ಜೋಯಿಡಾ : ನಾಡಿನ ಆರ್ಥಿಕ ಕ್ಷೇತ್ರಕ್ಕೆ ತನ್ನದೇ ಆದ ರೀತಿಯಲ್ಲಿ ಕೊಡುಗೆಯನ್ನು ನೀಡುತ್ತಾ ಬಂದಿರುವ ಜೋಯಿಡಾ ತಾಲ್ಲೂಕು ಸದಾ ಒಂದಿಲ್ಲ ಒಂದು ಸಮಸ್ಯೆಗಳ ಮೂಲಕವೇ ಬಸವಳಿದಿದೆ.
ಜೋಡಿ ತಾಲೂಕಿನ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಲು ದೇಶ ವಿದೇಶಗಳಿಂದ ಜನ ಬರುತ್ತಾರೆ. ಆದರೆ ಇಲ್ಲಿಯ ಜನತೆ ನ್ಯಾಯಾಲಯದ ಕೆಲಸ ಕಾರ್ಯಗಳಿಗೆ ದಾಂಡೇಲಿಗೆ ಹೋಗಬೇಕಾಗಿದೆ. ಭೌಗೋಳಿಕವಾಗಿ ಅತಿ ದೊಡ್ಡ ತಾಲೂಕಾಗಿರುವ ಜೋಯಿಡಾ ತಾಲೂಕಿಗೆ ಅಗತ್ಯವಾಗಿ ಸಿವಿಲ್ ನ್ಯಾಯಾಲಯ ಬೇಕಾಗಿದೆ. ಇದು ತಾಲೂಕಿನ ಜನತೆಯ ವರ್ಷಗಳಿಂದ ಇರುವಂತಹ ಬೇಡಿಕೆಯು ಆಗಿದೆ. ತಾಲೂಕಿನ ಜನತೆಯ ಬೇಡಿಕೆ ಹಾಗೂ ಅತಿ ಅಗತ್ಯವಾಗಿ ಬೇಕಾಗಿರುವ ಹಿನ್ನೆಲೆಯಲ್ಲಿ ಜೋಯಿಡಾ ತಾಲೂಕಿಗೆ ಸಿವಿಲ್ ನ್ಯಾಯಾಲಯವನ್ನು ಮಂಜೂರು ಮಾಡುವಂತೆ ಮರಾಠಾ ಸಮಾಜದ ಅಧ್ಯಕ್ಷರಾದ ಚಂದ್ರಕಾಂತ ದೇಸಾಯಿ ಮಾಧ್ಯಮದ ಮೂಲಕ ಮನವಿಯನ್ನು ಮಾಡಿದ್ದಾರೆ.