Slide
Slide
Slide
previous arrow
next arrow

ಅರಣ್ಯ ರಕ್ಷಣೆ ಕುರಿತು ವಿಶೇಷ ಕಾರ್ಯಾಗಾರ ಯಶಸ್ವಿ

300x250 AD

ಅಂಕೋಲಾ: ಅರಣ್ಯ ಇಲಾಖೆಯ ಅಂಕೋಲಾ ಉಪ ವಿಭಾಗದಲ್ಲಿ ಅರಣ್ಯ ರಕ್ಷಣೆ ಕುರಿತು ವಿಶೇಷ ಕಾರ್ಯಾಗಾರ ಹಮ್ಮಿಕೊಂಡು, ಅಣಕು ಪ್ರಾತ್ಯಕ್ಷಿಕೆ ಮೂಲಕ ತಿಳುವಳಿಕೆ ನೀಡಲಾಯಿತು.

ಒಣ ಹುಲ್ಲು, ತರಲೆಗಳಿಗೆ ಸಣ್ಣ ಪ್ರಮಾಣದ ಬೆಂಕಿ ತಗುಲಿದಾಗ, ಗಾಳಿಗೆ ವಿರುದ್ಧ ದಿಸೆಯಲ್ಲಿ ಸೊಪ್ಪುಗಳನ್ನು ಬಳಸಿ ಬೆಂಕಿ ಆರಿಸುವುದು. ಎತ್ತರದ ಮರಕ್ಕೆ ಬೆಂಕಿ ತಗುಲಿದಾಗ ಹಾಗೂ ವಿಶಾಲ ಪ್ರದೇಶಗಳಲ್ಲಿ ಬೆಂಕಿ ಹರಡಿಕೊಳ್ಳುತ್ತಿರುವಾಗ ನೀರನ್ನು ಯಾವೆಲ್ಲ ರೀತಿ ಸಿಂಪಡಿಸಬಹುದು ಎಂಬಿತ್ಯಾದಿ ಪ್ರಾತ್ಯಕ್ಷಿಕೆಗಳನ್ನು ತೋರ್ಪಡಿಸಲಾಯಿತು. ಹೊಸಗದ್ದೆ ವಿಎಫ್‌ಸಿ ವ್ಯಾಪ್ತಿಯಲ್ಲಿಯೂ ಕೆಲ ಪ್ರಾತ್ಯಕ್ಷಿಕೆಗಳನ್ನು ನೀಡಿ, ಅರಣ್ಯ ಸಿಬ್ಬಂದಿಗಳಿಗೆ ಬೆಂಕಿ ಶಮನದ ಕುರಿತು ಮಾಹಿತಿ ನೀಡಲಾಯಿತು.

ಈ ಸಂದರ್ಭದಲ್ಲಿ ಎಸಿಎಫ್ ಕೃಷ್ಣ ಅಣ್ಣಯ್ಯ ಗೌಡ ಮಾತನಾಡಿ, ಬೇಸಿಗೆ ಕಾಲ ಹತ್ತಿರ ಬರುತ್ತಿದ್ದು, ನಾನಾ ಕಾರಣಗಳಿಂದ ಅರಣ್ಯದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು, ಅರಣ್ಯ ಸುಟ್ಟು ಹೋಗುವ ಸಾಧ್ಯತೆ ಇರುವುದರಿಂದ ಅದನ್ನು ತಡೆಯಲು ಸಾಕಷ್ಟು ಮುಂಚಿತವಾಗಿ ನಮ್ಮೆಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಈ ಕುರಿತು ಮುಂಜಾಗ್ರತೆ ವಹಿಸುತ್ತಿದ್ದೇವೆ. ಸಾರ್ವಜನಿಕರು ಸಹ ಇಲಾಖೆ ಜೊತೆ ಕೂಡಿಕೊಂಡು, ಅರಣ್ಯ ಸಂಪತ್ತು ನಾಶವಾಗದಂತೆ ಮತ್ತು ನಮ್ಮ ತಾಲೂಕು ಮತ್ತು ಜಿಲ್ಲಾ ವ್ಯಾಪ್ತಿಯಲ್ಲಿ ಯಾವುದೇ ಅಗ್ನಿ ಅವಘಡ ಸಂಭವಿಸದಂತೆ ಸಹಕಾರ ನೀಡುವಂತೆ ಮನವಿ ಮಾಡಿದರು.

300x250 AD

ತಾಲೂಕಿನ ವಿವಿಧ ವಲಯಗಳ ಅರಣ್ಯ ಅಧಿಕಾರಿಗಳಾದ ಗಣಪತಿ ವಿ. ನಾಯಕ ಅಂಕೋಲಾ, ಸುರೇಶ ನಾಯ್ಕ ಹೊಸಕಂಬಿ, ರಾಘವೇಂದ್ರ ಮಲ್ಲಪ್ಪನವರ ರಾಮನಗುಳಿ, ಭವ್ಯಾ ನಾಯಕ ಸೀಬರ್ಡ್ ವಲಯ, ವಿ.ಪಿ.ನಾಯ್ಕ ಮಾಸ್ತಿಕಟ್ಟಾ ವಲಯ ಸೇರಿದಂತೆ ಎಲ್ಲಡೆಯ ಉಪ ವಲಯ ಅರಣ್ಯಾಧಿಕಾರಿಗಳು, ಗಸ್ತು ವನಪಾಲಕರು ಹಾಗೂ ಅರಣ್ಯ ವೀಕ್ಷಕರು ಹಾಜರಿದ್ದರು. ಅಂಕೋಲಾ ಅಗ್ನಿಶಾಮಕ ಪ್ರಭಾರಿ ಠಾಣಾಧಿಕಾರಿ ಗಜಾನನ ನಾಯ್ಕ ಮಾರ್ಗದರ್ಶನದಲ್ಲಿ ಅಗ್ನಿಶಾಮಕ ಸಿಬ್ಬಂದಿಗಳು ವಿವಿಧ ಪ್ರಾತ್ಯಕ್ಷಿಕೆ ಮೂಲಕ ಅಗ್ನಿ ಶಮನದ ವಿಧಾನಗಳ ಬಗ್ಗೆ ತಿಳಿಸಿಕೊಟ್ಟರು.

Share This
300x250 AD
300x250 AD
300x250 AD
Back to top