Slide
Slide
Slide
previous arrow
next arrow

ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನೆ ಕುರಿತು ಪೂರ್ವಭಾವಿ ಸಭೆ ನಡೆಸಲು ಮನವಿ

300x250 AD

ದಾಂಡೇಲಿ : ಜ: 26 ರಂದು ನಗರಸಭೆಯ ಆವರಣದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನೆ ಮಾಡುವ ನಿಟ್ಟಿನಲ್ಲಿ ಹಾಗೂ ನಗರಕ್ಕೆ ಅಂಬೇಡ್ಕರ್ ಮೂರ್ತಿಯನ್ನು ಸಂಭ್ರಮ, ಸಡಗರದಿಂದ ಮೆರವಣಿಗೆಯ ಮೂಲಕ‌ ತರುವುದರ ಕುರಿತು ಚರ್ಚಿಸಲು ಪೂರ್ವಭಾವಿ ಸಭೆಯನ್ನು ಕರೆಯಬೇಕೆಂದು ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನಾ ಸಮಿತಿಯು ಶುಕ್ರವಾರ‌ ನಗರ ಸಭೆಗೆ ಭೇಟಿ ನೀಡಿ ಮನವಿ‌ ಮಾಡಿದೆ.

ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನಾ‌‌‌ ಸಮಿತಿಯ ಅಧ್ಯಕ್ಷರಾದ ರಾಜಶೇಖರ.ಐ.ಎಚ್ ಅವರ ನೇತೃತ್ವದ‌ಲ್ಲಿ ಮೂರ್ತಿ ಪ್ರತಿಷ್ಠಾಪನಾ ಸಮಿತಿ ಹಾಗೂ ವಿವಿಧ ದಲಿತ ಪರ ಸಂಘಟನೆಗಳ ಪದಾಧಿಕಾರಿಗಳನ್ನು ಒಳಗೊಂಡ ನಿಯೋಗವು ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಅನಿಲ್ ನಾಯ್ಕರ್ ಹಾಗೂ ಪೌರಾಯುಕ್ತರ ಅನುಪಸ್ಥಿತಿಯಲ್ಲಿ ನಗರಸಭೆಯ ವ್ಯವಸ್ಥಾಪಕರಾದ ಪರಶುರಾಮ್ ಶಿಂದೆ ಅವರನ್ನು ಭೇಟಿ‌ ಮಾಡಿ ಚರ್ಚೆ ನಡೆಸಿತು. ಜನವರಿ 26ರಂದು ಮೂರ್ತಿ ಪ್ರತಿಷ್ಠಾಪನೆಗೆ ದಿನ ನಿಗದಿ ಪಡಿಸಿದ್ದು ಸಂತಸದ ವಿಚಾರ. ಆದರೆ ಅಂಬೇಡ್ಕರ್ ಮೂರ್ತಿಯನ್ನು ನಗರಕ್ಕೆ ತರುವ ದಿನ ಸಂಭ್ರಮ, ಸಡಗರದಿಂದ ಅದ್ದೂರಿ ಮೆರವಣಿಗೆಯ ಮೂಲಕ ತರಲು ನಗರ ಸಭೆ ಮುಂದಾಗಬೇಕಾಗಿದೆ. ಈ ನಿಟ್ಟಿನಲ್ಲಿ ಮೂರ್ತಿ ತರುವ ದಿನ ಹಾಗೂ ಪ್ರತಿಷ್ಠಾಪನೆಯ ದಿನ ಹಮ್ಮಿಕೊಳ್ಳಬೇಕಾದ ಕಾರ್ಯಕ್ರಮಗಳ ಕುರಿತಂತೆ ಚರ್ಚಿಸಲು ಪೂರ್ವಭಾವಿ ಸಭೆಯನ್ನು ಕರೆಯಬೇಕೆಂದು ನಗರ ಸಭೆಗೆ ಮೂರ್ತಿ ಪ್ರತಿಷ್ಟಾಪನಾ‌ ಸಮಿತಿ ಮನವಿ ಮಾಡಿದೆ.

300x250 AD

ನಿಯೋಗದಲ್ಲಿ ಪ್ರಮುಖರಾದ ರೇಣುಕಾ‌ ಬಂದಂ, ಚಂದ್ರಕಾಂತ‌ ನಡಿಗೇರ, ಸತೀಶ್ ನಾಯ್ಕ, ದೇವೆಂದ್ರ ಮಾದರ, ಅಪ್ಪಸಾಬ್ ಕಾಂಬಳೆ, ಗೋವಿಂದ ಮೆಲಗೇರಿ, ಇಲಿಯಾಸ ಕಾಟಿ, ರೇಣುಕಾ ಭಜಂತ್ರಿ, ಸತೀಶ್ ಚೌವ್ಹಾಣ್, ರವಿ‌ ಮಾಳಕರಿ, ದತ್ತು ಮಾಳಗೆ, ರವಿ ಚಾಟ್ಲಾ, ಮಂಜು ರಾಥೋಡ್, ಆಯಿಷಾ ಮೊಕಾಶಿ, ಸುನೀಲ್ ಕಾಂಬಳೆ, ರೇಣುಕಾ ಮಾದರ, ಸರಸ್ವತಿ ರಜಪೂತ್, ರಾಜಶೇಖರ‌ ನಿಂಬಾಳ್ಕರ್, ಅನಿಲ್ ಕಾಂಬಳೆ, ಹೊನ್ನೂರಪ್ಪ ಜರಿ, ಶ್ರೀನಿವಾಸ ಹರಿಜನ, ಶಿವಕುಮಾರ್ ಕಾಂಬಳೆ, ಆಕಾಶ್ ಕಾಂಬಳೆ, ಗೀತಾ ಸರನಾಯಕ, ಜಾಫರ್, ಲಕ್ಷ್ಮೀ ವಡ್ಡರ ಮೊದಲಾದವರು ಹಾಗೂ ವಿವಿಧ ದಲಿತ ಪರ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top