Slide
Slide
Slide
previous arrow
next arrow

ಜಿಲ್ಲಾ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಮಂಡನೆ: ಅಭಿವಂದನಾ ಕಾರ್ಯಕ್ರಮ

300x250 AD

ಹೊನ್ನಾವರ: ಕಳೆದ ಡಿಸೆಂಬರ 27 ಮತ್ತು 28 ರಂದು ಹೊನ್ನಾವರದಲ್ಲಿ ಯಶಸ್ವಿಯಾಗಿ ನಡೆದ ಉತ್ತರ ಕನ್ನಡ ಜಿಲ್ಲಾ 23ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕ ಪತ್ರ ಮಂಡನೆ ಹಾಗೂ ಸಮ್ಮೇಳನ ಸಂಘಟನೆಯಲ್ಲಿ ಸಹಕರಿಸಿದವರಿಗೆ ಅಭಿವಂದನಾ ಕಾರ್ಯಕ್ರಮ ಜನವರಿ 18 ರಂದು ಮುಂಜಾನೆ 11:00 ಗಂಟೆಗೆ ಹೊನ್ನಾವರದ ತಾಲೂಕು ಪಂಚಾಯತ ಸಭಾಭವನದಲ್ಲಿ ನಡೆಯಲಿದೆ.

ಸಮ್ಮೇಳನ ನಡೆದ ನಂತರ ಅದೇ ಸ್ಥಳದಲ್ಲಿ ಆ ಸಮ್ಮೇಳನದ ಲೆಕ್ಕಪತ್ರ ಮಂಡಿಸಿ ಸಾರ್ವಜನಿಕವಾಗಿ ಒಪ್ಪಿಸುವುದು ನಮ್ಮ ಜವಾಬ್ದಾರಿ. ನಮ್ಮ ಅವಧಿಯಲ್ಲಿ ಅದನ್ನು ಚಾಚು ತಪ್ಪದೆ ಮಾಡಿಕೊಂಡು ಬಂದಿದ್ದೇವೆ. ಆ ಹಿನ್ನೆಲೆಯಲ್ಲಿ ಹೊನ್ನಾವರದಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಮಂಡಿಸಲಾಗುವುದು. ಹಾಗೂ ಇದೇ ಸಂದರ್ಭದಲ್ಲಿ ಸಮ್ಮೇಳನದ ಸಂಘಟನೆಯಲ್ಲಿ ಸಹಕರಿಸಿದವರಿಗೆ ಹಾಗೂ ತನು-ಮನ-ಧನಗಳಿಂದ ನೆರವಾದವರಿಗೆ ಅಭಿವಂದನೆ ಸಲ್ಲಿಸಲಾಗುವುದು.

300x250 AD

ಈ ಸಭೆಯಲ್ಲಿ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಸರ್ವ ಪದಾಧಿಕಾರಿಗಳು , ಕಸಾಪ ಹೊನ್ನಾವರ ತಾಲೂಕಾ ಘಟಕದ ಎಲ್ಲ ಪದಾಧಿಕಾರಿಗಳು, ಹಿರಿ-ಕಿರಿಯ ಸಾಹಿತಿಗಳು , ಕಸಾಪ ಆಜೀವ ಸದಸ್ಯರು, ಮಾಧ್ಯಮ ಬಂಧುಗಳು, ಜನಪ್ರತಿನಿಧಿಗಳು ಉಪಸ್ಥಿತರಿರುವಂತೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್ ವಾಸರೆ, ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ಪಿ.ಆರ್. ನಾಯ್ಕ, ಜಾರ್ಜ್ ಫರ್ನಾಂಡೀಸ್ , ಗೌರವ ಕೋಶಾಧ್ಯಕ್ಷ ಮುರ್ತುಜಾ ಹುಸೇನ, ಕಸಾಪ ಹೊನ್ನಾವರ ತಾಲೂಕು ಘಟಕದ ಅಧ್ಯಕ್ಷ ಎಸ್.ಎಚ್. ಗೌಡ ಮನವಿ ಮಾಡಿದ್ದಾರೆ.

Share This
300x250 AD
300x250 AD
300x250 AD
Back to top