊದಲಾದವರು ಉಪಸ್ಥಿತರಿದ್ದರು.