Slide
Slide
Slide
previous arrow
next arrow

ಜಾತಿ ಸಮೀಕ್ಷೆ: ವರದಿ ಬಹಿರಂಗಕ್ಕೆ ಆಗ್ರಹ

300x250 AD

ಕಾರವಾರ: ಸರ್ಕಾರ ಕೊಟ್ಯಾಂತರ ರೂ. ಖರ್ಚುಮಾಡಿ ಸಿದ್ದಪಡಿಸಿರುವ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ಜಾತಿ ಸಮೀಕ್ಷಾ ವರದಿ ಬಹಿರಂಗಕ್ಕೆ ಲಿಂಗಾಯುತರು ಹಾಗೂ ಒಕ್ಕಲಿಗರು ವಿರೋಧ ವ್ಯಕ್ತಪಡಿಸುತ್ತಿರುವುದು ಖಂಡನೀಯ. ವರದಿ ಬಹಿರಂಗ ಮಾಡದೆ ಇದ್ದಲ್ಲಿ ಇತರೆ ಜಾತಿಗಳಿಗೆ ಆಗಿರುವ ಅನ್ಯಾಯ ಮುಂದುವರಿಯಲಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಸ್ ಫಕೀರಪ್ಪ ಹೇಳಿದರು.

ಅವರು ಇಲ್ಲಿನ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರ ಕಾಂತರಾಜು ನೇತೃತ್ವದಲ್ಲಿ ಆಯೋಗವನ್ನು ರಚನೆ ಮಾಡಿ ನೂರಾರು ಕೋಟಿ ಖರ್ಚು ಮಾಡಿಸಿ ಇದೀಗ ವರದಿ ಸಿದ್ದಪಡಿಸಿದೆ. ಆದರೆ ಇದೀಗ ಈ ಸಮೀಕ್ಷಾ ವರದಿ ಬಹಿರಂಗಕ್ಕೆ ಲಿಂಗಾಯುತರು ಹಾಗೂ ಒಕ್ಕಲಿಗರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ರಾಜಕೀಯವಾಗಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯ ಸ್ಥಾನಮಾನ ಪಡೆದಿದ್ದು, ಸಮೀಕ್ಷಾ ವರದಿ ಜಾರಿಯಾದಲ್ಲಿ ಈ ಸ್ಥಾನಗಳು ಕಡಿಮೆಯಾಗುವ ಭಯದಲ್ಲಿ ವಿರೋಧ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

300x250 AD

ಸರ್ಕಾರ ಕೋಟ್ಯಾಂತರ ರೂ.ಖರ್ಚು ಮಾಡಿ ವರದಿ ಸಿದ್ದಪಡಿಸಿರುವಾಗ ಅದನ್ನು ಬಹಿರಂಗಪಡಿಸಿ ಇತರೆ ಜಾತಿಗಳಿಗೆ ತಪ್ಪುತ್ತಿರುವ ಸ್ಥಾನಮಾನಗಳು ಸಿಗುವಂತಾಗಬೇಕು. ಜನಸಂಖ್ಯೆ ಆಧಾರದ ಮೇಲೆ ಅಧಿಕಾರ ಹಾಗೂ ಸೌಲಭ್ಯ ಸಿಗುವುದರಿಂದ ಅದು ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗುವಂತಾಗಬೇಕು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿರೋಧವನ್ನು ಲೆಕ್ಕಿಸದೆ ವರದಿ ಜಾರಿ ಮಾಡಬೇಕು ಎಂದರು. ಜಿಲ್ಲೆಯಲ್ಲಿ ಅಧಿಕಾರಿಗಳು ಸಂವಿಧಾನದ ಚೌಕಟ್ಟಿನಲ್ಲಿ ಕೆಲಸ ಮಾಡಲು ಸಾಧ್ಯವಾಗದೆ ಕೆಲವು ರಾಜಕಾರಣಿಗಳಿಂದ ಒತ್ತಡದಲ್ಲಿ ಕೆಲಸ ಮಾಡುವಂತಾಗಿದೆ. ಹೇಳಿದಂತೆ ಮಾಡದೆ ಇದ್ದಲ್ಲಿ ವರ್ಗಾವಣೆ ಮಾಡುತ್ತಾರೆ. ಸರ್ಕಾರ ಇಂತವುಗಳಿಗೆ ಕಡಿವಾಣ ಹಾಕಿ ಸುಗಮವಾಗಿ ಜನರಿಗೆ ಸರ್ಕಾರಿ ಸೌಲಭ್ಯಗಳು ಸಿಗುವಂತೆ ಮಾಡಬೇಖು ಎಂದು ಒತ್ತಾಯಿಸಿದರು. ಈ ವೇಳೆ ವಿಭಾಗೀಯ ಸಂಚಾಲಕ ಎಲಿಷಾ ಎಲಕಪಾಟಿ, ಹುಲಗಪ್ಪ ಭೋವಿವಡ್ಡರ, ಸಂತೋಷ ಕಟ್ಟಿಮನಿ, ಹನುಮಂತ ಕಟ್ಟಿಮನಿ, ಗೋಪಾಲ, ಜುಜೆ ಸಿದ್ದಿ, ಕಲ್ಲಪ್ಪ ಹೋಳಿ ಇನ್ನಿತರರು ಇದ್ದರು.

Share This
300x250 AD
300x250 AD
300x250 AD
Back to top