ಯಲ್ಲಾಪುರ: ಮಂಚಿಕೇರಿಯಿಂದ ತೋಳಗೋಡ, ಹರಿಗದ್ದೆ, ಹಿತ್ಲಳ್ಳಿ ಮೂಲಕ ಶಿರಸಿ ರಸ್ತೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಹದಗೆಟ್ಟಿರುವುದನ್ನು ಖಂಡಿಸಿ, ರಸ್ತೆ ದುರಸ್ತಿಗೆ ಆಗ್ರಹಿಸಿ ಗ್ರಾಮಸ್ಥರು ಮಂಗಳವಾರ ಗ್ರೇಡ್ 2 ತಹಶಿಲ್ದಾರ ಸಿ.ಜಿ.ನಾಯ್ಕ ಮೂಲಕ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು.
ಸಲ್ಲಿಸಿದ ಮನವಿಯಲ್ಲಿ, ಕಳೆದ ಹಲವಾರು ವರ್ಷಗಳಿಂದ ರಸ್ತೆ ಪೂರ್ತಿ ಹಾಳಾಗಿದ್ದು,ಜನ ವಾಹನ ಓಡಾಡಲು ಪರದಾಡುತ್ತಿದ್ದಾರೆ. ಶಾಸಕರಿಗೆ ದೂರಿದರೆ, ಗುತ್ತಿಗೆದಾರ ಕೆಲಸ ಮಾಡುತ್ತಿಲ್ಲ ಎಂದು ಜಾರಿಕೊಂಡಿದ್ದಾರೆ. ಕಾರಣ ಜನವರಿ 8ರೊಳಗೆ ರಸ್ತೆ ದುರಸ್ತಿಗೆ ಕ್ರಮ ಆಗದೇ ಇದ್ದಲ್ಲಿ ಜ.11 ರಂದು ಯಲ್ಲಾಪುರ ಶಿರಸಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗುತ್ತದೆ. ಬರಲಿರುವ ಚುನಾವಣೆಯಲ್ಲಿ ಮತಗಟ್ಟೆಗಳಿಗೆ ತೆರಳದೇ ಸಾಮೂಹಿಕವಾಗಿ ಮತದಾನ ಬಹಿಷ್ಕರಿಸಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಸ್ಥಳಿಯ ಪ್ರಮುಖರಾದ ಎಂ.ಕೆ.ಭಟ್ಟ ಯಡಳ್ಳಿ,ನಾಗೇಂದ್ರ ಪತ್ರೇಕರ್,ಗೋಪಾಲ ಹೆಗಡೆ,ಮಹಾಬಲೇಶ್ವರ ಭಟ್ಟ,ಮಂಜುನಾಥ ಶೇಟ್,ಶೇಖರ ನಾಯ್ಕ,ವಾಮನ ಗೌಡ,ಶಿವಕುಮಾರ ಭಟ್ಟ,ಗೋಪಾಲ ಶಾಸ್ತ್ರೀ,ಮುಂತಾದವರು ಇದ್ದರು.