ಜೋಯಿಡಾ : ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳ ವಿವಿಧ ಯೋಜನೆಗಳ ಕುರಿತಂತೆ ಪ್ರಗತಿ ಪರಿಶೀಲನಾ ಸಭೆಯು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಆನಂದ ಬಡಕುಂದ್ರಿ ಅವರ ಅಧ್ಯಕ್ಷತೆಯಲ್ಲಿ ಗುರುವಾರ ತಾಲೂಕು ಪಂಚಾಯತ್ ಸಭಾಭವನದಲ್ಲಿ ಜರುಗಿತು.
ಸಭೆಯಲ್ಲಿ ಎಂ.ಜಿ.ಎನ್. ಆರ್.ಇ.ಜಿ. ಯೋಜನೆಯ ಪ್ರಗತಿ ಪರಿಶೀಲನೆ, ವಸತಿ ಯೋಜನೆ, 15ನೇ ಹಣಕಾಸು ಯೋಜನೆ ಆರ್ಥಿಕ ಭೌತಿಕ ಪ್ರಗತಿ, ಮಹತ್ವಕಾಂಕ್ಷಿ ತಾಲೂಕು ಕುರಿತು, ಗ್ರಂಥಾಲಯ, ಜಲಜೀವನ್ ಮಿಷನ್ ಪ್ರಗತಿ, ಗ್ರಾಮ ಪಂಚಾಯತ್ ಸಿಬ್ಬಂದಿ ವೇತನ, ಗ್ರಾಮ ಪಂಚಾಯತ್ ತೆರಿಗೆ ವಸೂಲಿ ಪರಿಷ್ಕರಣೆ, ಸ್ವಚ್ಛ ಭಾರತ ಮಿಷನ್ ಗೆ ಸಂಬಂಧಿಸಿದಂತೆ, ಸಕಾಲ ದಾಖಲಾತಿ, ಅಮೃತ ಗ್ರಾಮ ಪಂಚಾಯಿತಿ, ಸಾಮಾಜಿಕ ಲೆಕ್ಕ ಪರಿಶೋಧನೆ ಹಾಗೂ ಸ್ಥಳೀಯ ಲೆಕ್ಕಪರಿಶೋಧನಾ ವರದಿ ಮತ್ತು ಆಕ್ಷೇಪಣೆ, ಹೆಸ್ಕಾಂ ಬಿಲ್ ಬಾಕಿ ಹಾಗೂ ಗ್ರಾಮ ಪಂಚಾಯಿತಿಯ ಇನ್ನಿತರ ವಿಷಯಗಳ ಬಗ್ಗೆ ಸಭೆಯಲ್ಲಿ ಪ್ರಗತಿ ಪರಿಶೀಲನೆ ನಡೆಸಿ ಮಾಹಿತಿಯನ್ನು ಪಡೆದುಕೊಳ್ಳಲಾಯಿತು.
ಸಭೆಯಲ್ಲಿ ತಾಲೂಕು ಪಂಚಾಯಿತಿಯ ಅಧಿಕಾರಿಗಳು, ಸಿಬ್ಬಂದಿಗಳು, ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಯ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು ಮತ್ತು ಕಾರ್ಯದರ್ಶಿಗಳು ಭಾಗವಹಿಸಿದ್ದರು