Slide
Slide
Slide
previous arrow
next arrow

ಸಂಸದರ ಹೇಳಿಕೆ ಶಾಂತಿಭಂಗಕ್ಕೆ ಕಾರಣವಾಗದಿರಲಿ: ಸಾಯಿ ಗಾಂವ್ಕರ್

300x250 AD

ಕುಮಟಾ: ಸಂಸದರ ರಕ್ತದ ದಾಹ ಇಂಗದೆ ಇರಬಹುದು.ಸಂಸದರ ಹೇಳಿಕೆಯಿಂದ ಯಾರೂ ಕೂಡ ವಿಚಲಿತರಾಗಿ ಕಾನೂನು ಸುವ್ಯವಸ್ಥೆಗೆ ದಕ್ಕೆ ತರಬಾರದು ಎಂದು ಜಿಲ್ಲೆಯ ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳುತ್ತೇವೆ ಎಂದು ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾವಂಕರ ಹೇಳಿದ್ದಾರೆ.

ಸಂಸದ ಅನಂತಕುಮಾರ್ ಹೆಗಡೆ ಕುಮಟಾ ಸಭೆಯಲ್ಲಿ ಮಾಡಿರುವ ಪ್ರಚೋದಕರ ಭಾಷಣ, ಹೇಳಿಕೆಗಳ ಕುರಿತು ಪ್ರತಿಕ್ರಿಯಿಸಿರುವ ಅವರು, ಹನಿ ಹನಿ ರಕ್ತಕ್ಕೂ ನ್ಯಾಯ ದೊರಕಿಸುವ ಮಾತನ್ನು ಹೇಳಿ ಗಲಭೆ ಎಬ್ಬಿಸಿ ಕಾಣೆಯಾಗಿದ್ದ ಸಂಸದರು ಪ್ರತ್ಯಕ್ಷವಾಗಿದ್ದಾರೆ. ಪರೇಶ್ ಮೇಸ್ತನ ಗಲಭೆಯಲ್ಲಿ ಕೇಸ್ ಹಾಕಿಸಿಕೊಂಡು ಕೋರ್ಟ್‌ಗೆ ಅಲೆದಾಡುತ್ತಿರುವ ಯುವಕರು ಸಂಸದರ ಮನೆ ಮುಂದೆ ಧರಣಿ ಕೂರಬೇಕು. ಕೋರ್ಟ್‌ಗೆ ಅಲೆದಾಡುತ್ತಿರುವ ಪ್ರತಿ ಯುವಕರಿಗೂ ನ್ಯಾಯ ದೊರಕಿಸಲಿ ಎಂದಿದ್ದಾರೆ.

300x250 AD

ಮುಂದುವರೆದು ಮಾತನಾಡಿದ ಅವರು, ದೇಶದ ಐಕ್ಯತೆಗಾಗಿ ಕಾಂಗ್ರೆಸ್‌ನ ಎಷ್ಟೋ ಮಹಾನ್ ನಾಯಕರು ತಮ್ಮ ಪ್ರಾಣ ಅರ್ಪಣೆ ಮಾಡಿದ್ದಾರೆ. ಶಾಂತಿ-ಸುವ್ಯವಸ್ಥೆ ಕಾಪಾಡಲು ಕಾಂಗ್ರೆಸ್ ಸರ್ಕಾರ ಬದ್ದವಾಗಿದೆ. ಸಂಸದರ ಹೇಳಿಕೆಯಿಂದ ಸಾರ್ವಜನಿಕರು ವಿಚಲಿತರಾಗಿ ಯಾವುದೇ ಕಾರಣಕ್ಕೂ ಶಾಂತಿ ಭಂಗ ಮಾಡಬಾರದು,ಎಲ್ಲ ಸಮುದಾಯಗಳಿಗೂ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.

Share This
300x250 AD
300x250 AD
300x250 AD
Back to top