Slide
Slide
Slide
previous arrow
next arrow

ಪರಿಶ್ರಮಪಟ್ಟರೆ ಸಂಗೀತದಲ್ಲಿ ಸಾಧನೆ ಸಾಧ್ಯ: ದತ್ತ ನೀರಲಗಿ

300x250 AD

ಶಿರಸಿ: ಸಂಗೀತವನ್ನು ಆಯ್ದುಕೊಂಡ ವಿದ್ಯಾರ್ಥಿಗಳು ತುಂಬಾ ಅದೃಷ್ಟವಂತರು ನಮ್ಮ ಗುರಿ ಕೇವಲ ಶಾಲೆಯಲ್ಲಿ ನಡೆಸುವ ಅಥವಾ ಕಾಲೇಜಿನಲ್ಲಿ ನಡೆಯುವ ಪರೀಕ್ಷೆಗಳಲ್ಲಿ ಪಾಸಾಗಿ ಸರ್ಟಿಫಿಕೇಟ್ ತೆಗೆದುಕೊಳ್ಳುವುದು ಮಾತ್ರವಲ್ಲ. ಸಂಗೀತ ಎನ್ನುವುದು ಹೇಳುವಷ್ಟು ಸುಲಭವಲ್ಲ ಆದರೂ ಕೂಡಾ ಇಂದಿನ ದಿನಮಾನದಲ್ಲಿ ಸಂಗಿತಕ್ಕೆ ವಿಷೇಶ ಸ್ಥಾನಮಾನವಿದೆ ಎಂದು ಧಾರವಾಡದ ದತ್ತ ನೀರಲಗಿ ಹೇಳಿದರು.

ಅವರು ಎಂಇಎಸ್ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಸಂಗೀತ ಹಾಗೂ ನೃತ್ಯ ವಿಭಾಗದ ಆಶ್ರಯದಲ್ಲಿ ನಡೆದ ಡಾ. ಸುಲಭಾ ದತ್ ನೀರಲಗಿ ಇವರ ಸ್ಮರಣಾರ್ಥ ಸ್ವರಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜೀವನದಲ್ಲಿ ಪರಿಶ್ರಮ ಎನ್ನುವುದು ಅತ್ಯಂತ ಮುಖ್ಯವಾದದ್ದು. ಪರಿಶ್ರಮವನ್ನು ಪಡದೆ ವಿದ್ಯಾರ್ಥಿ ಜೀವನದಲ್ಲಿ ಏನನ್ನೂ ಕೂಡ ಸಾಧಿಸಲು ಸಾಧ್ಯವಿಲ್ಲ. ಅದರಲ್ಲೂ ವಿಶೇಷವಾಗಿ ಸಂಗೀತದಲ್ಲಿ ಪರಿಶ್ರಮ ಎನ್ನುವುದು ಬೇಕೇ ಬೇಕು ಹಾಗೂ ಸಂಗೀತವನ್ನು ಕಲಿಯುವಾಗ ತಾಳ್ಮೆಯು ಅಧಿಕವಾಗಿ ಇರಲೇಬೇಕು. ಮೊದಲು ಸಂಗೀತ ಕ್ಷೇತ್ರದಲ್ಲಿ ಅಷ್ಟೇನೂ ಅವಕಾಶಗಳು ಇರುತ್ತಿರಲಿಲ್ಲ. ಆದರೆ ಇಂದು ಹಾಗಲ್ಲ ಸಂಗೀತ ಕ್ಷೇತ್ರದಲ್ಲಿ ಬೆಟ್ಟದಷ್ಟು ಅವಕಾಶಗಳು ನಮಗಾಗಿ ಕಾಯುತ್ತಿವೆ. ಆದ್ದರಿಂದ ಸಂಗೀತದ ಉಪಯೋಗವನ್ನು ನಾವೆಲ್ಲರೂ ಪಡೆದುಕೊಳ್ಳೋಣ ಎಂದರು.

ಕಾಲೇಜು ಉಪಸಮಿತಿ ಅಧ್ಯಕ್ಷ ಎಸ್.ಕೆ.ಭಾಗವತ್ ಮಾತನಾಡಿ ಶಿರಸಿ ಸಾಂಸ್ಕೃತಿಕ ರಾಜಧಾನಿಯಾಗಿದ್ದು, ಈ ಹಿಂದೆ ನೃತ್ಯ ಮತ್ತು ಸಂಗೀತವನ್ನು ಕಲಿಯಲು ಅವಕಾಶಗಳು ಬಹಳ ಕಡಿಮೆ ಇತ್ತು. ಆದರೆ ಈಗ ಹಾಗಿಲ್ಲ ಕಲಿಯುವವರಿಗೆ ಸಾಕಷ್ಟು ಅವಕಾಶಗಳು ಶಿರಸಿಯಲ್ಲಿ ಲಭ್ಯವಾಗಿದೆ ಎಂದರು.

