Slide
Slide
Slide
previous arrow
next arrow

ಡಿ.7ಕ್ಕೆ ನಾಮಧಾರಿ ಸಮಾಜದ ದಹಿಂಕಾಲ ಉತ್ಸವಕ್ಕೆ ಚಾಲನೆ

300x250 AD

ಅಂಕೋಲಾ: ಪ್ರತಿಷ್ಠಿತ ನಾಮಧಾರಿ ಸಮಾಜದ ದಹಿಂಕಾಲ ಉತ್ಸವವು ಡಿ.7ರ ಗುರುವಾರ ಸಾಯಂಕಾಲ ಚಾಲನೆದೊರೆಯಲಿದ್ದು ಡಿ. 8 ರ ಶುಕ್ರವಾರದಂದು ಸಂಪನ್ನಗೊಳ್ಳಲಿದೆ ಎಂದು ನಾಮಧಾರಿ ಸಮಾಜ ದಹಿಂಕಾಲ ಉತ್ಸವ ಸಮಿತಿಯ ಅಧ್ಯಕ್ಷ ಮಂಜುನಾಥ ನಾಯ್ಕ ಹೇಳಿದರು.

ಅವರು ಪಟ್ಟಣದ ನಾಮಧಾರಿ ಕಲ್ಯಾಣ ಮಂಟಪದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ರಾಜ್ಯದಲ್ಲೇ ಪ್ರಸಿದ್ದಿ ಹೊಂದಿರುವ ನಾಮಧಾರಿ ದಹಿಂಕಾಲ ಉತ್ಸವವನ್ನು ಡಿ.7 ರಂದು ಅದ್ದೂರಿಯಿಂದ ನಡೆಸಲು ತೀರ್ಮಾನಿಸಲಾಗಿದ್ದು, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಾಸಕರಾದ ಸತೀಶ ಸೈಲ್, ಭಿಮಣ್ಣ ನಾಯ್ಕ, ಕೆ.ಜಿ.ನಾಯ್ಕ ಸೇರಿದಂತೆ ಗಣ್ಯಾತೀಗಣ್ಯರು ಆಗಮಿಸಲಿದ್ದಾರೆ. ಉತ್ಸವದ ಮೆರವಣಿಗೆಯಲ್ಲಿ ಜಿಲ್ಲೆ ಹಾಗೂ ನೆರೆ ಜಿಲ್ಲೆಗಳಿಂದ ಆಗಮಿಸುವ ಸ್ತಬ್ಧಚಿತ್ರ ಹಾಗೂ ರೂಪಕಗಳು ವಿಶೇಷ ಆಕಷÀðಣೆ ಮಾಡಲಿದೆ. ಸರ್ವ ಸಮಾಜದವರು ಸಹಕಾರ ನೀಡುವುದರೊಂದಿಗೆ ಉತ್ಸವಕ್ಕೆ ಇನ್ನಷ್ಟು ಮೆರಗು ತರಬೇಕೆಂದು ಅವರು ಹೇಳಿದರು.

