ಅಂಕೋಲಾ: ಇದೇ ಬರುವ ನ.30 ರಂದು ಗುರುವಾರ ಪ್ರತಿ ವರ್ಷದಂತೆ ಮಾದನಗೇರಿ ಮಹಾಲಸಾ ಸಿದ್ದಿ ವಿನಾಯಕ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ವದ್ಯ ಸಂಕಷ್ಟಿ ಗಣಹವನ ನಡೆಯಲಿದೆ.
ಅಂದು ಮದ್ಯಾಹ್ನ 12.30 ಕ್ಕೆ 108 ತೆಂಗಿನಕಾಯಿ ಗಣಹವನ ಪೂರ್ಣಾಹುತಿ ನಡೆಯಲಿದೆ. ಮದ್ಯಾಹ್ನ 1.30 ಕ್ಕೆ ದರ್ಶನ ಹಾಗೂ ಅನ್ನಸಂತರ್ಪಣೆ ನಡೆಯಲಿದ್ದು, ರಾತ್ರಿ 10 ಗಂಟೆಗೆ ಪೂಜೆ, ದರ್ಶನ ಹಾಗೂ ತೆಂಗಿನಕಾಯಿ ಫಲಸಮರ್ಪಣೆ ಸೇವೆ ನೆರವೇರಲಿದೆ.
ಭಕ್ತಾದಿಗಳು ಕುಟುಂಬ ಸಮೇತರಾಗಿ ಆಗಮಿಸಿ ಮಹೋತ್ಸವದಲ್ಲಿ ಭಾಗವಹಿಸಿ ಜಗನ್ಮಾತೆಯ ಹಾಗೂ ಶ್ರೀ ಸಿದ್ಧಿವಿನಾಯಕನ ಕೃಪೆಗೆ ಪಾತ್ರರಾಗಿ ಶ್ರೀ ಮುಡಿಗಂಧ ಪ್ರಸಾದವನ್ನು ಸ್ವೀಕರಿಸಬಹುದಾಗಿದೆ. ದರ್ಶನ ಮುಖೇನ ಭಜಕರಿಗೆ ತಿಳಿಸಿದ ತೆಂಗಿನಕಾಯಿ ಫಲದ ವ್ಯವಸ್ಥೆಯನ್ನು ಆಫೀಸಿನ ಮೂಲಕ ಮಾಡಲಾಗಿದ್ದು, ನ. 30 ರಂದು ಗುರುವಾರ ರಾತ್ರಿ 7 ಗಂಟೆಯೊಳಗೆ ಹಣ ಪಾವತಿಸಬೇಕು ಅಥವಾ ಫೋನ್ ಮೂಲಕ ತಮ್ಮ ಹೆಸರನ್ನು ನೊಂದ ಕಾಯಿಸಿ ಕೊಳ್ಳಬಹುದು ಎಂದು ಶ್ರೀ ಮಹಾಲಸಾ ಸಿದ್ದಿವಿನಾಯಕ ದೇವಸ್ಥಾನದ ಅಧ್ಯಕ್ಷ ಸುನೀಲ ಪೈ ತಿಳಿಸಿದ್ದಾರೆ.