300x250 AD

ಎಂಇಎಸ್ ಜಂಟಿ ಕಾರ್ಯದರ್ಶಿ ಶ್ರೀಪಾದ್ ರಾಯ್ಸದ್ ಮಾತನಾಡಿ ನಮ್ಮ ಕಾಲೇಜಿನ ಸಂಗೀತ ವಿಭಾಗದಲ್ಲಿ ಸೇವೆ ಸಲ್ಲಿಸಿರುವ ಅನೇಕ ಪ್ರಾಧ್ಯಾಪಕರು ಕಲಾವಿದರಾಗಿ ರಾಷ್ಟ್ರಮಟ್ಟದಲ್ಲಿ ಹೆಸರನ್ನು ಗಳಿಸಿದ್ದಾರೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಟಿ ಎಸ್ ಹಳೆಮನೆ ಮಾತನಾಡಿ ಗಣಿತ ಕಬ್ಬಿಣದ ಕಡಲೆ ಆದರೂ ಕೂಡ ವಿಶ್ವವಿದ್ಯಾಲಯ ಮಟ್ಟದಲ್ಲಿ ನಮ್ಮ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿ ಎನ್ನುವ ಕಾರಣಕ್ಕಾಗಿ ಸಂಗೀತವನ್ನು ಕಲಿಯುವ ಅವಕಾಶವನ್ನು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನೀಡಿರುವುದು ಹೆಮ್ಮೆಯ ಸಂಗತಿ. ಸಂಗೀತ ಕೇಳುವುದರಿಂದ ಮನಶಾಂತಿ, ನೆಮ್ಮದಿ ದೊರೆಯಲಿದೆ ಎಂದರು.

ವಿಭಾಗದ ಮುಖ್ಯಸ್ಥ ಡಾ. ಕೃಷ್ಣಮೂರ್ತಿ ಭಟ್ ಮಾತನಾಡಿ ಸುಲಭಾ ದತ್ತ ಒಬ್ಬ ಪ್ರಖ್ಯಾತ ಸಂಗೀತಗಾರರು. ಹಾಗೂ ಪದ್ಮಶ್ರೀ ಪುರಸ್ಕೃತರಾದ ಗಂಗೂಬಾಯಿ ಹಾನಗಲ್ ರವರ ಹಿರಿಯ ಶಿಷ್ಯರು ಕೂಡ ಹೌದು. ನಮ್ಮ ಕಾಲೇಜಿನಲ್ಲಿ ಕಳೆದ 1962ರ ದಶಕದಿಂದಲೂ ಸಂಗೀತ ವಿಭಾಗವನ್ನು ನಡೆಸುತ್ತಾ ಬಂದಿದ್ದೇವೆ . ಇಂದು ನಮ್ಮ ಸಂಗೀತ ವಿಭಾಗ ಇಷ್ಟು ಯಶಸ್ವಿಯಾಗಲು ಕಾರಣವೇ ಗುರು ಕೃಪೆ ಗುರು ಇಲ್ಲದ ಜೀವನದಲ್ಲಿ ಎಲ್ಲವೂ ಕೂಡ ಶೂನ್ಯವಾಗಿದೆ ಆದ್ದರಿಂದ ನಮ್ಮ ಜೀವನದಲ್ಲಿ ಗುರುವಿನ ಸ್ಥಾನ ಬಹಳ ದೊಡ್ಡದು ಗುರು ಹಿಂದೆ ಗುರಿ ಮುಂದೆ ಎನ್ನುವ ಹಾಗೆ ಪ್ರತಿಯೊಂದು ಕ್ಷೇತ್ರದಲ್ಲೂ ಕೂಡ ಗುರುವಿನ ಮಾರ್ಗದರ್ಶನ ಅತ್ಯವಶ್ಯಕವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕಿ ಶೈಲಜಾ ಮಂಗಳೂರು, ಪ್ರೊ.ಆರ್ ವಿ ಹೆಗಡೆ, ಕಿರಣ್ ಕಮಲಾಕರ್ ಭಟ್, ಆರ್ ಎನ್ ಭಟ್ ಸುಗಾಮಿ, ಪ್ರೊಫೆಸರ್ ಸಂಜೀವ್ ಪೋತದಾರ್,ಪ್ರೊಫೆಸರ್ ರವಿಂದ್ರ  ಪೋತದಾರ್ ಮಂಜುನಾಥ್ ಮೊಟೆನ್ಸರ್, ಅಜಯ್ ಹೆಗಡೆ ಇತರರು ಉಪಸ್ಥಿತರಿದ್ದರು. ನಂತರ ವಿವಿಧ ಕಲಾವಿದರುಗಳಿಂದ ವಿಭಾಗದ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ಜರುಗಿತು.
Share This
300x250 AD
300x250 AD
300x250 AD
Back to top