ನಂತರ ಮಾತನಾಡಿದ ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯಕ್ಷ ನಾಗೇಶ ನಾಯ್ಕ, ರಾಜ್ಯದಲ್ಲೇ ಹೆಗ್ಗಳಿಕೆಗೆ ಪಾತ್ರರಾಗಿರುವ ನಾಮಧಾರಿ ಸಮಾಜದ ದಹಿಂಕಾಲ ಉತ್ಸವವು ಈ ಹಿಂದೆ ಸಾಮಾಜಿಕ ಪಿಡುಗೊಂದನ್ನು ನಿರ್ಮೂಲನೆ ಮಾಡಲು ಉತ್ಸವವಾಗಿ ರೂಪುಗೊಂಡಿತ್ತು ಇಂದು ಅದೇ ಉತ್ಸವವು ರಾಜ್ಯದ ಗಮನ ಸೆಳೆಯುತ್ತಿದೆ ಎಂದರು. ಕರ್ನಾಟಕ ಆರ್ಯ ಈಡಿಗ ಸಂಘದ ತಾಲೂಕಾಧ್ಯಕ್ಷ ಮಹಾಬಲೇಶ್ವರ ನಾಯ್ಕ ಮಾತನಾಡಿ ನಾಮಧಾರಿ ಸಮಾಜದ ದಹಿಂಕಾಲದ ಉತ್ಸವವು ರಾಜ್ಯದಲ್ಲಿ ನಡೆಯುವ ದೊಡ್ಡ ಉತ್ಸವಗಳಲ್ಲಿ ಒಂದಾಗಿದ್ದು ಸಹಸ್ರಾರು ಜನರ ಕೂಡುವಿಕೆಯಲ್ಲಿ ಉತ್ಸವವು ಹೆಗ್ಗಳಿಕೆಗೆ ಪಾತ್ರವಾಗಿದೆ,ಹಾಗೆಯೇ ನಾಡಿನ ಸಮಸ್ತ ಜನತೆಗೆ ದಹಿಂಕಾಲದ ಉತ್ಸವಕ್ಕೆ ಆಗಮಿಸಿ ಚಂದಗಾಣಿಸಿಕೊಡಬೇಕಾಗಿ ವಿನಂತಿಸಿದರು.

ನಾಮಧಾರಿ ಸಮಾಜದ ಪ್ರಮುಖರಾದ ರಾಜೇಂದ್ರ ನಾಯ್ಕ ಮಾತನಾಡಿ ದಹಿಂಕಾಲ ಉತ್ಸವದಲ್ಲಿ ತಾಲೂಕಿನ ದೊಡ್ಡದೇವರಾದ ವೆಂಕಟರಮಣ ಹಾಗೂ ಗ್ರಾಮದೇವತೆ ಶಾಂತಾದುರ್ಗೆಯ ರಥದ ಮೆರವಣಿಗೆ ಅತ್ಯದ್ಭುತವಾಗಿ ಸಾಗಿ ಉತ್ಸವದ ಮೆರಗನ್ನು ಇನ್ನಷ್ಟು ಹೆಚ್ಚಿಸುತ್ತದೆ ಮತ್ತು ರಥೋತ್ಸವದ ಬಳಿಕ ಶ್ರೀ ವೆಂಕಟರಮಣ ದೇವರ ಸಮ್ಮುಖದಲ್ಲಿ ನಡೆಯುವ ಯಕ್ಷಗಾನ ಯಕ್ಷಪ್ರಿಯರಿಗೆ ಮನರಂಜನೆ ನೀಡಲಿದೆ ಎಂದರು.

300x250 AD

ನಾಮಧಾರಿ ಸಮಾಜ ದಹಿಂಕಾಲ ಉತ್ಸವ ಸಮಿತಿಯ  ಪ್ರಧಾನ ಕಾರ್ಯದರ್ಶಿ, ನ್ಯಾಯವಾದಿ ವಿನಾಯಕ ಎಸ್.ನಾಯ್ಕ ಸ್ವಾಗತಿಸಿದರು. ಸುದ್ದಿಗೋಷ್ಟಿಯಲ್ಲಿ ಡಾ.ಕರುಣಾಕರ್ ನಾಯ್ಕ, ರಾಜೇಶ್ ಎಂ.ನಾಯ್ಕ, ಉದಯ ನಾಯ್ಕ ಹೊನ್ನೆಕೇರಿ, ನಾಗೇಂದ್ರ ಸಿ.ನಾಯ್ಕ, ಏಕನಾಥ ಎಸ್.ನಾಯ್ಕ, ದಾಮೋಧರ ನಾಯ್ಕ, ಶ್ರೀಧರ ನಾಯ್ಕ, ಅನಿಲ ನಾಯ್ಕ, ಪಾಂಡು ನಾಯ್ಕ ಬೆಳಂಬಾರ, ನಾಗರಾಜ ನಾಯ್ಕ, ವಿಘ್ನೇಶ್ ನಾಯ್ಕ,ನಾಗರಾಜ್ ಎಚ್ ನಾಯ್ಕ ಸೇರಿದಂತೆ  ಸಮಿತಿಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

Share This
300x250 AD
300x250 AD
300x250 AD
Back to top