ಹಳಿಯಾಳ: ಕೆಎಲ್ಎಸ್ ವಿಡಿಐಟಿ ಹಳಿಯಾಳದ ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾರತ ಸರ್ಕಾರದ ಸಿ- ಡಾಕ್ ಹೈದರಾಬಾದ್ ಆಯೋಜಿಸಿದ್ದ “ಪ್ರೋಗ್ರಾಮೆಟಿಕ್ ಅಪ್ರೋಚ್ ಟು ಸೈಬರ್ ಸೆಕ್ಯೂರಿಟಿ ” ಎಂಬ ವಿಷಯದ ಕುರಿತು ಆನ್ಲೈನ್ ಕೋರ್ಸ್ ಸಂಪೂರ್ಣಗೊಳಿಸಿ ಪ್ರಮಾಣ ಪತ್ರ ಪಡೆದುಕೊಂಡಿದ್ದಾರೆ.
ಒಂಬತ್ತು ಪ್ರಾಧ್ಯಾಪಕರು ಈ ಕೋರ್ಸನ್ನು ಸಂಪೂರ್ಣಗೊಳಿಸಿ “ಸ್ವರ್ಣ ಪ್ರಮಾಣ ಪತ್ರ”ವನ್ನು ಪಡೆದುಕೊಂಡಿದ್ದಾರೆ. 131 ವಿದ್ಯಾರ್ಥಿಗಳು ಕೋರ್ಸಿಗೆ ನೊಂದಾಯಿಸಿದ್ದು, ಪ್ರಥಮ ಹಂತದಲ್ಲಿ 20 ವಿದ್ಯಾರ್ಥಿಗಳು ಪ್ರಮಾಣ ಪತ್ರವನ್ನು ಪಡೆದುಕೊಂಡಿದ್ದು, ಎರಡನೇ ಹಂತದಲ್ಲಿ ಉಳಿದ ವಿದ್ಯಾರ್ಥಿಗಳು ಪ್ರಮಾಣ ಪತ್ರವನ್ನು ಪಡೆದುಕೊಳ್ಳಲಿದ್ದಾರೆ. ಸೈಬರ್ ಭದ್ರತೆಯ ರಚನೆ, ಕಾರ್ಯನಿರ್ವಹಣೆ ಕುರಿತು ಮಾಹಿತಿ ನೀಡುವುದನ್ನು ಈ ಕೋರ್ಸ್ ಒಳಗೊಂಡಿದೆ. ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ. ಶ್ರೀನಿವಾಸ ದೇಶಪಾಂಡೆ ಮತ್ತು ಪ್ರೊ. ಪ್ರಾಣೇಶ್ ಕುಲಕರ್ಣಿ ಮಾರ್ಗದರ್ಶನದಲ್ಲಿ ಸಿ-ಡಾಕ್ ಹೈದರಾಬಾದಿನ ಪ್ರಮಾಣೀಕೃತ ಈ ಕೋರ್ಸನ್ನು ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಪೂರ್ಣಗೊಳಿಸಿದ್ದಾರೆ. ಮಹಾವಿದ್ಯಾಲಯವು ಸಿ -ಡಾಕ್ ಹೈದರಾಬಾದ್ ನೊಂದಿಗೆ ಒಡಂಬಡಿಕೆಯನ್ನು ಹೊಂದಿದ್ದು, ಸೈಬರ್ ಭದ್ರತೆ ಕ್ಷೇತ್ರದಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಕಾರ್ಯನಿರತವಾಗಿದೆ.
ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಸೈಬರ್ ಭದ್ರತೆ ಕ್ಷೇತ್ರದಲ್ಲಿ ಕೌಶಲ್ಯ ಪಡೆಯುತ್ತಿರುವುದು ಸಂತಸ ತಂದಿದೆ ಎಂದು ಆಡಳಿತ ಮಂಡಳಿ ಅಧ್ಯಕ್ಷ ವಿನಾಯಕ ಲೋಕುರ ಮತ್ತು ಪ್ರಾಚಾರ್ಯ ಡಾ. ವಿ ಎ ಕುಲಕರ್ಣಿ ತಿಳಿಸಿದ್ದಾರೆ. ಕಂಪ್ಯೂಟರ್ ಸೈನ್ಸ್ ( ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ) ವಿಭಾಗ ಮುಖ್ಯಸ್ಥ – ಡಾ. ವೆಂಕಟೇಶ್, ಡೀನ್ – ಪ್ರೊ ಪೂರ್ಣಿಮಾ ರಾಯ್ಕರ್ ಮತ್ತು ಸಿಬ್ಬಂದಿಗಳು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.