Slide
previous arrow
next arrow

ಹಿಜಾಬ್ ನಿಷೇಧ ಹಿಂಪಡೆಯಲು ಮುಂದಾದ ಕಾಂಗ್ರೆಸ್: ರಾಮು ನಾಯ್ಕ್ ಟೀಕೆ

300x250 AD

ಯಲ್ಲಾಪುರ: ಅಲ್ಪಸಂಖ್ಯಾತರ ಓಲೈಸಲು ಕಾಂಗ್ರೆಸ್ ಹಿಜಾಬ್ ನಿಷೇಧ ಹಿಂಪಡೆಯಲು ಮುಂದಾಗಿದೆ ಎಂದು ಬಿಜೆಪಿ ಮುಖಂಡ ರಾಮು ನಾಯ್ಕ ಟೀಕಿಸಿದ್ದಾರೆ.

ಅವರು ಈ ಕುರಿತು ಬುಧವಾರ ಹೇಳಿಕೆ ನೀಡಿ, ಕರ್ನಾಟಕ ಕಾಂಗ್ರೆಸ್ಸಿನಲ್ಲಿ ಹಿಜಾಬ್ ವಿಷಯದಲ್ಲಿ ಕೋಲಾಹಲ ಎದ್ದಿದೆ. ಹಿಂದಿನ ಸರಕಾರ ನೀಡಿದ್ದ ಆದೇಶ ಹಿಂಪಡೆಯಲು ಸಂಬAಧಪಟ್ಟವರಿಗೆ ಸೂಚನೆ ನೀಡಲಾಗಿದೆ “ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕದ ಅಲ್ಪಸಂಖ್ಯಾತರಿಗೆ ನೀಡಿದ ಬಹಿರಂಗ ಭರವಸೆ. ಹಿಜಾಬ ಆದೇಶ ಹಿಂಪಡೆಯಲು ನಾವು ಯಾರಿಗೂ ಸೂಚನೆ ನೀಡಿಲ್ಲ, ಆ ಬಗ್ಗೆ ಸಂಪುಟ ಸಭೆಯಲ್ಲಿ ಇನ್ನೂ ಚರ್ಚೆನೇ ಆಗಿಲ್ಲ’ ಎಂದು ಉಪ ಮುಖ್ಯಮಂತ್ರಿ ಡಿಕೆಶಿ ಪ್ರತ್ಯೇಕ ಫರ್ಮಾನು ಹೊರಡಿಸಿದ್ದಾರೆ. ಅಲ್ಪ ಸಂಖ್ಯಾತರು ಈಗ ಗೊಂದಲದಲ್ಲಿ ಬಿದ್ದಿದ್ದಾರೆ.

300x250 AD

ಅರವತ್ತು ತಿಂಗಳ ಕನಸು ಕಾಣುತ್ತ ಅಧಿಕಾರದ ಬಂಡಿ ಏರಿದ್ದ ಕಾಂಗ್ರೆಸ್, ಆರೇ ತಿಂಗಳಲ್ಲಿ ಸುಸ್ತು ಹೊಡೆದಿದೆ. ಗ್ಯಾರಂಟಿ ಯೋಜನೆಗಳು ಸರಕಾರದ ನೆತ್ತಿ ಸುಡುತ್ತಿವೆ. ಇದೇ ರೀತಿ ಸಾಗುತ್ತಿದ್ದರೆ, ಅರವತ್ತು ತಿಂಗಳು ಕಾಣುವುದಿರಲಿ ಇವರು ಒಟ್ಟಿಗೆ ಪಾರ್ಲಿಮೆಂಟ್ ಚುನಾವಣೆ ಕಾಣುವುದೂ ಕಷ್ಟ ಎಂದು ರಾಮು ನಾಯ್ಕ ಟೀಕಿಸಿದ್ದಾರೆ.

Share This
300x250 AD
300x250 AD
300x250 AD
Back to top