ಯಲ್ಲಾಪುರ: ತಾಲೂಕಿನ ಕಣ್ಣಿಗೇರಿಯ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸೋಮವಾರ ಸಂಜೆ ನಡೆಯಿತು. ಗ್ರಾಪಂ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ಮಕ್ಕಳ ಕಲಿಕೆಯ ಮೌಲ್ಯಮಾಪನ,ಪಠ್ಯೇತರ ಚಟುವಟಿಕೆಯಲ್ಲಿನ ಕೌಶಲ್ಯ ಅನಾವರಣಕ್ಕೆ ವಾರ್ಷಿಕೋತ್ಸವ ಸಹಾಯಕಾರಿ ಎಂದರು.
ಉದ್ಯಮಿ ಬಾಲು ನಾಯಕ, ತಾಪಂ ಮಾಜಿ ಅಧ್ಯಕ್ಷ ರವಿ ಕೈಟ್ಕರ್,ಗ್ರಾಪಂ ಸದಸ್ಯ ವಾಸುದೇವ ಮಾಪ್ಸೇಕರ್,ಸಾಮಾಜಿಕ ಕಾರ್ಯಕರ್ತ ಅಣ್ಣಪ್ಪ ಡಿ. ನಾಯ್ಕ,ಶಿಕ್ಷಣ ಸಂಯೋಜಕ ಪ್ರಶಾಂತ ಜಿ ಎನ್,ಮುಖ್ಯಾಧ್ಯಾಪಕ ಶ್ರೀಕಾಂತ ವೈದ್ಯ,ಶಿಕ್ಷಕ ಹರೀಶ ನಾಯ್ಕ ಮುಂತಾದವರು ಭಾಗವಹಿಸಿದ್ದರು