ಶಿರಸಿ: ಇಲ್ಲಿನ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯ ನಾಲ್ವರು ವಿದ್ಯಾರ್ಥಿಗಳಾದ ಕುಮಾರ್ ವಿನೀತ್ ಹೆಗಡೆ, ಕುಮಾರ್ ಸ್ಕಂದ ಶೆಟ್ಟಿ, ಕುಮಾರ್ ಪ್ರೀತಮ್ ವೈದ್ಯ, ಕುಮಾರಿ ಅದಿತಿ ನಾಯ್ಕ ಅಂಚೆ ಇಲಾಖೆಯ ದೀನ್ ದಯಾಳ್ ಸ್ಪರ್ಶ ಯೋಜನೆ ಮೊದಲ ಸುತ್ತಿನ ಪರೀಕ್ಷೆಗಳಿಗೆ ಆಯ್ಕೆಯಾಗಿ ನಂತರ, ಕಾರ್ಯಯೋಜನೆ (ಪ್ರಾಜೆಕ್ಟ್ )ಸಲ್ಲಿಕೆಯಲ್ಲೂ ಆಯ್ಕೆಯಾಗಿದ್ದು, ದೀನ್ ದಯಾಳ್ ಸ್ಪರ್ಶ ಯೋಜನೆ ವಿದ್ಯಾರ್ಥಿವೇತನಕ್ಕೆ ಅರ್ಹರಾಗಿದ್ದಾರೆ.
ಈ ವಿದ್ಯಾರ್ಥಿಗಳಿಗೆ ಶಾಲೆಯ ಶಿಕ್ಷಕಿಯರಾದ ಶ್ರೀಮತಿ ಮುಕ್ತಾ ನಾಯ್ಕ ಹಾಗೂ ಶ್ರೀಮತಿ ಅನಿತಾ ಭಟ್ ,ಮಾರ್ಗದರ್ಶನ ನೀಡಿದರೆ,ಈ ವಿದ್ಯಾರ್ಥಿಗಳಿಗೆ ಅಂಚೆ ಇಲಾಖೆಯ ಫಿಲಾಟಲಿ ಸಂಯೋಜಕರಾದ ಮಂಜುನಾಥ ಖಾರ್ವಿ ಹಾಗೂ ಸೀನಿಯರ್ ಫಿಲಟೆಲಿಸ್ಟ್ ವಿ.ಎಸ್. ಹೆಗಡೆ, ಪ್ರೊ.ನರಸಿಂಹಮೂರ್ತಿ ಸಲಹೆ ನೀಡಿರುತ್ತಾರೆ. ಸುಬೇದಾರ ರಾಮು ಅವರ ವಿಶೇಷ ತರಬೇತಿ ಮತ್ತು ಪ್ರೊಜೆಕ್ಟ್ ತಯಾರಿಕೆಯಲ್ಲಿ ಅವರ ಕೊಡುಗೆ ಶ್ಲಾಘನೀಯ.ಅಲ್ಲದೇ ಪಾಲಕರೂ ಕೂಡ ತಮ್ಮ ಮಕ್ಕಳ ಈ ಸಾಧನೆಗೆ ಸಹಕಾರ,ಪ್ರೋತ್ಸಾಹ ನೀಡಿರುತ್ತಾರೆ. ಇವರೆಲ್ಲರಿಗೂ ಲಯನ್ಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, ಲಯನ್ ಸಮೂಹ ಶಾಲೆಗಳ ಪ್ರಾಚಾರ್ಯರು , ಶಿಕ್ಷಕ-ಶಿಕ್ಷಕೇತರ ವೃಂದ, ಲಯನ್ಸ್ ಬಳಗ ಆಶೀರ್ವಾದಪೂರ್ವಕವಾಗಿ ಅಭಿನಂದಿಸಿ, ಶುಭ ಹಾರೈಸಿದ್ದಾರೆ.